ಕಾಳಗಿ: ಕಲ್ಯಾಣ ಕರ್ನಾಟಕದ ಸುಪ್ರಸಿದ್ದ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ಕೋರವಾರ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.27 ಗುರುವಾರ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವದವರೆಗೆ ಅಗ್ನಿಪ್ರವೇಶ ಹಾಗೂ ಫೆ.28 ಶುಕ್ರವಾರ ರಾತ್ರಿ 8 ಗಂಟೆಗೆ ಅಣಿವೀರಭದ್ರೇಶ್ವರ ಭವ್ಯ ರಥೋತ್ಸವ ಜರುಗಲಿದೆ ಎಂದು ಕಾಳಗಿ ತಾಲೂಕು ಗ್ರೇಡ್-1 ತಹಸೀಲ್ದಾರ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷೆ ಘಮಾವತಿ ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಜರಾಯಿ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆಗೆ ಒಳಪಟ್ಟಿರುವ ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಅಂತರಾಜ್ಯಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಫೆ.27 ಗುರುವಾರ ಬೆಳಗ್ಗೆ ಅಣಿವೀರಭದ್ರೇಶ್ವರ ಮೂರ್ತಿಗೆ ವಿಶೇಷ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಜರುಗುವುದು. ಸಾಯಂಕಾಲ 6 ಗಂಟೆಗೆ ಅಗ್ನಿ ಪೂಜೆ, ನಂತರ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವದವರೆಗೆ ನಾಡಿನ ಪ್ರಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗುವದು.
ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ವರೆಗೆ ಅಣವೀರಭದ್ರೇಶ್ವರ ಪಲ್ಲಕ್ಕಿ ಜೊತೆಗೆ ಪುರವಂತರು, ಭಕ್ತರು ಅಗ್ನಿ ಪ್ರವೇಶ ಮಾಡುವರು. ಫೆ.28 ಶುಕ್ರವಾರ ಸಾಯಂಕಾಲ 4 ಗಂಟೆಗೆ ನಂದಿಧ್ವಜ ಮತ್ತು ಕಳಸ ಮೆರವಣಿಗೆಯು ಕೋರವಾರ ಗ್ರಾಮದಿಂದ ಹೊರಟು ಅಣಿವೀರಭದ್ರೇಶ್ವರ ದೇವಸ್ಥಾನಕ್ಕೆ ತಲುಪುವದು ನಂತರ ರಾತ್ರಿ 8 ಗಂಟೆಗೆ ವಿದ್ಯುತ್ ಹಾಗೂ ಪುಷ್ಪಗಳಿಂದ ಅಲಂಕೃತವಾದ ಅಣಿವೀರಭದ್ರೇಶ್ವರ ಭವ್ಯ ರಥೋತ್ಸವ ಜರುಗುವದು. ಮಾರ್ಚ್ 1 ಶನಿವಾರ ಬೆಳಿಗ್ಗೆ 8 ರಿಂದ 9.30 ರವರೆಗೆ ಮತ್ತು ಸಂಜೆ 4 ರಿಂದ 5.30 ರವರೆಗೆ ಪ್ರಸಿದ್ದ ಜಂಗಿ ಪೈಲ್ವಾನರಿಂದ ಕುಸ್ತಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.