ಬೆಂಗಳೂರು: ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಐಸ್ ಕ್ರೀಮ್ ಖರೀದಿಸಲು ಹೋಗಿ 40 ಸಾವಿರ ರೂ. ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಮಾ.28ರಂದು ಬಿಗ್ ಬಾಸ್ಕೆಟ್ ಆ್ಯಪ್‌ನಲ್ಲಿ 2 ಕೆ.ಜಿ. ಕಿತ್ತಲೆ ಹಣ್ಣು, 250 ಗ್ರಾಂ ಕೊತ್ತಂಬರಿ ಸೊಪ್ಪು ಹಾಗೂ 1 ಕೆ.ಜಿ. ಐಸ್ ಕ್ರೀಮ್ ಅನ್ನು ಮಹಿಳೆ ಆರ್ಡರ್ ಮಾಡಿ, ಹಣವನ್ನೂ ಪಾವತಿಸಿದ್ದರು. ಆದರೆ, ಡೆಲಿವರಿ ಬಾಯ್ ಐಸ್ ಕ್ರೀಮ್ ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳನ್ನು ತಂದುಕೊಟ್ಟಿದ್ದ. ಹೀಗಾಗಿ ಗೂಗಲ್‌ನಲ್ಲಿ ಬಿಗ್ ಬಾಸ್ಕೆಟ್ ಕಸ್ಟಮರ್ ಕೇರ್ ಸಂಖ್ಯೆ ಪಡೆದು ಕರೆ ಮಾಡಿದ ವೇಳೆ, ಸೈಬರ್ ವಂಚಕರು ಖಾತೆಯಿಂದ 40 ಸಾವಿರ ರೂ. ಎಗರಿಸಿದ್ದಾರೆ.
ಅಲಿ ಅಸ್ಕರ್ ರಸ್ತೆಯ ನಿವಾಸಿ ಸುನೀತಾ ಖುರನಾ ಮೋಸ ಹೋದವರು. ಇವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ, ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಸುನೀತಾ ಅವರು ಮಾ.28ರಂದು ಬಿಗ್ ಬಾಸ್ಕೆಟ್ ಆ್ಯಪ್‌ನಲ್ಲಿ 2 ಕೆ.ಜಿ. ಕಿತ್ತಳೆ ಹಣ್ಣು, 250 ಗ್ರಾಂ ಕೊತ್ತಂಬರಿ ಸೊಪ್ಪು ಹಾಗೂ 1 ಕೆ.ಜಿ. ಐಸ್‌ಕ್ರೀಮ್ ಆರ್ಡರ್ ಮಾಡಿದ್ದರು. ಅದರಂತೆ 2 ಕೆ.ಜಿ.ಕಿತ್ತಲೆ ಹಣ್ಣು ಹಾಗೂ 250 ಗ್ರಾಂ ಕೊತ್ತಂಬರಿ ಸೊಪ್ಪು ಮನೆಗೆ ಡೆಲಿವರಿ ಆಗಿದೆ. ಆದರೆ, ಐಸ್‌ಕ್ರೀಮ್ ಬಾರದ ಕಾರಣ ಗೂಗಲ್‌ನಲ್ಲಿ ಬಿಗ್ ಬಾಸ್ಕೆಟ್ ಕಸ್ಟಮರ್ ಕೇರ್ ಸಂಖ್ಯೆ ಪಡೆದು ಕರೆ ಮಾಡಿದಾಗ, ಆ ಸಂಖ್ಯೆ ಚಾಲ್ತಿಯಲ್ಲಿ ಇಲ್ಲ ಎಂಬ ಮಾಹಿತಿ ಬಂದಿದೆ.
ಸುನೀತಾ ಅವರು ಮತ್ತೆ ಗೂಗಲ್ ಸರ್ಚ್ ಮಾಡಿ ಬೇರೆ ಸಂಖ್ಯೆಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ವ್ಯಕ್ತಿ ಇದು ಬಿಗ್ ಬಾಸ್ಕೆಟ್ ಎಂದು ಹೇಳಿದ್ದಾನೆ. ಸುನೀತಾ ಅವರ ಆರ್ಡರ್ ಬಗ್ಗೆ ಮಾಹಿತಿ ಪಡೆದು 1 ಕೆ.ಜಿ. ಐಸ್ ಕ್ರೀಮ್ 400 ಹಣ ವಾಪಾಸ್ ನೀಡುವುದಾಗಿ ಹೇಳಿದ್ದಾನೆ. ಅದರಂತೆ ಮೊಬೈಲ್‌ನಲ್ಲಿ ಕೆಲವು ಅಯ್ಕೆಗಳನ್ನು ಕ್ಲಿಕ್ ಮಾಡುವಂತೆ ಸೂಚಿಸಿದ್ದಾನೆ. ಕ್ಲಿಕ್ ಮಾಡಿದ ಬಳಿಕ ಸುನೀತಾ ಅವರ ಬ್ಯಾಂಕ್ ಖಾತೆಯಿಂದ 40 ಸಾವಿರ ರೂ. ಹಣ ಕಡಿತವಾಗಿದೆ. ಈ ವೇಳೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದು ಸುನೀತಾ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯೊಬ್ಬರು ಗೂಗಲ್‌ನಲ್ಲಿ ಸಿಕ್ಕ ಕಸ್ಟಮರ್ ಕೇರ್ ಸಂಖ್ಯೆಯೊಂದಕ್ಕೆ ಕರೆ ಮಾಡಿ ಸೈಬರ್ ವಂಚಕರಿಂದ 40 ಸಾವಿರ ವಂಚನೆಗೆ ಒಳಗಾಗಿದ್ದಾರೆ.
ವಂಚನೆಗೆ ಒಳಗಾದ ಅಲಿ ಅಸ್ಕರ್ ರಸ್ತೆಯ ನಿವಾಸಿ ಸುನೀತಾ ಖುರನಾ ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ, ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಸುನೀತಾ ಅವರು ಮಾ.28ರಂದು ಬಿಗ್ ಬಾಸ್ಕೆಟ್ ಆಪ್‌ನಲ್ಲಿ 2 ಕೆ.ಜಿ ಕಿತ್ತಲೆ ಹಣ್ಣು, 250 ಗ್ರಾಂ ಕೊತ್ತಂಬರಿ ಸೊಪ್ಪು ಹಾಗೂ 1 ಕೆ.ಜಿ ಐಸ್‌ಕ್ರಿಂ ಆರ್ಡರ್ ಮಾಡಿ ಆನ್‌ಲೈನ್‌ನಲ್ಲಿ ಹಣ ಪಾವತಿಸಿದ್ದಾರೆ. ಅದರಂತೆ ಡೆಲಿವರಿ ಬಾಯ್ 2 ಕೆ.ಜಿ ಕಿತ್ತಲೆ ಹಣ್ಣು ಹಾಗೂ 250 ಗ್ರಾಂ ಕೊತ್ತಂಬರಿ ಸೊಪ್ಪನ್ನು ಸುನೀತಾ ಅವರ ಮನೆಗೆ ಡೆಲಿವರಿ ಮಾಡಿದ್ದಾನೆ. ಆದರೆ ಐಸ್‌ಕ್ರೀಮ್ ಬಾರದಿದ್ದಕ್ಕೆ ಗೂಗಲ್‌ನಲ್ಲಿ ಬಿಗ್ ಬಾಸ್ಕೆಟ್ ಕಸ್ಟಮರ್ ಕೇರ್ ನಂಬರ್ ಪಡೆದು ಕರೆ ಮಾಡಿದಾಗ, ಆ ನಂಬರ್ ಚಾಲ್ತಿಯಲ್ಲಿ ಇಲ್ಲ ಎಂಬ ಮಾಹಿತಿ ಬಂದಿದೆ.
40 ಸಾವಿರ ವಂಚನೆ
ಸುನೀತಾ ಅವರು ಗೂಗಲ್ ಸರ್ಚ್ ಮಾಡಿ ಜಸ್ಟ್ ಡಯಲ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಇದು ಬಿಗ್ ಬಾಸ್ಕೆಟ್ ಎಂದು ಹೇಳಿದ್ದಾನೆ. ಸುನೀತಾ ಅವರ ಆರ್ಡರ್ ಬಗ್ಗೆ ಮಾಹಿತಿ ಪಡೆದು 1 ಕೆ.ಜಿ ಐಸ್‌ಕ್ರಿಂ’ಗೆ 400 ರೂ ಹಣ ವಾಪಾಸ್ ನೀಡುವುದಾಗಿ ಹೇಳಿದ್ದಾನೆ. ಅದರಂತೆ ಮೊಬೈಲ್‌ನಲ್ಲಿ ಕೆಲವು ಆಪ್ಷನ್‌ಗಳನ್ನು ಕ್ಲಿಕ್ ಮಾಡುವಂತೆ ಸೂಚಿಸಿದ್ದಾನೆ. ಕ್ಲಿಕ್ ಮಾಡಿದ ಬಳಿಕ ಸುನೀತಾ ಅವರ ಬ್ಯಾಂಕ್ ಖಾತೆಯಿಂದ 40 ಸಾವಿರ ರೂ ಹಣ ಕಡಿತವಾಗಿದೆ. ಈ ವೇಳೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದು ಸುನೀತಾ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.