ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರ ನುಡಿ ನಮನ ನಾಳೆ

ಚಿತ್ತಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ತಾಪುರ ವತಿಯಿಂದ ಏಪ್ರಿಲ್ 8 ರಂದು ಮಂಗಳವಾರ (ನಾಳೆ) ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ತಿಳಿಸಿದ್ದಾರೆ.‌ ಆತ್ಮೀಯ ಸ್ನೇಹಿತರು, ಮಾರ್ಗದರ್ಶಕರು,‌ ಪ್ರೋತ್ಸಾಹದಾಯಕರು, ಸಾಹಿತಿಗಳು, ಲೇಖಕರು, ಶಿಕ್ಷಣ ಪ್ರೇಮಿಗಳು, ಪತ್ರಕರ್ತರಾಗಿದ್ದ ದಿ.ನಾಗಯ್ಯ ಸ್ವಾಮಿ ಅಲ್ಲೂರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ ನಮನ ಸಲ್ಲಿಸಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ […]

Continue Reading

₹10, ₹500 ಹೊಸ ನೋಟು ಬಿಡುಗಡೆ ಶೀಘ್ರ: ಆರ್‌ಬಿಐ

ಮುಂಬೈ: ಶೀಘ್ರವೇ ಮಹಾತ್ಮಗಾಂಧಿ ಅವರ ಭಾವಚಿತ್ರ ಮತ್ತು ಗವರ್ನರ್ ಸಂಜಯ್ ಮಲ್ಹೊತ್ರಾ ಅವರ ಸಹಿ ಇರುವ ₹10 ಮತ್ತು ₹500 ಮುಖಬೆಲೆಯ ಹೊಸ ನೋಟುಗಳ ಸರಣಿಯನ್ನು ಚಲಾವಣೆಗೆ ಬಿಡುಗಡೆ ಮಾಡಲಾಗುವದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ. ಮಹಾತ್ಮಗಾಂಧಿ (ಹೊಸ) ಸರಣಿಯ ನೋಟುಗಳಮಾದರಿಯಲ್ಲಿಯೇ ಈ ಹೊಸ ನೋಟುಗಳು ಇರಲಿವೆ ಎಂದು ಹೇಳಿದೆ. ಗವರ್ನರ್ ಮಲ್ಹೊತ್ರಾ ಅವರ ಸಹಿ ಇರುವ ₹100 ಮತ್ತು ₹200 ಮುಖಬೆಲೆಯ ಹೊಸ ನೋಟುಗಳನ್ನೂ ಚಲಾವಣೆಗೆ ಬಿಡುಗಡೆ ಮಾಡುವದಾಗಿ ಕಳೆದ ತಿಂಗಳು ಆರ್‌ಬಿಐ […]

Continue Reading

ನಾಗಯ್ಯಸ್ವಾಮಿ ಅಲ್ಲೂರ ನಿವಾಸಕ್ಕೆ ಭೇಟಿ: ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ

ಚಿತ್ತಾಪುರ: ಅನಾರೋಗ್ಯದಿಂದ ಮೊನ್ನೆ ನಿಧನರಾದ ಹಿರಿಯ ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರು ಅವರ ಕುಟುಂಬದ ಸದಸ್ಯರನ್ನು ಅಲ್ಲೂರು ಗ್ರಾಮದ ಮನೆಯಲ್ಲಿ ಭೇಟಿ ಮಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಾಂತ್ವಾನ ಹೇಳಿದರು. ನಾಗಯ್ಯಸ್ವಾಮಿ ಅವರ ಸಹೋದರ, ಅವರ ಪುತ್ರಿ ಮತ್ತು ಪುತ್ರನ ಜೊತೆ ಮಾತನಾಡಿದ ಸಚಿವರು ಸಾಂತ್ವನ ಹೇಳಿ ಅವರ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದರು. ಹಿರಿಯ ಪತ್ರಕರ್ತರಾಗಿದ್ದ ನಾಗಯ್ಯಸ್ವಾಮಿ ಅವರು ಪತ್ರಿಕೋದ್ಯಮ ವೃತ್ತಿಯ ಜೊತೆಗೆ ಸಾಹಿತ್ಯಿಕ ಚಟುವಟಿಕೆಯಲ್ಲಿ ತಮ್ಮನ್ನು […]

Continue Reading

ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಮುಖವಾದದ್ದು

ಕಲಬುರಗಿ: ದೇಶದ ಸ್ವಾತಂತ್ರ ಚಳುವಳಿ ಇತಿಹಾಸದಲ್ಲಿ ಮುಖ್ಯವಾಗಿದೆ. ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಆಡಳಿತ ಕಾಲದಲ್ಲಿ ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ವಿರೋಧಿಸಿ ತಮ್ಮ ಅನುಯಾಯಿಗಳೊಂದಿಗೆ ಸಬರಮತಿ ಆಶ್ರಮದಿಂದ ಸಮುದ್ರ ದಡದಲ್ಲಿರುವ ದಂಡಿಯವರೆಗಿನ 240 ಮೈಲಿ ಕಾಲ್ನಡಿಗೆಯಲ್ಲಿ ಕ್ರಮಿಸಿ 1930ರ ಎಪ್ರಿಲ್ 6ರಂದು ಉಪ್ಪನ್ನು ತಯಾರಿಸಿ, ಬ್ರಿಟಿಷರಿಗೆ ಬಿಸಿ ಮುಟ್ಟಿಸುವ ಮೂಲಕ ದೇಶದ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿವೇಕಾನಂದ ಕೋಚಿಂಗ್ ಸೆಂಟರ್’ನಲ್ಲಿ ಬಸವೇಶ್ವರ […]

Continue Reading

ವಾಡಿ: ಡಾ.ಬಾಬು ಜಗಜೀವನರಾಂ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ರಾಷ್ಟ್ರದ ಮಹಾನ್ ನಾಯಕರಾಗಿದ್ದ ಡಾ.ಬಾಬು ಜಗಜೀವನರಾಂ ಅವರ 118ನೇ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಗೌರವ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿಯ ತಾಲೂಕ ಎಸ್’ಸಿ ಮೂರ್ಚಾದ ಮಾಜಿ ಅಧ್ಯಕ್ಷ ರಾಜು ಮುಕ್ಕಣ್ಣ ಮಾತನಾಡಿ, ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆ ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದರು. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ […]

Continue Reading

ಹಿರಿಯ ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರ ನಿಧನ

ಚಿತ್ತಾಪುರ: ತಾಲೂಕಿನ ಅಲ್ಲೂರ (ಬಿ) ಗ್ರಾಮದ ನಿವಾಸಿ ಹಿರಿಯ ಪತ್ರಕರ್ತ, ಲೇಖಕ ನಾಗಯ್ಯಸ್ವಾಮಿ ಅಲ್ಲೂರು (55) ಶನಿವಾರ ಸಂಜೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಚಿತ್ತಾಪುರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಹೋದರ ರಾಚಯ್ಯಸ್ವಾಮಿ ಅಲ್ಲೂರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಅಂತ್ಯಕ್ರಿಯೆ ಅಲ್ಲೂರ (ಬಿ) ಗ್ರಾಮದ ಸ್ವಂತ ಜಮೀನಿನಲ್ಲಿ ರವಿವಾರ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ತಾಲೂಕು […]

Continue Reading

400 ರೂ ಐಸ್‌ ಕ್ರೀಮ್‌ಗಾಗಿ 40 ಸಾವಿರ ಕಳೆದುಕೊಂಡ ಮಹಿಳೆ

ಬೆಂಗಳೂರು: ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಐಸ್‌ ಕ್ರೀಮ್‌ ಖರೀದಿಸಲು ಹೋಗಿ 40 ಸಾವಿರ ರೂ. ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಮಾ.28ರಂದು ಬಿಗ್‌ ಬಾಸ್ಕೆಟ್ ಆ್ಯಪ್‌ನಲ್ಲಿ 2 ಕೆ.ಜಿ. ಕಿತ್ತಲೆ ಹಣ್ಣು, 250 ಗ್ರಾಂ ಕೊತ್ತಂಬರಿ ಸೊಪ್ಪು ಹಾಗೂ 1 ಕೆ.ಜಿ. ಐಸ್‌ ಕ್ರೀಮ್‌ ಅನ್ನು ಮಹಿಳೆ ಆರ್ಡರ್‌ ಮಾಡಿ, ಹಣವನ್ನೂ ಪಾವತಿಸಿದ್ದರು. ಆದರೆ, ಡೆಲಿವರಿ ಬಾಯ್‌ ಐಸ್‌ ಕ್ರೀಮ್‌ ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳನ್ನು ತಂದುಕೊಟ್ಟಿದ್ದ. ಹೀಗಾಗಿ ಗೂಗಲ್‌ನಲ್ಲಿ ಬಿಗ್‌ ಬಾಸ್ಕೆಟ್‌ ಕಸ್ಟಮರ್‌ ಕೇರ್‌ ಸಂಖ್ಯೆ ಪಡೆದು ಕರೆ […]

Continue Reading

ನರೇಗಾ ಕಾರ್ಮಿಕರಿಗೆ 30% ಕೆಲಸದ ಪ್ರಮಾಣ ಕಡಿತ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಏರಿಕೆಯಾಗಿದ್ದು, ಹೆಚ್ಚಿನ ಬಿಸಿಲು ಇರುವ ಕಾರಣ, ಗ್ರಾಮೀಣ ಭಾಗದ ಜೀವನೋಪಾಯದ ಪ್ರಮುಖ ಭಾಗವಾದ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗದ ಕಾರ್ಮಿಕರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 30% ರಷ್ಟು ಹಾಗೂ ಜೂನ್‌ನಲ್ಲಿ 20% ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಘೋಷಿಸಿರುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬೇಸಿಗೆ ದಿನಗಳಲ್ಲಿ ಕೂಲಿ ಕಾರ್ಮಿಕರು ಶಾಖಾಘಾತದಿಂದ, ತಮ್ಮ ಆರೋಗ್ಯದ ಮೇಲೆ ಉಂಟಾಗುವ […]

Continue Reading

ಯುವಕರು ಕೃಷಿಯತ್ತ ಮುಖ ಮಾಡಲಿ

ಕಲಬುರಗಿ: ಯುವಕರು ದೇಶದ ಅಮೂಲ್ಯ ಆಸ್ತಿ, ಕೃಷಿ ದೇಶದ ಬೆನ್ನೆಲಬು, ಸರ್ಕಾರ ಎಲ್ಲರಿಗೂ ನೌಕರಿ ನೀಡಲು ಸಾಧ್ಯವಿಲ್ಲ ಹೀಗಾಗಿ ಯುವಕರು ಕೃಷಿ ಕ್ಷೇತ್ರದಲ್ಲಿ ಆಸಕ್ತಿಯಿಂದ ದುಡಿಮೆ ಮಾಡಿದರೆ, ಹೆಚ್ಚಿನ ಇಳುವರಿ ಪಡೆದು ಉತ್ತಮ ಲಾಭ ಪಡೆಯಲು ಸಾಧ್ಯವಿದೆ. ಆದ್ದರಿಂದ ಯುವಕರು ಕೃಷಿಯತ್ತ ಮುಖ ಮಾಡಬೇಕಾಗಿದೆ ಎಂದು ಪ್ರಗತಿಪರ, ಸಾಧಕ ರೈತ ಚನ್ನವೀರಯ್ಯ ಕುಂಬಾರಮಠ ಹೇಳಿದರು. ಆಳಂದ ತಾಲೂಕಿನ ನರೋಣಾ ಗ್ರಾಮದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ […]

Continue Reading

ವಾಡಿ: ನಿರ್ಗತಿಕ ಮಕ್ಕಳಿಗೆ ಧರ್ಮಸ್ಥಳ ಸಂಸ್ಥೆಯಿಂದ ಮಾಶಾಸನ‌

ವಾಡಿ: ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಛೇರಿಯಲ್ಲಿ ಮಲ್ಲಿಕಾರ್ಜುನ ಬಡಾವಣೆಯಲ್ಲಿ ವರ್ಷಗಳ ಹಿಂದೆ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಬಡ ಮಕ್ಕಳಾದ ಭಾಗ್ಯಶ್ರೀ, ಆಕಾಶ ಅವರಿಗೆ ಧರ್ಮಸ್ಥಳ ವಾತ್ಸಲ್ಯ ಯೋಜನೆಯಡಿ ಪ್ರತಿ ತಿಂಗಳು ಮಂಜೂರಾದ ಮಾಶಾಸನ ಕೈಪಿಡಿ ಮತ್ತು 1,500 ರೂವಾಡಿ ವಲಯದ ಪತಂಜಲಿ ಯೋಗ ಸಮಿತಿ ಪ್ರಭಾರಿ ವೀರಣ್ಣ ಯಾರಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸೇವೆ ಶ್ಲಾಘನೀಯ, ಸರ್ಕಾರ ಮಾಡಲಾರದಂತಹ ಹಲವಾರು ಉತ್ತಮ ಕೆಲಸ ಈ […]

Continue Reading