ಕೊಂತನಪಲ್ಲಿ: ಮಳೆಗೆ ನೆಲ ಕಚ್ಚಿದ ಪಪ್ಪಾಯಿ ಗಿಡಗಳು

ಸೇಡಂ: ತಾಲೂಕಿನ ಕೊಂತನಪಲ್ಲಿ ಗ್ರಾಮದಲ್ಲಿ ಗುಡುಗು ಮಿಂಚಿನ ಮಳೆಗೆ ಪಪ್ಪಾಯಿ ಗಿಡಗಳು ನೆಲಕ್ಕುರುಳಿ ಬಿದ್ದು ಬೆಳೆ ನಷ್ಟವಾಗಿದೆ. ಗ್ರಾಮದ ರೈತ ಸಂಗಯ್ಯ ಮಾಸ್ಟರ್ ಅವರ 3 ಎಕರೆ ಹೊಲದಲ್ಲಿ 3 ಸಾವಿರ ಪಪ್ಪಾಯಿ ಬೆಳೆದಿದ್ದಾರೆ. ಇದೀಗ ಮಳೆಗೆ ಪಪ್ಪಾಯಿ ಗಿಡಗಳು ನೆಲ ಕಚ್ಚಿವೆ. ಮಳೆಯಿಂದ ಪಪ್ಪಾಯಿ ಹಾಳಾಗಿದೆ.12 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ರೈತ ಸಂಗಯ್ಯ ಮಾಸ್ಟರ್ ಹೇಳಿದರು‌. ಕೊಂತನಪಲ್ಲಿ ಗ್ರಾಮದ ಮತ್ತೊರ್ವ ರೈತ ಮಹೆಬೂಬ ಸೇಡಂ ಅವರ 1 ಎಕರೆ ಹೊಲದಲ್ಲಿ 1 ಸಾವಿರ […]

Continue Reading

ವಾಡಿ ಬಿಜೆಪಿ ಕಛೇರಿಯಲ್ಲಿ ಬಲಿದಾನ ದಿನಾಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹುತಾತ್ಮರ ದಿನದ ಅಂಗವಾಗಿ ಮುಖಂಡರು, ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಗೌರವ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಭಗತ್ ಸಿಂಗ್ ಹಾಗೂ ಅವರ ಸಹಚರರಾದ ಶಿವರಾಮ್ ರಾಜಗುರು, ಸುಖದೇವ್ ಥಾಪರ್ , ತಮ್ಮ ಧೈರ್ಯಶಾಲಿ, ತಾಯ್ನಾಡಿನ ಸೇವೆಗಾಗಿನ ಸಾಹಸ ಜೀವನದಿಂದ ಇಡೀ ದೇಶದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು. ಏಪ್ರಿಲ್ 8, 1929 ರಂದು, ಅವರು ಇಂಕ್ವಿಲಾಬ್ ಜಿಂದಾಬಾದ್ […]

Continue Reading

ಅರಣ್ಯ ಸಂರಕ್ಷಣೆ ಸರ್ವರ ಜವಾಬ್ದಾರಿ: ಪೀರಪ್ಪ ಕಟ್ಟಿ

ಚಿತ್ತಾಪುರ: ಅರಣ್ಯ ಸಂಪತ್ತು ಕಾಪಾಡುವುದರ ಜೊತೆಗೆ ಉಳಿದ ಪ್ರದೇಶದಲ್ಲಿಯೂ ಗಿಡ-ಮರಗಳನ್ನು ಬೆಳೆಸುವದು ಅರಣ್ಯ ಇಲಾಖೆ, ಕೆಲವು ಸಂಘ-ಸಂಸ್ಥೆಗಳು ಮತ್ತು ಆಸಕ್ತ ವ್ಯಕ್ತಿಗಳ ಕಾರ್ಯವಾಗದೆ, ಸರ್ವರ ಜವಾಬ್ದಾರಿಯಾಗಿದೆ ಎಂದು ಉಪ ವಲಯ ಅರಣ್ಯ ಅಧಿಕಾರಿ ಪೀರಪ್ಪ ಕಟ್ಟಿ ಅಭಿಮತಪಟ್ಟರು. ತಾಲೂಕಿನ ಮಾಡಬೂಳ ಸಸ್ಯ ಕ್ಷೇತ್ರದಲ್ಲಿ ಅರಣ್ಯ ಇಲಾಖೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜರುಗಿದ ‘ವಿಶ್ವ ಅರಣ್ಯ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ತನ್ನ ದುರಾಸೆಯಿಂದ ಪರಿಸರದ ಮೇಲೆ ದಬ್ಬಾಳಿಕೆ ಮಾಡಿ, […]

Continue Reading

ತೆಂಗಳಿ: ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ

ತೆಂಗಳಿ: ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ನ್ಯಾಯಬೆಲೆ ಅಂಗಡಿ ವರ್ತಕರ ಸಂಘದ ತಾಲೂಕು ಅಧ್ಯಕ್ಷ ವೀರಭದ್ರಯ್ಯ ಸಾಲಿಮಠ ಮಾತನಾಡಿ, ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಾಂತಿ, ಸಹಬಾಳ್ವೆ ಮತ್ತು ಸಮಾನತೆಯ ಮಹತ್ವ ಸಾರಿ ಮಾನವ ಧರ್ಮಕ್ಕೆ ಜಯವಾಗಲಿ ಎಂದರು. ಭೇಧ ಭಾವಗಳನ್ನು ತೊಡೆದು ಹಾಕಿ ಸಮಾಜದಲ್ಲಿ ಸಮಾನತೆ ಸಾರಿದ ಅವರು ತತ್ವಗಳನ್ನು ಪಾಲಿಸಿದರೆ ಶಾಂತಿ ನೆಲೆಸುತ್ತದೆ, ಸಮಾಜದಲ್ಲಿ ಮಾನವೀಯತೆಯ ಬೀಜ ಬಿತ್ತಿ ಸಮಾಜಕ್ಕೆ ನಾಂದಿ ಹಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ […]

Continue Reading

ಮಕ್ಕಳು ವಿಜ್ಞಾನದ ಆಸಕ್ತಿ ಹೆಚ್ಚಾಗಿ ಬೆಳೆಸಿಕೊಳ್ಳಬೇಕು: ಸಿದ್ದಲಿಂಗ ಸ್ವಾಮಿಜಿ

ಚಿತ್ತಾಪುರ: 21ನೇ ಶತಮಾನದ ವಿಜ್ಞಾನ ತಂತ್ರಜ್ಞಾನದ ಕಾಲವು ಅನೇಕ ಆವಿಷ್ಕಾರ ನಡೆಯುತ್ತಿರುವ ಸಮಯದಲ್ಲಿ ಪ್ರತಿಯೊಬ್ಬರು ವಿಜ್ಞಾನದ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಕ್ರಿಯಾಶೀಲತೆ ಹಾಗೂ ಸೃಜನಶಿಲತೆ ಬೆಳೆಸಲು ವಿಜ್ಞಾನ ವಸ್ತು ಪ್ರದರ್ಶನ ಪೂರಕವಾಗಿ ಕೆಲಸಮಾಡುತ್ತದೆ. ಆಸಕ್ತಿ ಇದ್ದಾಗ ಮಾತ್ರ ಏನಾದರೊಂದು […]

Continue Reading

ಪರೋಪಕಾರ ಕಾರ್ಯ ಕೈಗೊಳ್ಳಿ: ತೆಂಗಳಿ ಶ್ರೀ

ಚಿತ್ತಾಪುರ: ಭಗವಂತ ಕರುಣಿಸಿದ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಪ್ರತಿಯೊಬ್ಬರೂ ಕೈಲಾದಷ್ಟು ಸಮಾಜೋಪಯೋಗಿ, ಪರೋಪಕಾರಿ ಕಾರ್ಯ ಮಾಡಬೇಕು’ ಎಂದು ತೆಂಗಳಿ – ಮಂಗಲಗಿಯ ಡಾ. ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು. ಸಮೀಪದ ಟೆಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಶುಕ್ರವಾರ ರಾತ್ರಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆತ್ತವರ ಸೇವೆ ಮಾಡುವುದು ದೇವರ ಪೂಜೆಗಿಂತ ಶ್ರೇಷ್ಠ ಎಂದರು. ಅನಿಶ್ಚಿತ ಬದುಕಿನಲ್ಲಿ ಶಾಶ್ವತವಾಗಿ ಉಳಿಯಲು ಎಲ್ಲರೂ ಸದ್ಗುಣ, ಸತ್ಯ, ಪ್ರಾಮಾಣಿಕತೆ, ಸಮಾನ […]

Continue Reading

ಸರ್ ಸಿ.ವಿ ರಾಮನ್ ಪ್ರತಿಯೊಬ್ಬ ಭಾರತೀಯರ ಹೆಮ್ಮೆಯ ಪ್ರತೀಕ: ಸುಗುಣಾ ಕೊಳಕೂರ

ಚಿತ್ತಾಪುರ: ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಸರ್ ಸಿ.ವಿ ರಾಮನ್. ಇವರು ಪ್ರತಿಯೊಬ್ಬ ಭಾರತೀಯರ ಹೆಮ್ಮೆ ಎಂದು ವಿಜ್ಞಾನ ಶಿಕ್ಷಕಿ ಸುಗುಣಾ ಕೊಳಕೂರ ಹೇಳಿದರು. ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 28 ಫೆಬ್ರುವರಿ 1928 ರಂದು ಭೌತಶಾಸ್ತ್ರದ ಅತಿದೊಡ್ಡ ಆವಿಷ್ಕಾರವಾದ ರಾಮನ್ ಪರಿಣಾಮ ಜಗತ್ತಿಗೆ ಪರಿಚಯಿಸಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. […]

Continue Reading

ಕೋರವಾರ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ: ಇಂದು ಅಗ್ನಿ ಪ್ರವೇಶ, ನಾಳೆ ಭವ್ಯ ರಥೋತ್ಸವ

ಕಾಳಗಿ: ಕಲ್ಯಾಣ ಕರ್ನಾಟಕದ ಸುಪ್ರಸಿದ್ದ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ಕೋರವಾರ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.27 ಗುರುವಾರ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವದವರೆಗೆ ಅಗ್ನಿಪ್ರವೇಶ ಹಾಗೂ ಫೆ.28 ಶುಕ್ರವಾರ ರಾತ್ರಿ 8 ಗಂಟೆಗೆ ಅಣಿವೀರಭದ್ರೇಶ್ವರ ಭವ್ಯ ರಥೋತ್ಸವ ಜರುಗಲಿದೆ ಎಂದು ಕಾಳಗಿ ತಾಲೂಕು ಗ್ರೇಡ್-1 ತಹಸೀಲ್ದಾರ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷೆ ಘಮಾವತಿ ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಜರಾಯಿ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆಗೆ ಒಳಪಟ್ಟಿರುವ ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಅಂತರಾಜ್ಯಗಳಿಂದ […]

Continue Reading

ಶಿಕ್ಷಣ ಕ್ಷೇತ್ರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅವಿಸ್ಮರಣಿಯ

ಚಿತ್ತಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅವಿಸ್ಮರಣಿಯ ಎಂದು ಪ್ರೌಢ ಶಾಲೆಯ ಮುಖ್ಯಗುರು ಷಣ್ಮುಖಯ್ಯ ಹಿರೇಮಠ ಅಭಿಪ್ರಾಯಪಟ್ಟರು.‌ ತಾಲೂಕಿನ ದಂಡೋತಿ ಗ್ರಾಮದ ಪ್ರೌಢ ಶಾಲೆಯಲ್ಲಿ ಎಸ್‌‌.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಆಯೋಜಿಸಿದ್ದ 3 ತಿಂಗಳ ಟ್ಯೂಷನ್ ಕ್ಲಾಸ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಶಿಕ್ಷಕರ ಷಣ್ಮುಖಯ್ಯ ಹಿರೇಮಠ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಧರ್ಮಸ್ಥಳದಿಂದ ಅತಿಥಿ ಶಿಕ್ಷಕರ ನೇಮಕ, ಶಿಷ್ಯವೇತನ, ಬೆಂಚ್ ಓದಗಣೆ, ಕ್ರೀಡಾ ಉಪಕರಣ ಒದಗಣೆ ಕಾರ್ಯಕ್ರಮ ವೀರೇಂದ್ರ ಹೆಗ್ಗಡೆ […]

Continue Reading

ಮಲಘಾಣ ಶಾಲೆಯ 21 ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಕಾಳಗಿ: ತಾಲೂಕಿನ ಮಲಘಾಣ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ 5 ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು, ಕಸಿವಿಸಿ, ತಲೆಸುತ್ತು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು, ಕಾಳಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಶಾಲೆಗೆ ಬಂದಿರುವ 16 ವಿದ್ಯಾರ್ಥಿಗಳಿಗೆ ಪುನ: ಅದೆ ತರಹದ ಹೊಟ್ಟೆ ನೋವು, ಕಸಿವಿಸಿ, ತಲೆಸುತ್ತು ಈ ಲಕ್ಷಣಗಳು ಕಾಣಿಸಿಕೊಂಡು ಅಸ್ವಸ್ಥರಾಗಿದ್ದು, ತಕ್ಷಣ ಮುಖ್ಯಗುರುಗಳು, ಶಿಕ್ಷಕರು. ಪಾಲಕರು ಮಕ್ಕಳಿಗೆ ಕಾಳಗಿ ಸಮೂದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ […]

Continue Reading