ಚಿನ್ನದ ಬೆಲೆ ಬರೊಬ್ಬರಿ 34 ಸಾವಿರ ರೂ ಇಳಿಕೆ ಸಾಧ್ಯತೆ, ಅಮೆರಿಕ ತಜ್ಞರ ಸೂಚನೆ

ಚಿನ್ನದ ಬೆಲೆ ಇಳಿಯುತ್ತಾ ? ಅಮೆರಿಕ ತಜ್ಞರ ಪ್ರಕಾರ ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾದರೆ ಮತ್ತು ಬೇಡಿಕೆ ಕಡಿಮೆಯಾದರೆ ಚಿನ್ನದ ಬೆಲೆ ಕಡಿಮೆಯಾಗಬಹುದು. ಇದೀಗ ಭಾರತದಲ್ಲಿ ಚಿನ್ನದ ಬಲೆ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ತಜ್ಞರು ಸೂಚಿಸಿದ್ದಾರೆ. ಈಗ 90‌ ಸಾವಿರ ರೂ ಸಿಗುತ್ತಿರುವ 10 ಗ್ರಾಂ ಚಿನ್ನ, 56 ಸಾವಿರ ರೂ ಗೆ ಇಳಿಯುತ್ತಾ ? ಇದೀಗ ಎಲ್ಲೆಡೆ ಚಿನ್ನದ ಬೆಲೆ ಕುರಿತು ಚರ್ಚೆ ನಡೆಯುತ್ತಿದೆ. ಅಮೆರಿಕ ತಜ್ಞರು ಈ ಕುರಿತು ಸೂಚನೆಯೊಂದನ್ನು ನೀಡಿದ್ದಾರೆ. ಭಾರತದಲ್ಲಿ ಚಿನ್ನದ […]

Continue Reading

ಸಮಾಜದ ಸೌಖ್ಯತೆಗೆ ಪೂಜೆ, ದಾಸೋಹ ಮುಖ್ಯ: ನಾಲವಾರ ಶ್ರೀಗಳು

ಜೇವರ್ಗಿ: ಸಮಾಜದಲ್ಲಿನ ಜನರು ಅಹಂ ಅನ್ನು ತೊರೆದು ಪ್ರೀತಿ, ವಿಶ್ವಾಸ, ಭಕ್ತಿಯಿಂದ ಪೂಜೆ ಮತ್ತು ದಾಸೋಹ ಪರಂಪರೆಯನ್ನು ದಿನವಿಡಿ ನಡೆಸಿದರೆ ಬದುಕಿಗೆ ಬೆಲೆ ಬರುತ್ತದೆ. ಮಾಡುವ ಕಾರ್ಯದಲ್ಲಿ ಸ್ವಾರ್ಥ ಮತ್ತು ಅಹಂ ಅನ್ನು ಮುಕ್ತಗೊಳಿಸಿ ನಿಸ್ವಾರ್ಥ ಸೇವೆ ಸಲ್ಲಿಸುವದು ತುಂಬಾ ಮುಖ್ಯ ಎಂದು ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಡಾ. ಸಿದ್ದತೋಟೆಂದ್ರ ಮಹಾಸ್ವಾಮಿಗಳು ನುಡಿದರು. ತಾಲೂಕಿನ ಕಟ್ಟಿ ಸಂಗಾವಿ ಭೀಮಾ ಬ್ರಿಜ್ ಪ್ರಭು ಬಸಯ್ಯ ತಾತನವರ ಜಾತ್ರಾ ಮಹೋತ್ಸವದ ಅಂಗವಾಗಿ ನೆರವೇರಿದ ರಥೋತ್ಸವದ ನಂತರ ನಡೆದ ಧರ್ಮ […]

Continue Reading

ಕಲಬುರಗಿ: ಗ್ಯಾಸ್ ಕಟರ್ ಬಳಸಿ ATM ನಿಂದ 18 ಲಕ್ಷ ರೂ ದೋಚಿದ ಖದೀಮರು

ಕಲಬುರಗಿ: ಗ್ಯಾಸ್ ಕಟರ್ ಬಳಸಿ ಕಳ್ಳರು ಎಟಿಎಂನಿಂದ 18 ಲಕ್ಷ ರೂ. ಕದ್ದೊಯಿದಿರುವ ಘಟನೆ ಕಲಬುಗರಿಯ ರಾಮನಗರದ ಬಳಿ ಇರುವ SBI ATM ನಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬ್ಯಾಂಕ್ ಸಿಬ್ಬಂದಿ ATM ಗೆ ಹಣ ಹಾಕಿ ಹೋಗಿದ್ದರು. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ATM ನಲ್ಲಿ ಸೆಕ್ಯೂರಿಟಿ ಇಲ್ಲದನ್ನು ಗಮನಿಸಿದ ಖದೀಮರು ಕನ್ನ ಹಾಕಿದ್ದಾರೆ. ಕಳ್ಳರು ATM ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಬ್ಲಾಕ್ ಸ್ಪ್ರೆ ಮಾಡಿ ಗ್ಯಾಸ್ ಕಟ್ಟರ್‌ನಿಂದ […]

Continue Reading

ಮಳೆ-ಗಾಳಿಗೆ ನೆಲಕ್ಕುರುಳಿದ 5 ಕೋಟಿ ವೆಚ್ಚದ ರಸ್ತೆಯ ದ್ವಿಪಥ ಕಂಬಗಳು

ವಾಡಿ: ಬೇಸಿಗೆ ಕಾಲದ ಮಳೆಗೆ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಸ್ತೆಯ ದ್ವಿಪಥ ಕಂಬಗಳು ಸಣ್ಣ ಮಳೆ- ಬಿರುಗಾಳಿಗೆ ಸಾಲಾಗಿ ನೆಲಕ್ಕುರುಳಿವೆ. ಅದೃಷ್ಟವಶಾತ ಒಬ್ಬ ಮಹಿಳೆ ಸೇರಿದಂತೆ ಕೆಲವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ. ಇದನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಗುತ್ತಿಗೆದಾರ ಮತ್ತು ಅನುಷ್ಠಾನಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಒತ್ತಾಯಿಸಿದ್ದಾರೆ. ಸುಮಾರು 3-4 ವರ್ಷಗಳಿಂದ ಕುಂಟುತ್ತಾ ಕಳಪೆ ಮಟ್ಟದಿಂದ ಸಾಗುತ್ತಿದ್ದ ಈ ರಸ್ತೆ ಕಾಮಗಾರಿಯಿಂದ […]

Continue Reading

ಮಾತೃ ಶಕ್ತಿ ಬೃಹತ್ ಮಹಿಳಾ ಜಾಥಾದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ

ಕಲಬುರಗಿ: ಡಾ.ಬಿ.ಆರ್ ಅಂಬೇಡ್ಕರ್ ಇಂಟಿಗ್ರೇಟೆಡ್ ರಿಸರ್ಚ್ ಇನಸ್ಟಿಟ್ಯೂಟ್, ಬಸವೇಶ್ವರ ಸಮಾಜ ಸೇವಾ ಬಳಗ, ಕಲ್ಯಾಣ ಕರ್ನಾಟಕ ಸೇನೆ, ಸ್ಲಂ ಜನಾಂದೋಲನದ ಜಿಲ್ಲಾ ಘಟಕ, ಕೆಎಚ್‌ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು, ಮಹಿಳಾ ಸಂಘಗಳ ವತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರರ 134ನೇ ಜಯಂತಿ ಪ್ರಯುಕ್ತ ‘ಮಾತೃ ಶಕ್ತಿ’ ಬೃಹತ್ ಮಹಿಳಾ ಜಾಥಾದಲ್ಲಿ ಎಲ್ಲರು ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದು ಡಾ.ಸುನೀಲಕುಮಾರ ಎಚ್ ವಂಟಿ ಮತ್ತು ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ […]

Continue Reading

ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಮಂಗಲಪಾಂಡೆ

ಕಲಬುರಗಿ: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಥಮ ಬಾರಿಗೆ ಧ್ವನಿ ಎತ್ತುವ ಮೂಲಕ ಮಂಗಲಪಾಂಡೆ ಸ್ವಾತಂತ್ರ್ಯ ಚಳುವಳಿಗೆ ನಾಂದಿ ಹಾಡಿದ ಅಪ್ರತಿಮ ದೇಶಭಕ್ತರು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಶಿವ ನಗರದ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಮಂಗಲಪಾಂಡೆ ಸ್ಮರಣೋತ್ಸವ’ದಲ್ಲಿ ಮಾತನಾಡಿದ ಅವರು, ವ್ಯಾಪರಕ್ಕಾಗಿ ಭಾರತಕ್ಕೆ ಆಗಮಿಸಿದ ಬ್ರೀಟಿಷರು ಒಡೆದಾಳುವ ನೀತಿಯ ಮೂಲಕ ಸುಮಾರು 250 ವರ್ಷಗಳ ಕಾಲ ಆಡಳಿತ ಮಾಡಿ […]

Continue Reading

ಗಂಡಸರಿಗೆ ಸೀರೆ ಧರಿಸಿ ನರೇಗಾ ಕೂಲಿ ಕೆಲಸ, ಅಧಿಕಾರಿಯಿಂದ ಹಣ ಲಪಟಾಯಿಸುವ ಸಂಚು

ಯಾದಗಿರಿ: ಹಣ ಎಗರಿಸಲು ಮೈ ತುಂಬ ಸೀರೆ ಧರಿಸಿದಪುರುಷರು, ನರೇಗಾ ಕೂಲಿ ಕೆಲಸಕ್ಕೆ ಮುಂದಾಗಿದ್ದಾರೆ.ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದಲ್ಲಿಇಂತಹದೊಂದು ಘಟನೆ ನಡೆದಿದೆ. ಮಲ್ಹಾರ ಗ್ರಾಮದಲ್ಲಿಯೇ ಕೂಲಿ ಕಾರ್ಮಿಕರ ಹೆಸರಿನಲ್ಲಿಗೊಲ್ಮಾಲ್ ಮಾಡುವ ಹುನ್ನಾರ ಕೆಲ ಪುರುಷರುಅಧಿಕಾರಿಗಳ ಕುಮ್ಮಕ್ಕಿನಿಂದ ಸೀರೆ ಧರಿಸಿ ಕೂಲಿಗೆದುಡಿಯಲು ಮುಂದಾಗಿದ್ದಾರೆ. ಪೂಜಾರಿ ಎಂಬಾತನ ಹೊಲದ ಬಳಿ ನಾಲೆ ಹೂಳೆತ್ತುವಕಾಮಗಾರಿಯಲ್ಲಿ ನಕಲಿ ಪೋಟೋ NMMS ಮಾಡಿಬಿಲ್ ಎತ್ತುವ ಸಂಚು ರೂಪಿತವಾಗಿದೆ. ಕಾರ್ಮಿಕರ ಕೆಲಸದ ಹಾಜರಾತಿ ಪೊಟೋ ಅಪ್ಲೋಡ್ಮಾಡಬೇಕಾದ ಅಧಿಕಾರಿಗಳು ಆದರೆ ಮಹಿಳೆಯರಹೆಸರಿನಲ್ಲಿ ಕೆಲಸ ಮಾಡದೇ ಪುರುಷರು ಸೀರೆ […]

Continue Reading

ಕಲಾ ವಿಭಾಗದಲ್ಲಿ ಲಾರಿ ಡ್ರೈವರ್ ಮಗಳು ರಾಜ್ಯಕ್ಕೆ ಪ್ರಥಮ: 597 ಅಂಕ ಪಡೆದ ಸಂಜನಾಬಾಯಿ

ವಿಜಯನಗರ: ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ, ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಸಂಜನಾಬಾಯಿ ಪ್ರಥಮ ಸ್ಥಾನಗಳಿಸಿದ್ದಾರೆ. 600ಕ್ಕೆ 597 ಅಂಕ ಪಡೆಯುವ ಮೂಲಕ ಸಂಜನಾಬಾಯಿ ಕಲಾ ವಿಭಾಗದದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಸಂಜನಾ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಪಿಯು ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸಂಜನಾ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ ಗುಂಡಾ ಸ್ಟೇಷನ್ ಗ್ರಾಮದವರಾಗಿದ್ದು, ತಂದೆ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಕೆ ನಿರ್ಮಲಾ ದ್ವಿತೀಯ […]

Continue Reading

ವಾಟರ್ ಬಾಟಲ್ ನೀರು ಅಸುರಕ್ಷಿತ: ಆಹಾರ ಇಲಾಖೆಯ ವರದಿಯಲ್ಲಿ ಆಘಾತಕಾರಿ ಅಂಶ

ಬೆಂಗಳೂರು: ನಾವು ಪ್ರತಿನಿತ್ಯ ಸೇವಿಸುವ ಆಹಾರಗಳಲ್ಲಿ ಕಲಬೆರಕೆ, ವಿಷಾಂಶ ಹಾಗೂ ಕ್ಯಾನ್ಸರ್ ಕಾರಕ ಅಂಶಗಳಿರುವ ಬಗ್ಗೆ ಆಹಾರ ಇಲಾಖೆಯ ಪ್ರಯೋಗಾಲಯ ವರದಿಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಆಘಾತಕಾರಿ ವಿಚಾರಗಳು ಬಹಿರಂಗವಾಗುತ್ತಲೇ ಇವೆ. ಈಗ ವಾಟರ್ ಬಾಟಲ್ ನೀರಿನ ಸರದಿ. ಬಾಟಲ್ ಮೂಲಕ ಪೂರೈಕೆಯಾಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಬಾಟಲ್ ನೀರಿನಲ್ಲಿ ಮಿನರಲ್ ಕೂಡ ಇರುವುದಿಲ್ಲ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ ಅಸುರಕ್ಷಿತ ಎಂದು ತಿಳಿಸಿದೆ. ಜೊತೆಗೆ ಕೋವಾ ಕೂಡ […]

Continue Reading

ಅರಳಿ ಮರ ಆಕ್ಸಿಜನ್, ಆರೋಗ್ಯದ ಆಗರ 

ಕಲಬುರಗಿ: ಕೆಲವು ಜಾತಿಯ ಮರಗಳ ಎಲೆ, ಬೇರು ಮತ್ತು ತೊಗಟೆಯ ಕಷಾಯವನ್ನು ಭೇದಿ, ವಾಂತಿ, ಹಲ್ಲುನೋವು, ದಮ್ಮು ಇತ್ಯಾದಿ ರೋಗಗಳಿಗೆ ಉಪಯೋಗಿಸುತ್ತಾರೆ. ಇದು ಆಕ್ಸಿಜನ್, ಆರೋಗ್ಯದ ಆಗರವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಸಂತೋಷ ಕಾಲೋನಿಯ ದಕ್ಷಿಣಮುಖಿ ಅಂಜನೇಯ ದೇವಸ್ಥಾನದ ಆವರಣದ ಅರಳಿ ಮರದ ಕಟ್ಟೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ಅರಳಿ ಮರದ ಮಹತ್ವದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಳಿ ಮರದ ಎಲೆಯನ್ನು ದನ-ಕರು, ಆಡು, ಕುರಿಗಳಿಗೆ ಮೇವಾಗಿ […]

Continue Reading