ಸಿಎಂ ಪದಕ ಪುರಸ್ಕೃತ ಪ್ರಶಾಂತ ದೇಶೆಟ್ಟಿಗೆ ಅಭಿನಂದನೆ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯ ರೈಟರ್ ಪ್ರಶಾಂತ ಎಸ್ ದೇಶೆಟ್ಟಿ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸತ್ಕರಿಸಿ, ಅಭನಂದಿಸಲಾಯಿತು. ನಗರದ ಖಾಸಗಿ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸೋಮಶೇಖರ ಬಿ ಮುಲಗೆ ಮಾತನಾಡಿ, ದೇಶೆಟ್ಟಿ ಅವರು ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಪದಕ ದೊರೆತಿರುವದು ಸೂಕ್ತವಾಗಿದೆ. ಕಾರ್ಯನಿರ್ವಹಿಸಲು ಪ್ರಶಸ್ತಿ ಮತ್ತಷ್ಟು ಪ್ರೇರಣೆ ನೀಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ಎಚ್.ಬಿ ಪಾಟೀಲ, ಶಿವಯೋಗೆಪ್ಪಾ ಎಸ್. ಬಿರಾದಾರ, ರವಿ ಬಿರಾದಾರ, ಶ್ರೀಶೈಲ ಕುಂಬಾರ, […]

Continue Reading

ಉತ್ತಮ ಬದುಕಿಗೆ ಶರಣರ ವಚನಗಳು ಸ್ಫೂರ್ತಿ: ನಾಗೇಂದ್ರ ಮಸೂತಿ

ಕಲಬುರಗಿ: ಮನುಷ್ಯನ ಜೀವನದಲ್ಲಿ ನೆಮ್ಮದಿ ಹಾಗೂ ಬದುಕು ನಡೆಸಲು ಶರಣರ ವಚನಗಳು ಸ್ಫೂರ್ತಿಯಾಗಿವೆ ಎಂದು ಉಪನ್ಯಾಸಕ ನಾಗೇಂದ್ರ ಮಸೂತಿ ಹೇಳಿದರು. ನಗರದ ಜಯನಗರ ಬಡಾವಣೆಯ ಸೋಮಶೇಖರ ಮಾಲಿ ಪಾಟೀಲ ಮನೆಯಲ್ಲಿ ರವಿವಾರ ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಮನೆಯಂಗಳಗಳಲ್ಲಿ ಶ್ರಾವಣ ವಚನೋತ್ಸವ ಕಾರ್ಯಕ್ರಮ ನಿಮಿತ್ಯ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತು ಉಪನ್ಯಾಸ ಮಾಲೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ವಚನಗಳಲ್ಲಿ ಜ್ಞಾನ ಅಡಗಿದೆ ಎಂದರು. ದೈರ್ಯದಿಂದ ಬದುಕು ನಡೆಸಲು ಶರಣರ […]

Continue Reading

ರಾಷ್ಟ್ರಕ್ಕೆ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಕೊಡುಗೆ ಅಪಾರ

ಕಲಬುರಗಿ: ರಾಷ್ಟ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಕೊಡುಗೆ ಅಪಾರವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ರವಿವಾರ ಜರುಗಿದ ‘ಡಾ.ಎ.ಪಿ.ಜೆ. ಅಬ್ದುಲ್ ಕಲಾಂರ ಪುಣ್ಯ ಸ್ಮರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ, ತತ್ವಜ್ಞಾನಿಯಾಗಿ, ಶಿಕ್ಷಣ ತಜ್ಞರಾಗಿ, ಕ್ಷಿಪಣಿಯ ರೂವಾರಿಯಾಗಿ, ಧೀಮಂತ ಧುರಿಣರಾಗಿ, ಯುವ ಜನತೆಯ ದಾರಿ ದೀಪವಾಗಿದ್ದಾರೆ ಎಂದರು. […]

Continue Reading

ಶೈಕ್ಷಣಿಕ ಕ್ಷೇತ್ರದ ಸಾಧಕ ಚನ್ನಬಸಪ್ಪ ಗಾರಂಪಳ್ಳಿಗೆ ಗೌರವ ಸತ್ಕಾರ

ಕಲಬುರಗಿ: ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ಸ್ವಾತಿ ಮತ್ತು ಶಿವಾ ಶಾಲೆಗಳನ್ನು ಪ್ರಾರಂಭಿಸಿ, ಬಡ, ಮಧ್ಯಮ ವರ್ಗದ ಸಾವಿರಾರು ವಿದ್ಯಾರ್ಥಿಗಳ ಬದುಕು ಕಟ್ಟಿಕೊಟ್ಟ, ಕಳೆದ 19 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿರುವ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಅವರಿಗೆ ಸ್ವಾತಿ ಪ್ರೌಢ ಶಾಲೆಯ ಆವರಣದಲ್ಲಿ ರವಿವಾರ ಜರುಗಿದ ಕಾರ್ಯಕ್ರಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸತ್ಕರಿಸಿ, ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಎಚ್.ಬಿ ಪಾಟೀಲ್, ನರಸಪ್ಪ ಬಿರಾದಾರ ದೇಗಾಂವ, ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಗೀತಾ ಸಾಲಿ […]

Continue Reading

ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪಾಲಕರ ಪಾತ್ರ ಪ್ರಮುಖ

ಕಲಬುರಗಿ: ಮಕ್ಕಳನ್ನು ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿಸಿ, ಸಮಾಜದ ದೊಡ್ಡ ಆಸ್ತಿಯನ್ನಾಗಿಸಿ, ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಪಾಲಕರ ಪಾತ್ರ ಪ್ರಮುಖವಾಗಿದೆ. ಎಂದು ಎಂದು ಚಿಂತಕ ನರಸಪ್ಪ ಬಿರಾದಾರ ದೇಗಾಂವ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ರವಿವಾರ ಜರುಗಿದ ‘ರಾಷ್ಟೀಯ ಪಾಲಕರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ತಮ್ಮ ಪಾಲಕ-ಪೋಷಕರ ಶ್ರಮ ಮರೆಯಬಾರದು. ಅವರ ಇಳಿ ವಯಸ್ಸಿನಲ್ಲಿ ಪಾಲಕರಿಗೆ ಆರೈಕೆ ಮಾಡಬೇಕು ಎಂದರು. ಉಪನ್ಯಾಸಕ ಎಚ್.ಬಿ […]

Continue Reading

ಆಧುನಿಕ ಕನ್ನಡ ಸಾಹಿತ್ಯದ ಶ್ರೇಷ್ಟ ಕಾದಂಬರಿಕಾರ ಡಾ.ಎಸ್.ಎಲ್ ಭೈರಪ್ಪ

ಕಲಬುರಗಿ: ಡಾ.ಎಸ್.ಎಲ್ ಭೈರಪ್ಪನವರು ಆಧುನಿಕ ಕನ್ನಡ ಸಾಹಿತ್ಯದ ಶ್ರೇಷ್ಟ ಕಾದಂಬರಿಕಾರರು ಮತ್ತು ಲೇಖಕರು ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ್ ಹೇಳಿದರು.  ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಡಾ.ಎಸ್.ಎಲ್ ಭೈರಪ್ಪನವರ 94ನೇ ಜನುಮ ದಿನಾಚರಣೆ’ ಪ್ರಯುಕ್ತ ‘ಡಾ.ಎಸ್.ಎಲ್ ಭೈರಪ್ಪನವರ ಬದುಕು-ಬರಹ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಅವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ […]

Continue Reading

ಯುವಕರು ಸೈನಿಕರಂತೆ ದೇಶ ಸೇವೆ ಮಾಡಲಿ

ಕಲಬುರಗಿ: ದೇಶದ ಪ್ರತಿಯೊಬ್ಬರಲ್ಲಿ ಯುವಕರು ಸೈನಿಕರಂತೆ ದೇಶದ ರಕ್ಷಣೆ, ಒಳಿತಿಗಾಗಿ ಸೇವೆ ಸಲ್ಲಿಸುವುದು ಅಗತ್ಯವಾಗಿದೆ ಎಂದು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಮಾಜಿ ಸೈನಿಕ ಶಿವಶರಣಪ್ಪ ಎಸ್ ತಾವರಖೇಡ್ ಯುವಕರಿಗೆ ಸಲಹೆ ನೀಡಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ‘26ನೇ ಕಾರ್ಗಿಲ್ ವಿಜಯ ದಿನಾಚರಣೆ’ ಅಂಗವಾಗಿ ಏರ್ಪಡಿಸಿದ್ದ ‘ಕಾರ್ಗಿಲ್ ವಿಜಯೋತ್ಸವದ ಯಶೋಗಾಥೆ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮಗಿಷ್ಟವಾದ ಯಾವುದೆ ಕೋರ್ಸ ಅಧ್ಯಯನ ಮಾಡಿಕೊಂಡು, ಕ್ಷೇತ್ರದಲ್ಲಿ […]

Continue Reading

ಶರಣ ಸಾಹಿತ್ಯಕ್ಕೆ ಜಯದೇವಿ ತಾಯಿ ಲಿಗಾಡೆ ಕೊಡುಗೆ ಅನನ್ಯ

ಕಲಬುರಗಿ: ಕರ್ನಾಟಕದ ಗಡಿ ಭಾಗದಲ್ಲಿನ ಮರಾಠಿ ಪ್ರಾಬಲ್ಯದಿಂದ ಕನ್ನಡವನ್ನು ಉಳಿಸಿ, ಬೆಳೆಸುವಲ್ಲಿ ಮತ್ತು ಶರಣ ಸಾಹಿತ್ಯದ ರಕ್ಷಕರಾಗಿ ತಮ್ಮದೆಯಾದ ಅಮೂಲ್ಯವಾದ ಕೊಡುಗೆಯನ್ನು ಶರಣೆ ಜಯದೇವಿ ತಾಯಿ ಲಿಗಾಡೆಯವರು ನೀಡಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಶರಣೆ ಜಯದೇವಿ ತಾಯಿ ಲಿಗಾಡೆಯವರ ಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಆಧ್ಯಾತ್ಮ ಚಿಂತಕಿ, ಸಮಾಜ […]

Continue Reading

ರಾಷ್ಟ್ರದ ಅಭಿವೃದ್ಧಿಗೆ ತೆರಿಗೆಗಳು ಪೂರಕ: ಎಚ್.ಬಿ ಪಾಟೀಲ್

ಕಲಬುರಗಿ: ತೆರಿಗೆ ಪಾವತಿ ಶಿಕ್ಷೆಯಲ್ಲ, ಬದಲಿಗೆ ದೇಶದ ನಾಗರಿಕರ ಜವಾಬ್ದಾರಿಯಾಗಿದೆ. ಸರ್ಕಾರಗಳು ತೆರಿಗೆಗಳಿಂದ ಬರುವ ಆದಾಯದಿಂದ ಮೂಲಭೂತ ಸೌಕರ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಬಳಸಲಾಗುತ್ತದೆ. ರಾಷ್ಟ್ರದ ಅಭಿವೃದ್ಧಿಗೆ ತೆರಿಗೆಗಳು ಪೂರಕವಾಗಿವೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “166ನೇ ರಾಷ್ಟ್ರೀಯ ಆದಾಯ ತೆರಿಗೆ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿವರ್ಷ ‘ಜುಲೈ-24’ ರಂದು ‘ರಾಷ್ಟ್ರೀಯ ಆದಾಯ […]

Continue Reading

ತಿಲಕ್, ಆಜಾದರು ಅಪ್ರತಿಮ ಸ್ವಾತಂತ್ರ‍್ಯ ಹೋರಾಟಗಾರರು

ಕಲಬುರಗಿ: ಬಾಲ್ ಗಂಗಾಧರ ತಿಲಕ್ ಮತ್ತು ಚಂದ್ರಶೇಖರ ಆಜಾದ್ ಅವರು ದೇಶದ ಸ್ವಾತಂತ್ರ‍್ಯದ ಅಪ್ರತಿಮ ಸ್ವಾತಂತ್ರ ಹೋರಾಟಗಾರರಾಗಿದ್ದಾರೆ. ತಿಲಕ್‌ರು ಸ್ವರಾಜ್ಯದ ಪ್ರಮುಖ ಪ್ರತಿಪಾದಕರು. ಆಜಾದ್‌ರು ಕ್ರಾಂತಿಕಾರಕ ಸ್ವಾತಂತ್ರ ಹೋರಾಟಗಾರರು. ಇರ್ವ ಮಹನೀಯರು ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಬಾಲ್ ಗಂಗಾಧರ ತಿಲಕ್ ಮತ್ತು ಚಂದ್ರಶೇಖರ ಆಜಾದ್’ರ ಜನುಮ […]

Continue Reading