ರಾಷ್ಟ್ರ ಧ್ವಜ ದೇಶದ ಸಮಾನತೆ, ಗೌರವದ ಪ್ರತೀಕ

ಕಲಬುರಗಿ: ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ನಡುವೆ ಅಶೋಕ ಚಕ್ರವಿರುವ ಭಾರತ ದೇಶದ ತ್ರಿವರ್ಣ ಧ್ವಜವು ಭಾರತದಲ್ಲಿರುವ ಎಲ್ಲರಿಗೂ ಒಂದೆಯಾಗಿರುವ ಹೆಮ್ಮೆಯ, ಗೌರವ, ಸಮಾನತೆ ಮತ್ತು ಸಾರ್ವಭೌಮತೆ ಸಾರುವ ಚಿಹ್ನೆಯಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನವಾಬಖಾನ್ ಹೇಳಿದರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಸಂಜೆ ಜರುಗಿದ ‘ರಾಷ್ಟ್ರ ಧ್ವಜ ಅಂಗೀಕಾರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ […]

Continue Reading

ಜಂಕ್ ಫುಡ್‌  ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ: ಡಾ. ಅನುಪಮಾ ಕೇಶ್ವಾರ

ಕಲಬುರಗಿ: ಜಂಕ್ ಫುಡ್‌ ಸೇವನೆ ಮಾಡುವುದು ಬೇಡ ಎಂದು ವೈದ್ಯಾಧಿಕಾರಿ ಡಾ. ಅನುಪಮಾ ಎಸ್. ಕೇಶ್ವಾರ ಹೇಳಿದರು.    ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಜಂಕ್ ಫುಡ್‌ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಜಂಕ್ ಫುಡ್’ನಲ್ಲಿ ಹೆಚ್ಚಿನ ಕೊಬ್ಬು, ಸಕ್ಕರೆ, ಉಪ್ಪು ಮತ್ತು ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತವೆ. ಅತಿಯಾಗಿ ಜಂಕ್ ಫುಡ್ ಸೇವನೆಯಿಂದ ಬೊಜ್ಜು, ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಂತಹ […]

Continue Reading

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮೈಲಿಗಲ್ಲು ಚಂದ್ರಯಾನ-3: ಎಚ್.ಬಿ ಪಾಟೀಲ

ಕಲಬುರಗಿ: ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನಿಗೂ ಭೂಮಿಗೆ ನಂಟು. ಚಂದ್ರನಲ್ಲಿರುವ ವಾತಾವರಣ, ಅಲ್ಲಿನ ಮಾಹಿತಿಯ ಬಗ್ಗೆ ವ್ಯಾಪಕವಾಗಿ ಸಂಸೋಧನೆ ಜರುಗುತ್ತಿದ್ದು, ಈ ನಿಟ್ಟನಿಲ್ಲಿ ಭಾರತ ಇತ್ತೀಚಿಗೆ ಚಂದ್ರಯಾನ-3ರ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆ, ಶಿವಾ ವಿದ್ಯಾ ಮಂದಿರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಏರ್ಪಡಿಸಲಾಗಿದ್ದ ‘ವಿಶ್ವ ಚಂದ್ರ’ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾನವ ಪ್ರಥಮ […]

Continue Reading

ಚೆಸ್ ಆಟದಿಂದ ಬುದ್ಧಿಶಕ್ತಿ, ಏಕಾಗ್ರತೆ, ಸೃಜನಶೀಲತೆ ವೃದ್ಧಿ

ಕಲಬುರಗಿ: ಚೆಸ್ ಆಟ ಆಡುವುದರಿಂದ ಏಕಾಗ್ರತೆ, ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. ಇದು ಮೆದುಳಿಗೆ ವ್ಯಾಯಾಮ ನೀಡಿ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಗುರುಲಿಂಗಯ್ಯ ಮಠ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ವಿಶ್ವ ಚೆಸ್ ದಿನಾಚರಣೆ”ಯಲ್ಲಿ ಮಾತನಾಡಿದ ಅವರು, ಚೆಸ್ ಎಲ್ಲಿ ಬೇಕಾದರೂ ಅಭ್ಯಾಸ ಮಾಡಬಹುದು ಮತ್ತು ಭಾಷೆ, ವಯಸ್ಸು, ಲಿಂಗ, ದೈಹಿಕ ಸಾಮರ್ಥ್ಯ ಅಥವಾ ಸಾಮಾಜಿಕ ಸ್ಥಾನಮಾನದ ಅಡೆತಡೆಗಳನ್ನು ಮೀರಿ ಎಲ್ಲರೂ […]

Continue Reading

ಸ್ವಾತಂತ್ರ್ಯ ಚಳುವಳಿಗೆ ನಾಂದಿ ಹಾಡಿದ ಮಂಗಲಪಾಂಡೆ: ನರಸಪ್ಪ ಬಿರಾದಾರ

ಕಲಬುರಗಿ: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತುವ ಮೂಲಕ ಮಂಗಲಪಾಂಡೆ ಸ್ವಾತಂತ್ರ್ಯ ಚಳುವಳಿಗೆ ನಾಂದಿ ಹಾಡಿದ ಅಪ್ರತಿಮ ದೇಶಭಕ್ತ ಎಂದು ಚಿಂತಕ ನರಸಪ್ಪ ಬಿರಾದಾರ ದೇಗಾಂವ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಬೆಳಿಗ್ಗೆ ಜರುಗಿದ ‘ಮಂಗಲಪಾಂಡೆಯವರ ಜನ್ಮದಿನಾಚರಣೆ’ಯಲ್ಲಿ ಮಾತನಾಡಿದ ಅವರು, ವ್ಯಾಪರಕ್ಕಾಗಿ ಭಾರತಕ್ಕೆ ಆಗಮಿಸಿದ ಬ್ರೀಟಿಷರು ಒಡೆದಾಳುವ ನೀತಿಯ ಮೂಲಕ ಸುಮಾರು 250 ವರ್ಷಗಳ ಕಾಲ […]

Continue Reading

ಪಂಚಗುಣ ಪಾಲನೆಯಿಂದ ಮಹಾಪುರಷರಾಗಲು ಸಾಧ್ಯ

ಕಲಬುರಗಿ: ಉತ್ತಮ ಆಲಿಸುವಿಕೆ, ದೈಹಿಕ ಮತ್ತು ಮಾನಸಿಕವಾಗಿ ಶಕ್ತಿ ಹೊಂದುವುದು, ಜೀವನಕ್ಕಾಗಿ ಜ್ಞಾನ ಪಡೆಯುವುದು, ಶೀಲ ಹಾಗೂ ಚಾರಿತ್ರö್ಯ ಮತ್ತು ಇವುಗಳನ್ನು ದಿನನಿತ್ಯ ಪಾಲನೆ ಮಾಡುವ ವೀರವ್ರತ ಎಂಬ ಈ ಪಂಚಗುಣಗಳನ್ನು ಯಾವ ವ್ಯಕ್ತಿ ತನ್ನ ಜೀವನದಲ್ಲಿ ಅಳವಡಿಸಿಕೊಂಡು, ಅವುಗಳನ್ನು ಚಾಚೂ ತಪ್ಪದೇ ಪಾಲನೆ ಮಾಡುತ್ತಾನೆಯೋ, ಆತ ಮಹಾಪುರಷನಾಗಲು ಸಾಧ್ಯವಾಗುತ್ತದೆ ಚಿಂತಕ ಮಹಾದೇವಯ್ಯ ಕರದಳ್ಳಿ ಅಭಿಮತಪಟ್ಟರು. ಗಂಗಾ ನಗರದ ವಿವೇಕಾನಂದ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಸುಂದರ ಜೀವನಕ್ಕಾಗಿ ಪ್ರೇರಣೋಪನ್ಯಾಸ’ ಎಂಬ […]

Continue Reading

ಗಾಂಧಿವಾದಿ, ಶ್ರೇಷ್ಠ ಸಮಾಜ ಸುಧಾರಕ ನೆಲ್ಸನ್ ಮಂಡೇಲಾ ಕೊಡುಗೆ ಅವಿಸ್ಮರಣೀಯ

ಕಲಬುರಗಿ: ದಕ್ಷಿಣ ಆಫ್ರಿಕಾದ ಗಾಂಧಿ ಎಂಬ ಖ್ಯಾತಿ ಪಡೆದಿರುವ ನೆಲ್ಸನ್ ಮಂಡೇಲಾ ಅವರು ಗಾಂಧಿವಾದಿ ಮತ್ತು ಶ್ರೇಷ್ಠ ಸಮಾಜ ಸುಧಾರಕ. ಶಾಂತಿ, ವರ್ಣಭೇದ ನೀತಿ, ಪ್ರಜಾಪ್ರಭುತ್ವ, ಸ್ವಾತಂತ್ರ‍್ಯ, ಸಮಾನತೆ, ವೈವಿಧ್ಯತೆ, ಸಾಮರಸ್ಯಕ್ಕೆ ಮಂಡೇಲಾ ಅವರು ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಶಿವ ನಗರದ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ನೆಲ್ಸನ್ ಮಂಡೇಲಾರ ಜನ್ಮದಿನ- ಅಂತಾರಾಷ್ಟೀಯ ಮಂಡೇಲಾ ದಿನಾಚರಣೆ ಅಥವಾ […]

Continue Reading

ಸಮಾಜಮುಖಿ ವೈದ್ಯರು ದೇಶದ ಅಮೂಲ್ಯ ಆಸ್ತಿ: ಡಾ.ವಿ.ಬಿ ಮಠಪತಿ

ಕಲಬುರಗಿ: ತಮ್ಮ ಜೀವವನ್ನು ಲೆಕ್ಕಿಸದೆ ರೋಗಿಯನ್ನು ಉಪಚರಿಸಿ ಜೀವ ಉಳಿಸುವ ವೈದ್ಯರ ಸೇವೆ ಅಮೂಲ್ಯ ಎಂದು ಸಮಾಜಮುಖಿ ವೈದ್ಯ ಡಾ.ವಿ.ಬಿ ಮಠಪತಿ ಮಾರ್ಮಿಕವಾಗಿ ಹೇಳಿದರು. ನಗರದ ಹುಮನಾಬಾದ್ ರಿಂಗ್ ರಸ್ತೆಯ ನಿಜಾಮಪುರ ಬಡಾವಣೆಯ ಮಠಪತಿ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಸಂಜೆ ಜರುಗಿದ ‘ಸಮಾಜಮುಖಿ ವೈದ್ಯರಿಗೆ ಗೌರವ’ ಕಾರ್ಯಕ್ರಮದಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ವೈದ್ಯರು ತಮ್ಮ ಕ್ಷೇತ್ರವನ್ನು ವಾಣಿಜ್ಯ ದೃಷ್ಟಿಯಿಂದ ನೋಡದೆ, ಸಮಾಜ ಸೇವೆಯೆಂದು ಭಾವಿಸಿ, ರೋಗಿಯನ್ನು ಉಪಚರಿಸುವ ಸಮಾಜಮುಖಿ […]

Continue Reading

‘2030ರ’ವರೆಗೆ ಎಲ್ಲರು ಕೌಶಲಗಳನ್ನು ಹೊಂದುವುದು ವಿಶ್ವಸಂಸ್ಥೆಯ ಗುರಿ 

ಕಲಬುರಗಿ: ಎಲ್ಲಾ ವರ್ಗದವರಿಗೂ ಸಂಪೂರ್ಣ ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯ ಒದಗಿಸುವ ಗುರಿಯನ್ನು ವಿಶ್ವ ಸಂಸ್ಥೆ 2030ರಲ್ಲಿ ಹೊಂದಿದೆ. ಇದನ್ನು ಸಾಧಿಸಲು  ಸದಸ್ಯ ರಾಷ್ಟ್ರಗಳು ಕೈಜೋಡಿಸಬೇಕು ಮತ್ತು ಯುವ ಜನತೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ವಿಶ್ವಸಂಸ್ಥೆ ತಿಳಿಸಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಉಪನ್ಯಾಸ ಎಚ್.ಬಿ ಪಾಟೀಲ್ ಹೇಳಿದರು.     ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ […]

Continue Reading

ಕನ್ನಡ ನಾಡಿಗೆ ಆಲೂರು ವೆಂಕಟರಾಯರ ಕೊಡುಗೆ ಅವಿಸ್ಮರಣೀಯ: ಎಚ್.ಬಿ ಪಾಟೀಲ

ಕಲಬುರಗಿ: ಕನ್ನಡ ನಾಡಿಗೆ ತನ್ನದೆಯಾದ ಭವ್ಯವಾದ ಇತಿಹಾಸ, ಪರಂಪರೆ ಇದೆ. ನಾನಾ ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ನಾಡನ್ನು, ಅಖಂಡವಾಗಿ ಏಕೀಕರಣಗೊಳಿಸಲು ನಿರಂತರವಾಗಿ ಶ್ರಮಿಸಿದ ಆಲೂರು ವೆಂಕಟರಾಯರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಅಭಿಮತಪಟ್ಟರು. ನಗರದ ಡಬರಾಬಾದ ಕ್ರಾಸ್ ಸಮೀಪದ ಪ್ರಭುದೇವ ನಗರದಲ್ಲಿರುವ ನೀಲಕಂಠೇಶ್ವರ ಪ್ರಾಥಮಿಕ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ಆಲೂರು ವೆಂಕಟರಾಯರ 145ನೇ ಜನ್ಮ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದ ಅವರು, […]

Continue Reading