ತೆಂಗಳಿ: ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ

ಗ್ರಾಮೀಣ

ತೆಂಗಳಿ: ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು.

ನ್ಯಾಯಬೆಲೆ ಅಂಗಡಿ ವರ್ತಕರ ಸಂಘದ ತಾಲೂಕು ಅಧ್ಯಕ್ಷ ವೀರಭದ್ರಯ್ಯ ಸಾಲಿಮಠ ಮಾತನಾಡಿ, ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಾಂತಿ, ಸಹಬಾಳ್ವೆ ಮತ್ತು ಸಮಾನತೆಯ ಮಹತ್ವ ಸಾರಿ ಮಾನವ ಧರ್ಮಕ್ಕೆ ಜಯವಾಗಲಿ ಎಂದರು.

ಭೇಧ ಭಾವಗಳನ್ನು ತೊಡೆದು ಹಾಕಿ ಸಮಾಜದಲ್ಲಿ ಸಮಾನತೆ ಸಾರಿದ ಅವರು ತತ್ವಗಳನ್ನು ಪಾಲಿಸಿದರೆ ಶಾಂತಿ ನೆಲೆಸುತ್ತದೆ, ಸಮಾಜದಲ್ಲಿ ಮಾನವೀಯತೆಯ ಬೀಜ ಬಿತ್ತಿ ಸಮಾಜಕ್ಕೆ ನಾಂದಿ ಹಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾ‌.ಪಂ ಉಪಾಧ್ಯಕ್ಷ ವಿಜಯಕುಮಾರ ತುಪ್ಪದ, ಸದಸ್ಯ ಮುಸ್ತಫಾ ಆಫಖಾನ, ಮುಖಂಡರಾದ ಬಸವರಾಜ ಬಸ್ತೆ, ಬಸವರಾಜ ಮಾಡಬೂಳ, ಮಂಜುನಾಥ ಭೇರನ್, ಶಿವಾಜಿ ಮರಾಠ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *