ನಿಯಮ ಉಲ್ಲಂಘನೆ: ಆಟೊಗೆ 23,500 ರೂ‌. ದಂಡ

ಕಲಬುರಗಿ: ರಸ್ತೆ ಸಂಚಾರ ನಿಯಮಗಳು ಉಲ್ಲಂಘಿಸಿದ್ದ ಆಟೊವೊಂದಕ್ಕೆ ಕಲಬುರಗಿ ಸಂಚಾರ ಠಾಣೆ-2 ಪೊಲೀಸರು ಬರೋಬ್ಬರಿ 23,500 ರೂ. ದಂಡ ವಿಧಿಸಿದ್ದಾರೆ. ಅಲ್ಲದೆ ಆಟೊವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಸೇಡಂ ರಿಂಗ್ ರಸ್ತೆಯಿಂದ ಹಾಗರಗಾ ಕಡೆ ಹೊರಟಿದ್ದ ಆಟೊವನ್ನು ತಡೆದ ಪೊಲೀಸರು ಅದರ ನೋಂದಣಿ ಸಂಖ್ಯೆ ಬಳಸಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪರೀಕ್ಷಿಸಿದ್ದಾರೆ. ಬರೋಬ್ಬರಿ 44 ಉಲ್ಲಂಘನೆಗಳು ಕಂಡು ಬಂದಿವೆ. ಅದರ ರಸೀದಿ ಮುದ್ರಿಸಿದರೆ 10 ಅಡಿಗೂ ಉದ್ದದ ರಸೀದಿ ಬಂದಿದೆ. ಎಂದಿನಂತೆ ವಾಹನಗಳು ತಡೆದು ಸಂಚಾರ ನಿಯಮ […]

Continue Reading

ಮೇ.10 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ

ಸುದ್ದಿ ಸಂಗ್ರಹ ಬೆಂಗಳೂರುಮೇ.10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ರವಿಶಂಕರ್‌ ಗುರೂಜಿ 70ನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ.

Continue Reading

ಬೀದರ್: 2.50 ಲಕ್ಷ ರೂ ಲಂಚ ಪಡೆಯುತ್ತಿದ್ದ ಗ್ರಾಮ ಆಡಳಿತಾಧಿಕಾರಿ ಸೆರೆ  

ಸುದ್ದಿ ಸಂಗ್ರಹ ಜನವಾಡ  ಮನೆಯ ಮ್ಯುಟೇಶನ್ ನೀಡಲು 2.50 ಲಕ್ಷ ರೂ ಲಂಚ ಪಡೆಯುತ್ತಿದ್ದ ಬೀದರ್ ತಾಲೂಕಿನ ಮರಕುಂದಾ ಗ್ರಾಮ ಆಡಳಿತಾಧಿಕಾರಿ ಶಿವಕುಮಾರ ಅವರ ಸಹಚರ ಶರಣಯ್ಯ ಸ್ವಾಮಿ ಮಂಗಳವಾರ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.   ಮರಕುಂದಾ ಗ್ರಾಮದ ಮಹಾದೇವ ಶಾಂತಪ್ಪ ಅವರು ಮನೆಯ ಮ್ಯುಟೇಶನ್‌ಗಾಗಿ ಗ್ರಾಮ ಆಡಳಿತಾಧಿಕಾರಿ ಸಂಪರ್ಕಿಸಿದ್ದರು. ಇದಕ್ಕಾಗಿ ಶಿವಕುಮಾರ ಹಾಗೂ ಶರಣಯ್ಯ ಸ್ವಾಮಿ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.  ಮಹಾದೇವ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ […]

Continue Reading

ಸಚಿವ ಜಮೀರ್ ಮನೆಯಲ್ಲಿ 1.20 ಕೆಜಿ ಚಿನ್ನಾಭರಣ ಕಳ್ಳತನ: ಇಬ್ಬರು ಅರೆಸ್ಟ್

ಸುದ್ದಿ ಸಂಗ್ರಹ ಬೆಂಗಳೂರುಸಚಿವ ಜಮೀರ್ ಅಹ್ಮದ್ ಮನೆಗೆ ಕನ್ನ ಹಾಕಿ ಕೋಟಿ ಮೌಲ್ಯದ ಚಿನ್ನಾಭರಣ ಕದ್ದಿದ್ದ ಕಳ್ಳರನ್ನು ಬಂಧಿಸುವಲ್ಲಿ ಶಿವಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಅಮೀರ್ ಅಹ್ಮದ್, ಅವೀನ್ ಬಂಧಿತ ಆರೋಪಿಗಳು. ಸಚಿವ ಜಮೀರ್ ಮನೆಯಲ್ಲಿ ಕಳೆದ 3 ವರ್ಷದಿಂದ ಹಂತ ಹಂತವಾಗಿ ಕೋಟಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದರು. ಜಮೀರ್ ಆರೋಗ್ಯ ವಿಚಾರಿಸುವ ಸಲುವಾಗಿ ಪದೆ ಪದೆ ಮನೆಗೆ ಬರುತ್ತಿದ್ದ ಅಮೀರ್ 2023ರಿಂದ ನಿರಂತರವಾಗಿ 1 ಕೆಜಿ 200 ಗ್ರಾಂ ಚಿನ್ನಾಭರಣ ಎಗರಿಸಿದ್ದಾನೆ. ಟ್ರಾವೆಲ್ಸ್ ಬ್ಯುಸಿನೆಸ್‌ನಲ್ಲಿ ಲಾಸ್ ಆಗಿದ್ದಕ್ಕೆ […]

Continue Reading

ವಸತಿ ಕಟ್ಟಡಕ್ಕೆ ಡಿಕ್ಕಿ ಹೊಡೆದು ವಿಮಾನ ಪತನ: ಪೈಲೆಟ್ ಸೇರಿ ಮೂವರು ಸಾವು

ಸುದ್ದಿ ಸಂಗ್ರಹ ಬ್ರೆಸಿಲಿಯಾಬ್ರೆಜಿಲ್‌ನ ಬೆಲೊ ಹೊರಿಜಾಂಟೆಯಲ್ಲಿ ಸಣ್ಣ ವಿಮಾನವೊಂದು ವಸತಿ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪೈಲೆಟ್ ಸೇರಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ವಿಮಾನದಲ್ಲಿ ಐದು ಜನರು ಪ್ರಯಾಣಿಸುತ್ತಿದ್ದರು. ನಗರ ಕೇಂದ್ರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಪಂಪುಲ್ಹಾ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದೆ. ಸಾವೊ ಪಾಲೊಗೆ ತೆರಳುತ್ತಿದ್ದ ವಿಮಾನ ಪತನಗೊಂಡಿದೆ. ಅಪಘಾತದಲ್ಲಿ ಪೈಲಟ್ ಮತ್ತು ಸಹ-ಪೈಲಟ್ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ವಿಮಾನ […]

Continue Reading

ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಸೆಸ್ಕಾಂ ಅಧಿಕಾರಿ

ಸುದ್ದಿ ಸಂಗ್ರಹ ಹಾಸನಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುರನಕ್ಕಿ ಗ್ರಾಮದಲ್ಲಿ ಲಂಚ ಪಡೆಯುವ ವೇಳೆ ಸೆಸ್ಕಾಂ ಕಿರಿಯ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನುರನಕ್ಕಿ ಸೆಸ್ಕಾಂ ಬ್ರಾಂಚ್‍ನ ಜ್ಯೂನಿಯರ್ ಇಂಜಿನಿಯರ್ (ಎಇ) ದೇವರಾಜು ಲೋಕಾಯುಕ್ತಗೆ ಸಿಕ್ಕಿಬಿದ್ದಿದ್ದಾರೆ. ಶಶಾಂಕ್ ಎಂಬವರ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ನೀಡಲು ದೇವರಾಜು 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಹಣದ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಶಿಲ್ಪಾ ಮತ್ತು ಸಿಬ್ಬಂದಿ […]

Continue Reading

ಚಿಕ್ಕ ವಯಸ್ಸಿನಲ್ಲಿ ಶಿವನ ಸಾನಿಧ್ಯ ಸೇರಿದ ಬಾಲ ಮುತ್ತೈದೆ ಶಕುಂತಲಾ ದೇವಿ

ಸುದ್ದಿ ಸಂಗ್ರಹ ಶಹಾಬಾದ್ಶಿವನ ಅಪ್ಪಣೆಯಂತೆ ಅಲ್ಪ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿ ಶಿವನ ಸಾನಿಧ್ಯ ಸೇರಿದ ಬಾಲಮುತ್ತೈದೆ ಶಕುಂತಲಾ ದೇವಿ ಕೇವಲ ಚಿಕ್ಕ ಮಗುವಲ್ಲ, ಅವರು ಜಗದಂಬಾ ದೇವಿಯ ಅವತಾರವೇ ಆಗಿದ್ದಾರೆ ಎಂದು ಕಟ್ಟಿಮನಿ ಸಂಸ್ಥಾನ ಹಿರೇಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು. ನಗರದ ಬಾಲುನಾಯಕ ತಾಂಡದ ಮಾತಾ ಶಕುಂತಲಾ ದೇವಿಯ ದೇವಸ್ಥಾನ ಹಾಗೂ ಬಸವಣ್ಣ ದೇವರ ಮೂರ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಾತಾ ಶಕುಂತಲಾ ದೇವಿಯ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ […]

Continue Reading

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ, ಮೋದಿ ಆಡಳಿತಕ್ಕೆ ಐತಿಹಾಸಿಕ ಜಯ: ಡಾ. ಉಮೇಶ ಜಾಧವ

ಕಲಬುರಗಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವಾಗಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತಕ್ಕೆ ಸಿಕ್ಕ ಐತಿಹಾಸಿಕ ಜಯವಾಗಿದೆ ಎಂದು ಮಾಜಿ ಸಂಸದ ಡಾ.ಉಮೇಶ್ ಜಾಧವ ತಿಳಿಸಿದ್ದಾರೆ. ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ತನ್ನ ಪಾರಮ್ಯ ಸಾಧಿಸಿದ್ದು, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಪಕ್ಷದ ಮತ ಶೇಕಡಾವಾರು ಗಣನೀಯವಾಗಿ ಹೆಚ್ಚಿರುವುದು ಜನಾಭಿಪ್ರಾಯದ ಸ್ಪಷ್ಟ ಸಂಕೇತವಾಗಿದೆ […]

Continue Reading

ಅತಿಯಾಗಿ ಸನ್‌ಸ್ಕ್ರೀನ್ ಬಳಕೆ ಮಾಡುವುದರಿಂದಲೂ ವಿಟಮಿನ್ ಡಿ ಕೊರತೆ ಉಂಟಾಗುತ್ತದೆಯೇ ?

ಇಂದಿನ ಜೀವನ ಶೈಲಿಯಲ್ಲಿ ವಿಟಮಿನ್ ಡಿ (Vitamin D) ಕೊರತೆ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಮನೆಯೊಳಗೆ ಹೆಚ್ಚು ಸಮಯ ಕಳೆಯುವುದು, ಸೂರ್ಯನ ಬೆಳಕಿಗೆ ಕಡಿಮೆ ಹೊದ್ದಿಕೊಳ್ಳುವುದು ಮತ್ತು ಅಸಮತೋಲನ ಆಹಾರ ಪದ್ಧತಿ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ತಜ್ಞರ ಪ್ರಕಾರ, ಸೂರ್ಯನ ಬೆಳಕು ವಿಟಮಿನ್ ಡಿಗೆ ಪ್ರಮುಖ ಮೂಲವಾದರೂ, ಎಲ್ಲರಿಗೂ ಇದು ಸಾಕಾಗುವುದಿಲ್ಲ. ಕೆಲವರು ನಿಯಮಿತವಾಗಿ ಸೂರ್ಯನ ಬೆಳಕಿನಲ್ಲಿ ಇದ್ದರೂ ಕೂಡ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ. ಇದಕ್ಕೆ ಚರ್ಮದ ಬಣ್ಣ, ವಯಸ್ಸು, ದೇಹದ ಸ್ಥಿತಿ ಮತ್ತು ವಿಟಮಿನ್ […]

Continue Reading

ಬಾತುಕೋಳಿ ಹಿಡಿಯಲು ಹೋಗಿ ನಾಲ್ವರು ಮಕ್ಕಳು ನೀರುಪಾಲು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಸುದ್ದಿ ಸಂಗ್ರಹ ಚಿಕ್ಕಮಗಳೂರುಬಾತುಕೋಳಿ ಹಿಡಿಯಲು ಹೋಗಿ 5-6 ವರ್ಷದ ನಾಲ್ವರು ಮಕ್ಕಳು ನೀರು ಪಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ಅರಳಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ನಡೆದಿದೆ. ಕೆರೆಯಲ್ಲಿ ಮುಳುಗಿದ್ದ ಒಂದು ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಮೃತರನ್ನು ಮಹಾದಿಯಾ, ಅರುನುಸ್, ನಾಯುಸ್ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ನಾಲ್ಕು ವರ್ಷದ ಅರ್ಮಾನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಕ್ಕಳೆಲ್ಲ ಬಾತುಕೋಳಿ ಕೆರೆಗೆ ಹೋಯಿತು ಎಂದು ಹಿಡಿಯಲು ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. […]

Continue Reading