ಸೇಡಂ: ತಾಲೂಕಿನ ಕೊಂತನಪಲ್ಲಿ ಗ್ರಾಮದಲ್ಲಿ ಗುಡುಗು ಮಿಂಚಿನ ಮಳೆಗೆ ಪಪ್ಪಾಯಿ ಗಿಡಗಳು ನೆಲಕ್ಕುರುಳಿ ಬಿದ್ದು ಬೆಳೆ ನಷ್ಟವಾಗಿದೆ.
ಗ್ರಾಮದ ರೈತ ಸಂಗಯ್ಯ ಮಾಸ್ಟರ್ ಅವರ 3 ಎಕರೆ ಹೊಲದಲ್ಲಿ 3 ಸಾವಿರ ಪಪ್ಪಾಯಿ ಬೆಳೆದಿದ್ದಾರೆ. ಇದೀಗ ಮಳೆಗೆ ಪಪ್ಪಾಯಿ ಗಿಡಗಳು ನೆಲ ಕಚ್ಚಿವೆ. ಮಳೆಯಿಂದ ಪಪ್ಪಾಯಿ ಹಾಳಾಗಿದೆ.12 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ರೈತ ಸಂಗಯ್ಯ ಮಾಸ್ಟರ್ ಹೇಳಿದರು.
ಕೊಂತನಪಲ್ಲಿ ಗ್ರಾಮದ ಮತ್ತೊರ್ವ ರೈತ ಮಹೆಬೂಬ ಸೇಡಂ ಅವರ 1 ಎಕರೆ ಹೊಲದಲ್ಲಿ 1 ಸಾವಿರ ಪಪ್ಪಾಯಿ ಗಿಡಗಳು ಮಳೆಗೆ ಹಾನಿಯಾಗಿವೆ. 4 ಲಕ್ಷ ರೂ ನಷ್ಟ ಉಂಟಾಗಿದೆ ಎನ್ನಲಾಗಿದೆ.
ಅದೆ ರೀತಿ ಕೊಂತನಪಲ್ಲಿ ಗ್ರಾಮದ ಪಕ್ಕದ ಗ್ರಾಮ ಸೊಂಪಲ್ಲಿ ಗ್ರಾಮದ ಪರಶುರಾಮ ಸೊಂಪಲ್ಲಿ ಅವರು 2 ಎಕರೆ ಹೊಲದಲ್ಲಿ 2 ಸಾವಿರ ಪಪ್ಪಾಯಿ ಗಿಡಗಳು ಬೆಳೆದಿದ್ದರು, ಮಳೆಯಿಂದ ಹಾನಿಯಾಗಿದೆ. 8 ಲಕ್ಷ ರೂ ನಷ್ಟ ಉಂಟಾಗಿದೆ ಎನ್ನಲಾಗಿದೆ.