ಮನೆಯ ಹಿಂಬಾಗಿಲ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ
ಮೈಸೂರು: ಮನೆಯ ಹಿಂಬಾಗಿಲ ಬೀಗ ಮುರಿದು ಸುಮಾರು 22 ಲಕ್ಷ ರೂ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳ್ಳತನ ಮಾಡಿರುವ ಘಟನೆ ಮೈಸೂರು ತಾಲೂಕಿನ ನಾಗವಾಲದಲ್ಲಿ ನಡೆದಿದೆ. ನಾಗವಾಲದ ನಿವಾಸಿ ರೇಣುಕಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯವರು ಮಹದೇಶ್ವರ ಬೆಟ್ಟಕ್ಕೆ ಹೋಗಿರುವ ವೇಳೆ ಹಿಂಬಾಗಿಲ ಬೀಗ ಮುರಿದು ಕಳ್ಳತನ ಮಾಡಲಾಗಿದೆ. 3,26,700 ರೂ ನಗದು, 276 ಗ್ರಾಂ ಚಿನ್ನ, 1,350 ಗ್ರಾಂ ಬೆಳ್ಳಿ ಸೇರಿ ಸುಮಾರು 22 ಲಕ್ಷ ಮೌಲ್ಯದ ವಸ್ತುಗಳನ್ನು ಖದೀಮರು ದೋಚಿದ್ದಾರೆ. ಸದ್ಯ […]
Continue Reading