ಪರೋಪಕಾರ ಕಾರ್ಯ ಕೈಗೊಳ್ಳಿ: ತೆಂಗಳಿ ಶ್ರೀ

ಚಿತ್ತಾಪುರ: ಭಗವಂತ ಕರುಣಿಸಿದ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಪ್ರತಿಯೊಬ್ಬರೂ ಕೈಲಾದಷ್ಟು ಸಮಾಜೋಪಯೋಗಿ, ಪರೋಪಕಾರಿ ಕಾರ್ಯ ಮಾಡಬೇಕು’ ಎಂದು ತೆಂಗಳಿ – ಮಂಗಲಗಿಯ ಡಾ. ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು. ಸಮೀಪದ ಟೆಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಶುಕ್ರವಾರ ರಾತ್ರಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆತ್ತವರ ಸೇವೆ ಮಾಡುವುದು ದೇವರ ಪೂಜೆಗಿಂತ ಶ್ರೇಷ್ಠ ಎಂದರು. ಅನಿಶ್ಚಿತ ಬದುಕಿನಲ್ಲಿ ಶಾಶ್ವತವಾಗಿ ಉಳಿಯಲು ಎಲ್ಲರೂ ಸದ್ಗುಣ, ಸತ್ಯ, ಪ್ರಾಮಾಣಿಕತೆ, ಸಮಾನ […]

Continue Reading

ಕೋರವಾರ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ: ಇಂದು ಅಗ್ನಿ ಪ್ರವೇಶ, ನಾಳೆ ಭವ್ಯ ರಥೋತ್ಸವ

ಕಾಳಗಿ: ಕಲ್ಯಾಣ ಕರ್ನಾಟಕದ ಸುಪ್ರಸಿದ್ದ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ಕೋರವಾರ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.27 ಗುರುವಾರ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವದವರೆಗೆ ಅಗ್ನಿಪ್ರವೇಶ ಹಾಗೂ ಫೆ.28 ಶುಕ್ರವಾರ ರಾತ್ರಿ 8 ಗಂಟೆಗೆ ಅಣಿವೀರಭದ್ರೇಶ್ವರ ಭವ್ಯ ರಥೋತ್ಸವ ಜರುಗಲಿದೆ ಎಂದು ಕಾಳಗಿ ತಾಲೂಕು ಗ್ರೇಡ್-1 ತಹಸೀಲ್ದಾರ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷೆ ಘಮಾವತಿ ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಜರಾಯಿ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆಗೆ ಒಳಪಟ್ಟಿರುವ ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಅಂತರಾಜ್ಯಗಳಿಂದ […]

Continue Reading

ಮಲಘಾಣ ಶಾಲೆಯ 21 ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಕಾಳಗಿ: ತಾಲೂಕಿನ ಮಲಘಾಣ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ 5 ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು, ಕಸಿವಿಸಿ, ತಲೆಸುತ್ತು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು, ಕಾಳಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಶಾಲೆಗೆ ಬಂದಿರುವ 16 ವಿದ್ಯಾರ್ಥಿಗಳಿಗೆ ಪುನ: ಅದೆ ತರಹದ ಹೊಟ್ಟೆ ನೋವು, ಕಸಿವಿಸಿ, ತಲೆಸುತ್ತು ಈ ಲಕ್ಷಣಗಳು ಕಾಣಿಸಿಕೊಂಡು ಅಸ್ವಸ್ಥರಾಗಿದ್ದು, ತಕ್ಷಣ ಮುಖ್ಯಗುರುಗಳು, ಶಿಕ್ಷಕರು. ಪಾಲಕರು ಮಕ್ಕಳಿಗೆ ಕಾಳಗಿ ಸಮೂದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ […]

Continue Reading

ಡೋಣಗಾಂವ: ಭೀಮಣ್ಣ ಸಾಲಿ ಹುಟ್ಟುಹಬ್ಬ ಆಚರಣೆ

ಚಿತ್ತಾಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಾಜಿ ಅಧ್ಯಕ್ಷ, ಕೋಲಿ ಸಮಾಜದ ಹಿರಿಯ ಮುಖಂಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ಮುಖಂಡರು, ಯುವಕರು ಹುಟ್ಟು ಹಬ್ಬ ಶುಭಾಶಯ ಕೋರಿದರು. ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಕೋಲಿ ಸಮಾಜದ ಹಿರಿಯ ಮುಖಂಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ವಿವಿಧ ಸಮಾಜದ ಮುಖಂಡರು, ಯುವಕರು ಹುಟ್ಟು ಹಬ್ಬದ ಶುಭಾಶಯ ಕೋರಿದರು. ನಂತರ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಕೋಲಿ ಸಮಾಜದ ತಾಲೂಕು […]

Continue Reading

ವಿದ್ಯಾರ್ಥಿಗಳು ಇತಿಹಾಸದ ಆಸಕ್ತಿ ಬೆಳೆಸಿಕೊಳ್ಳಬೇಕು: ಡಿ.ಎನ್ ಅಕ್ಕಿ

ಚಿತ್ತಾಪುರ: ಮಕ್ಕಳು ಪಠ್ಯದ ಜೊತೆಗೆ ಇತಿಹಾಸದ ಅಧ್ಯಯನ ಕಡೆಗೆ ಆಸಕ್ತಿ ತೋರಬೇಕು, ಅಂದಾಗ ಮಾತ್ರ ನಮ್ಮ ಪರಂಪರೆ, ವೈಭವವನ್ನು ತಿಳಿಯಲು ಸಾಧ್ಯ ಎಂದು ಹಿರಿಯ ಸಂಶೋಧಕ ಡಿ.ಎನ್ ಅಕ್ಕಿ ಹೇಳಿದರು. ಸಮೀಪದ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಾಧಕರೊಂದಿಗೆ ಮಾತುಕತೆ ಮತ್ತು ವಿಶೇಷ ಉಪನ್ಯಾಸ’ ಕಾರ್ಯಕ್ರಮದಲ್ಲಿ ಸಸಿಗೆ ನಿರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನೆಲದ ಸ್ಮಾರಕಗಳನ್ನು ಸಂರಕ್ಷಣೆ ಮಾಡುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೇವಲ ಬೇಲೂರು ಹಳೇಬೀಡು ನಂತಹ ದಕ್ಷಿಣ […]

Continue Reading

ಪಕ್ಷಾತೀತವಾಗಿ ಕೋಲಿ ಸಮಾಜದ ಸಂಘಟನೆಯಾಗಲಿ: ಭೀಮಣ್ಣ ಸಾಲಿ

ಚಿತ್ತಾಪುರ: ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಕೋಲಿ ಸಮಾಜವನ್ನು ಪಕ್ಷಾತೀತವಾಗಿ ಸಂಘಟನೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಸಂಘಟನೆ ಸಶಕ್ತವಾದಾಗ ಸಮಾಜಕ್ಕೆ ನ್ಯಾಯ, ಹಕ್ಕು, ಸೌಲಭ್ಯ, ಸ್ಥಾನಮಾನ ಪಡೆಯಲು ಅನುಕೂಲವಾಗುತ್ತದೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ಹೇಳಿದರು. ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಕೋಲಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಯುಕ್ತ ಜರುಗಿದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಸಂಘಟನೆ ಬಲಗೊಂಡಾಗ ಮಾತ್ರ ಸಮಾಜಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ. ಈ […]

Continue Reading

ಕಣ್ಣು ಜೀವನದ ಪ್ರಮುಖ ಅಂಗ: ಗವಿಮಠ

ಚಿತ್ತಾಪುರ: ಕಣ್ಣು ಜೀವನ ಪ್ರಮುಖ ಅಂಗವಾಗಿದೆ. ಇದರ ಬಗ್ಗೆ ನಿರ್ಲಕ್ಷ್ಯ ಬೇಡ, ಕಣ್ಣಿನ ಬಗ್ಗೆ ತೀವ್ರ ಕಾಳಜಿ ವಹಿಸಬೇಕು ಎಂದು ಕಲಬುರ್ಗಿ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯ ನೇತೃ ತಜ್ಞ ಡಾ. ನಾಗರಾಜ್ ಗವಿಮಠ ಹೇಳಿದರು. ತಾಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ಕಲಬುರಗಿಯ ಸಿದ್ದರಾಮೇಶ್ವರ ಆಸ್ಪತ್ರೆ ಮತ್ತು ವಿಶ್ವ ಜನ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜ್ಞಾನಜ್ಯೋತಿ ಶಾಲೆ ಸಾವಿರ ದೇವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯು […]

Continue Reading