ಸದೃಢ ಆರೋಗ್ಯ– ಮಾದಕವಸ್ತು ಮುಕ್ತ ಕರ್ನಾಟಕಕ್ಕಾಗಿ ಓಟ

ಜಿಲ್ಲೆ

ಕಲಬುರಗಿ: ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಅಪರಾಧ ತಡೆ ಮತ್ತು ತಂಬಾಕು ನಿಷೇಧ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್ – 2025 ಓಟದಲ್ಲಿ 5 ಕಿ.ಮೀ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಹೆಬ್ಬಾಳ ಮಕ್ಕಳು ಭಾಗವಹಿಸಿ ಕ್ರಮವಾಗಿ ಮಹೇಶ 6ನೇ ಸ್ಥಾನ ಮತ್ತು ಸಮೀರ್ 8ನೇ ಸ್ಥಾನ ಪಡೆದಿದ್ದಕ್ಕಾಗಿ ಕಲಬುರಗಿ ನಗರ ಪೊಲಿಸ್ ಆಯುಕ್ತರಿಂದ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಿಗೆ ಇಂದು (ಸೋಮವಾರ) ಶಾಲೆಯಲ್ಲಿ ಪ್ರಭಾರಿ ಮುಖ್ಯ ಗುರುಗಳು ಮತ್ತು ಶಿಕ್ಷಕರಿಂದ ಸನ್ಮಾನಿಸಲಾಯಿತು ಮತ್ತು ತರಬೇತುದಾರ ದೈಹಿಕ ಶಿಕ್ಷಕ ನಾಗರಾಜ ಮಾಳಗೆ ರವರಿಗೆ ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *