ಚಿತ್ರ ಕಲೆಗಳು ಸಂಸ್ಕೃತಿ, ಪರಂಪರೆ, ಇತಿಹಾಸದ ಕರುಹುಗಳು

ಕಲಬುರಗಿ: ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನ ಎಂಬ ಮಾತು ಚಿತ್ರಕಲೆಯ ಮಹತ್ವ ಸಾರುತ್ತದೆ. ಚಿತ್ರಕಲೆಯು ಸಂಸ್ಕೃತಿ, ಪರಂಪರೆ, ಇತಿಹಾಸದ ಕುರುಹು ಒದಗಿಸುತ್ತವೆ ಎಂದು ಅಂತಾರಾಷ್ಟ್ರೀಯ ಖ್ಯಾತ ಚಿತ್ರ ಕಲಾವಿದ ಡಾ.ಸುಬ್ಬಯ್ಯ ಎಂ.ನೀಲಾ ಅಭಿಪ್ರಾಯಪಟ್ಟರು. ನಗರದ ಮಹಾಲಕ್ಷ್ಮಿ ನಗರದಲಳ ನೀಲಾ ಆರ್ಟ್ ಗ್ಯಾಲರಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಸಂಜೆ ಜರುಗಿದ ‘ಸ್ವತಂತ್ರ ಚಿತ್ರ ಕಲಾವಿದರ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಚಿತ್ರಕಲೆಯು ಘಟನೆ ಸಂದರ್ಭದ ನೈಜತೆಯನ್ನು ಕಟ್ಟಿಗೆ ಕಟ್ಟುವ ಹಾಗೆ ನೀಡುತ್ತದೆ. ಇದು ಶಾಶ್ವತವಾದ […]

Continue Reading

ಬಾಯಿ ಆರೋಗ್ಯದಿಂದ ದೇಹದ ಆರೋಗ್ಯ ಸಾಧ್ಯ

ಕಲಬುರಗಿ: ಸಾಮಾನ್ಯವಾಗಿ ಯಾವುದೆ ಕಾಯಿಲೆಯ ಲಕ್ಷಣ ಕಂಡುಬಂದು ಆಸ್ಪತ್ರೆಗೆ ತೆರಳಿದಾಗ ವೈದ್ಯರು ಮೊದಲು ಬಾಯಿಯನ್ನು ಪರಿಶೀಲಿಸುವರು. ಹಲ್ಲುಗಳು, ನಾಲಿಗೆ, ಗಂಟಲು ಸೇರಿದಂತೆ ಬಾಯಿಯ ಆರೋಗ್ಯದಲ್ಲಿ ಏರು-ಪೇರಾದಾಗ ಅದರ ಪರಿಣಾಮ ದೇಹದ ಇತರೆ ಭಾಗಗಳಿಗೆ ಕೂಡಾ ಆಗುತ್ತದೆ. ಆದ್ದರಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ಯುಪಿಎಚ್‌ಸಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಜರುಗಿದ ‘ವಿಶ್ವ ಬಾಯಿ ಆರೋಗ್ಯ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಹಲ್ಲುಗಳ ರಕ್ಷಣೆಗ ದಿನಕ್ಕೆ […]

Continue Reading

ರೈಲ್ವೆಯಲ್ಲಿ 209 ಮೆಗಾವ್ಯಾಟ್‌ ಸೌರ ಸ್ಥಾವರ ಸ್ಥಾಪನೆ: ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಕೊಡುಗೆ

ನವದೆಹಲಿ: ಭಾರತೀಯ ರೈಲ್ವೆ ದಶಕದಿಂದ ಸೌರ ಶಕ್ತಿ ಉತ್ಪಾದನೆ ಮತ್ತು ಬಳಕೆಗೆ ಪ್ರಾಧಾನ್ಯತೆ ನೀಡುತ್ತಿದ್ದು, ದೇಶಾದ್ಯಂತ ಈವರೆಗೆ 2,249 ರೈಲು ನಿಲ್ದಾಣಗಳು ಮತ್ತು ಸೇವಾ ಕಟ್ಟಡಗಳಲ್ಲಿ 209 ಮೆಗಾವ್ಯಾಟ್‌ ಸೌರ ಸ್ಥಾವರಗಳನ್ನು ಸ್ಥಾಪಿಸಿದೆ. ಕಳೆದ ಹತ್ತು ವರ್ಷಗಳ ಹಿಂದೆ ಕೇವಲ 628 ಸೌರ ಘಟಕಗಳನ್ನು ಹೊಂದಿದ್ದ ಭಾರತೀಯ ರೈಲ್ವೆ ಇತ್ತೀಚಿನ ಐದು ವರ್ಷಗಳಲ್ಲಿ ಅದರ ಮೂರುಪಟ್ಟು ಸೌರ ಘಟಕಗಳನ್ನು ಸ್ಥಾಪಿಸಿ ಸೌರಶಕ್ತಿ ಬಳಕೆಯಲ್ಲಿ ಮುನ್ನಡೆಯಲ್ಲಿದೆ. ಕರ್ನಾಟಕ ಸೇರಿದಂತೆ ರಾಜಸ್ಥಾನ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, […]

Continue Reading

ಚಂಡಮಾರುತ ಸೃಷ್ಟಿ: ರಾಜ್ಯದ 21 ಜಿಲ್ಲೆಗಳಲ್ಲಿ ಭಾರಿ ಮಳೆ

ಬೆಂಗಳೂರು: ಸಮುದ್ರದ ಎರಡು ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ, ಸ್ಪಷ್ಟ ಚಂಡಮಾರುತ ಪರಿಚಲನೆ ದಾಖಲಾಗಿದೆ. ಈ ಕಾರಣದಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ 05 ದಿನಗಳ ಕಾಲ (ಏಪ್ರಿಲ್ 8 ರವರೆಗೆ) ಗುಡುಗು ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆ ಅಬ್ಬರಿಸಲಿದೆ. ಕರ್ನಾಟಕದಲ್ಲಿ ಇಂದಿನಿಂದ ಏಪ್ರಿಲ್ 6ರವರೆಗೆ (ಗುರುವಾರ-ರವಿವಾರ) 21 ಜಿಲ್ಲೆಗಳಿಗೆ ಭಾರಿ ಮಳೆ ಪ್ರಯುಕ್ತ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ರಾಜ್ಯದಲ್ಲಿ ಕೆಲವೆಡೆ ಬಿಸಿಲಿನ ತಾಪ ಹೆಚ್ಚಾಗಿತ್ತು, ಈ ಮಧ್ಯೆ ಬದಲಾದ ಹವಾಮಾನ ವೈಪರಿತ್ಯದ ಪ್ರಭಾವದಿಂದಾಗಿ […]

Continue Reading

ದೇಶದ ಮೊದಲ ವರ್ಟಿಕಲ್ ಪಂಬನ್ ರೈಲ್ವೆ ಬ್ರಿಡ್ಜ್: ಇದರ ವಿಶೇಷತೆ ಏನು ?

ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆಗೆ ಸಜ್ಜಾಗಿದೆ. ರಾಮೇಶ್ವರಂಗೆ ತೆರಳುವ ಭಕ್ತರಿಗೆ, ಧನುಷ್ಕೋಡಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಪಂಬನ್ ಬ್ರಿಡ್ಜ್‌ ನಿರ್ಮಿಸಲಾಗಿದೆ. ಸಮುದ್ರದಲ್ಲಿ ನಿರ್ಮಿಸಲಾದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಇದಾಗಿದೆ, ಈ ಸೇತುವೆಯನ್ನು ರಾಮನವಮಿಯಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಪಂಬನ್ ರೈಲು ಸೇತುವೆಯ ನಿರ್ಮಾಣದ ಕಾರ್ಯವನ್ನು 1870ರಲ್ಲಿ ಬ್ರಿಟಿಷ್ ಸರ್ಕಾರವು ಶ್ರೀಲಂಕಾಕ್ಕೆ ವ್ಯಾಪಾರ ಸಂಪರ್ಕ ವಿಸ್ತರಿಸಲು ನಿರ್ಧರಿಸಿದಾಗ ಪ್ರಾರಂಭಿಸಲಾಯಿತು. ಸುಮಾರು 2.2 ಕಿ.ಮೀ.ಗಳಷ್ಟು ವಿಸ್ತಾರವಿದ್ದ, 143 ಪಿಯರ್‌ಗಳನ್ನು ಹೊಂದಿರುವ ಇದನ್ನು […]

Continue Reading

ಎನ್‌ಎಸ್‌ಎಸ್‌ ಶಿಬಿರ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ: ಗುರುರಾಜ ಸಂಗಾವಿ

ಸುದ್ದಿ ಸಂಗ್ರಹ ಶಹಾಬಾದ್: ಪಠ್ಯ ಶಿಕ್ಷಣದ ಜೊತೆಗೆ ಸಮುದಾಯದ ಪರಿಚಯ, ಸೇವೆಯ ಮೂಲಕ ಸ್ವಚ್ಛತೆ ಅರಿವು, ನಮ್ಮಲ್ಲಿನ ಸಂಸ್ಕೃತಿ ಪ್ರದರ್ಶನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಹ ಭೋಜನ, ಕ್ರೀಡೆಯ ಮೂಲಕ ಸಮಗ್ರತೆ ಪರಿಕಲ್ಪನೆ ಸೇರಿದಂತೆ ಹಲವು ಚಿಂತನೆಗೆ ಎನ್‌ಎಸ್‌ಎಸ್‌ ಶಿಬಿರ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ ಎಂದು ಗ್ರೇಡ್ 2 ತಹಸೀಲ್ದಾರ್ ಗುರುರಾಜ ಸಂಗಾವಿ ಹೇಳಿದರು. ನಗರದ ಎಸ್ಎಸ್ ಮರಗೋಳ ಕಾಲೇಜಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಎನ್ಎಸ್ಎಸ್ ಮತ್ತು ಬಿ ಘಟಕದ ವಾರ್ಷಿಕ ವಿಶೇಷ ಶಿಬಿರವ ಉದ್ಘಾಟಿಸಿ ಮಾತನಾಡಿದ ಅವರು, […]

Continue Reading

ಸಮ-ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶರಣ ದಾಸಿಮಯ್ಯ

ಕಲಬುರಗಿ: ದೇವರ ದಾಸಿಮಯ್ಯ ಅವರು ನೇಯ್ಗೆ ಕಾಯಕ ಮಾಡುವದರ ಜೊತೆಗೆ ಮೌಢ್ಯತೆ, ಕಂದಾಚಾರ, ಅಂದಶೃದ್ಧೆ, ಜಾತಿಯತೆ, ಶೋಷಣೆ, ಅನ್ಯಾಯದಂತಹ ಪಿಡುಗುಗಳಿಂದ ತೂತು ಬಿದ್ದ ಸಮಾಜವನ್ನು ತಮ್ಮ ವಚನಗಳ ಮೂಲಕ ನೇಯುವ ಕಾರ್ಯ ಮಾಡಿ, ಸಮ-ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಟ ಶರಣರಾಗಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ಹೊಸ ಜೇವರ್ಗಿ ರಸ್ತೆಯ ಗೆಟ್ಸ್ ಡಿಗ್ರಿ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಜರುಗಿದ ‘ಶರಣ ದೇವರ ದಾಸಿಮಯ್ಯನವರ 1046ನೇ ಜಯಂತ್ಯುತ್ಸವ’ […]

Continue Reading

ಡಾ.ಶಿವಕುಮಾರ ಸ್ವಾಮೀಜಿಗಳ ಸೇವೆ ಸಮಾಜಕ್ಕೆ ಮಾದರಿ

ಕಲಬುರಗಿ: ಪರಹಿತ, ಸಮಾಜ ಸೇವೆಯಲ್ಲಿ ಶಿವನನ್ನು ಕಂಡು ದೈವತ್ವಕ್ಕೇರಿದ ಮಹಾನ ಚೇತನ ಅವರಾಗಿದ್ದು, ಅವರ ಸೇವೆ ಸಮಾಜಕ್ಕೆ ಮಾದರಿಯ ಎಂದು ಉಪನ್ಯಾಸಕ, ಸಮಾಜ ಸೇವಕತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ನನ ಬಸವೇಶ್ವರ ಡಿಗ್ರಿ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಡಾ.ಶಿವಕುಮಾರ ಮಾಹಾಸ್ವಾಮೀಜಿಯವರ 118ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ಲಕ್ಷಾಂತರ ಬಡ, ಅನಾಥ ಮಕ್ಕಳಿಗೆ ಅನ್ನ ಜ್ಞಾನ […]

Continue Reading

ಇಂದಿನಿಂದ ಒಂದು ವಾರ ರಾಜ್ಯದಲ್ಲಿ ಗಾಳಿ ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯಾದ್ಯಂತ ಬುಧವಾರದಿಂದ ಒಂದು ವಾರ ಭಾರಿ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಮಳೆ ಮಾರುತ ಚುರುಕುಗೊಂಡಿರುವುದರಿಂದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಂಗಳವಾರದಿಂದಲೇ ವಿವಿಧೆಡೆ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಬುಧವಾರ ಹಾಗೂ ಗುರುವಾರದಿಂದ ಮಳೆಯ ಪ್ರಮಾಣ ಹೆಚ್ಚಾಗುವ ಲಕ್ಷಣ ಕಂಡು ಬಂದಿದೆ. ಹಾಸನ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ […]

Continue Reading

ಸಿಎಂ ಸಚಿವಾಲಯದ ಕರ್ತವ್ಯದಿಂದ 30 ಸಿಬ್ಬಂದಿ ವಜಾ

ಬೆಂಗಳೂರು: ಸಿಎಂ ಸಚಿವಾಲಯದ ಕರ್ತವ್ಯದಿಂದ 30 ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 30 ಸಿಬ್ಬಂದಿಯನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ನಿನ್ನೆ ಮಧ್ಯಾಹ್ನದಿಂದ 30 ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಸಹಾಯಕರು, ಕಿರಿಯ ಸಹಾಯಕರು ದಲಾಯತ್ ಹುದ್ದೆಯಲ್ಲಿದ್ದವರು ಸೇವೆಯಿಂದ ವಜಾಗೊಂಡಿದ್ದಾರೆ. ಈ ಬಗ್ಗೆ ಸಿಎಂ ಸಚಿವಾಲಯದಿಂದ ಆದೇಶ ಹೊರಡಿಸಲಾಗಿದೆ. 30 ಗುತ್ತಿಗೆ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ, ಅವರ ಸೇವೆ ಅವಶ್ಯಕತೆ ಇಲ್ಲದ ಕಾರಣ ಕರ್ತವ್ಯದಿಂದ ಏಕಾಏಕಿ ತೆಗೆದುಹಾಕಲಾಗಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 30 […]

Continue Reading