ಕಲಬುರಗಿ: ಮಳೆಗಾಲ ಆರಂಭವಾಗಿದ್ದು ವಾತಾವರಣದಲ್ಲಿ ಬದಲಾವಣೆಯಿಂದ ಮಕ್ಕಳಲ್ಲಿ ಕೆಲ ಸಮಸ್ಯೆಗಳು ಕಂಡುಬುರುತ್ತವೆ. ಅತಿಸಾರ, ಭೇದಿ, ಅಶಕ್ತತೆ, ವಾಂತಿಯಂತಹ ಮುಂತಾದ ಕೆಲ ಸಾಮಾನ್ಯ ಕಾಯಿಲೆಗಳು ಬರುತ್ತವೆ. ಅಂತಹ ಮಕ್ಕಳಿಗೆ ಜಿಂಕ್ ಮಾತ್ರೆ ಮತ್ತು ಓಆರ್‌ಎಸ್ ದ್ರಾವಣವನ್ನು ನೀಡುವ ಮೂಲಕ ಅತಿಸಾರ, ಬೇಧಿ ತಡೆಗಟ್ಟಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಅಭಿಯಾನ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗ ಇವಗಳ ವತಿಯಿಂದ ಜೂನ್-16 ರಿಂದ ಜುಲೈ-31ರವರೆಗೆ ಜರುಗುತ್ತಿರುವ ‘ತೀವ್ರತರ ಅತಿಸಾರ ಕೊನೆಗಾಣಿಸುವ ಅಭಿಯಾನ-2025ರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಜಿಂಕ್ ಮಾತ್ರೆ ಮತ್ತು ಓಆರ್‌ಎಸ್ ವಿತರಿಸಿ ಮಾತನಾಡಿದ ಅವರು, 2-6 ತಿಂಗಳಿನ ಮಗುವಿಗೆ ಅರ್ಧ ಮತ್ತು 6 ತಿಂಗಳಿನಿಂದ 5 ವರ್ಷದ ಮಕ್ಕಳಿಗೆ ಒಂದು ಜಿಂಕ್ ಮಾತ್ರೆ ನೀಡಬೇಕು, ಇದು ಅತಿಸಾರ ತಡೆಗಟ್ಟುತ್ತದೆ. ಮಕ್ಕಳಿಗೆ ಅಶಕ್ತತೆ ದೂರವಾಗುತ್ತದೆ. ಇಂತಹ ಸಂದರ್ಭದಲ್ಲಿ ಮಗುವಿಗೆ ತಾಯಿಯ ಎದೆಹಾಲು ಮತ್ತು ಪೂರಕ ಆಹಾರ ನೀಡಬೇಕು. ಆಹಾರ ತಯಾರಿಸುವಾಗ ಹಾಗೂ ತಿನ್ನಿಸುವಾಗ ಸ್ವಚ್ಛತೆ ಕಾಪಾಡುವುದು ತುಂಬಾ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಚ್.ಬಿ ಪಾಟೀಲ್, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ಗಂಗಾಜ್ಯೋತಿ ಗಂಜಿ, ಶ್ರೀದೇವಿ ಸಾಗರ, ಮಂಗಲಾ ಚಂದಾಪುರ, ನಾಗೇಶ್ವರಿ ಮುಗಳಿವಾಡಿ, ರೇಶ್ಮಾ ನಕ್ಕುಂದಿ, ಸಂಗಮ್ಮ ಅತನೂರ, ಚಂದಮ್ಮ ಮರಾಠಾ, ಸುಧಾ ಕಟ್ಟಿಮನಿ, ನಾಗಮ್ಮ ಚಿಂಚೋಳಿ, ಸಿದ್ರಾಮ, ವಿಜುಬಾಯಿ, ಸುಲೋಚನಾ, ಸಂಗೀತಾ ಡಿ., ಗೌರಮ್ಮ ಹಾಗೂ ಬಡಾವಣೆಯ ಅನೇಕ ಮಹಿಳೆಯರು, ಸೇರಿದಂತೆ ಅನೇಕರು ಇದ್ದರು.