ಬಸವೇಶ್ವರ ಮೂರ್ತಿಯ ಜೊತೆಗೆ ತತ್ವವೂ ಎಲ್ಲೆಡೆ ಪಸರಿಸಲಿ: ಬಸವರಾಜ ಪಾಟೀಲ್ ಸೇಡಂ

ಚಿತ್ತಾಪುರ: ವಿಶ್ವಗುರು ಬಸವೇಶ್ವರ ಮೂರ್ತಿಯ ಜೊತೆಗೆ ತತ್ವ ಸಿದ್ಧಾಂತಗಳು ಎಲ್ಲೆಡೆ ಪಸರಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು. ಸಮೀಪದ ರಾವೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಗುರು ಬಸವೇಶ್ವರರ 892ನೇ ಜಯಂತ್ಯೋತ್ಸವ ಹಾಗೂ ಬಸವೇಶ್ವರ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾವೂರ ಗ್ರಾಮದಲ್ಲಿ ಮೂರ್ತಿ ಅನಾವರಣ ಮಾಡಿದ್ದು ಖುಷಿಯ ಸಂಗತಿ. ಆದರ ಜೊತೆಗೆ ಮೂರ್ತಿ ಅನಾವರಣ ಸಮಿತಿಯವರು ನಿತ್ಯವೂ ಈ ಮೂರ್ತಿಯ ಪರಿಸರ ಸ್ವಚ್ಛವಾಗಿಟ್ಟು ಪೂಜೆ ಮಾಡಬೇಕು. ಮಕ್ಕಳಿಗಾಗಿ […]

Continue Reading

ಭಾಗೋಡಿ ಪಿಕೆಪಿಎಸ್‌ ಸಂಘಕ್ಕೆ 12 ನಿರ್ದೇಶಕರ ಅವಿರೋಧ ಆಯ್ಕೆ

ಚಿತ್ತಾಪುರ: ತಾಲೂಕಿನ ಭಾಗೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಸುಭಾಶಚಂದ್ರ ಮುತ್ತಣ್ಣ ಭಾಗೋಡಿ (ಸಾಮಾನ್ಯ), ಶರ್ಮೋದ್ದೀನ್ ಅಬ್ದುಲ್ ಹಮೀದ್ ಭಾಗೋಡಿ (ಸಾಮಾನ್ಯ), ಅಂಬರಾಯ ಹನುಮಂತಪ್ಪ ಕದ್ದರಗಿ (ಸಾಮಾನ್ಯ), ಸಾಬಣ್ಣ ನರಸಪ್ಪ ಭಾಗೋಡಿ (ಸಾಮಾನ್ಯ), ಇಂದುಶೇಖರ ನಾಗಣ್ಣ ಭಾಗೋಡಿ (ಸಾಮಾನ್ಯ), ಶರಣಬಸಪ್ಪ ಪಾಟೀಲ ಶಿವಲಿಂಗಪ್ಪ ಪಾಟೀಲ ಭಾಗೋಡಿ (ಸಾಲಗಾರರಲ್ಲದ ಸಾಮಾನ್ಯ), ಮಲ್ಲಿಕಾರ್ಜುನ ಬಸವರಾಜ ಭಾಗೋಡಿ (ಪರಿಶಿಷ್ಟ ಜಾತಿ), ಸಿದ್ರಾಮಪ್ಪ ಕಾಮಣ್ಣ ಕಾಟಮ್ಮದೇವರಹಳ್ಳಿ (ಪರಿಶಿಷ್ಟ ಪಂಗಡ), […]

Continue Reading

ಏ.27 ರಂದು ನಾಲವಾರದಲ್ಲಿ ಹಳೆಯ ಜಾತ್ರೆ, ಸದ್ಭಕ್ತರ ಹರಕೆಯ ತನಾರತಿ ಉತ್ಸವ

ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಏ. 27 ರಂದು ರವಿವಾರ ಪೀಠಾಧಿಪತಿ ಪೂಜ್ಯಶ್ರೀ ಡಾ. ಸಿದ್ದತೋಟೆಂದ್ರ ಮಹಾಸ್ವಾಮಿಗಳ ದಿವ್ಯ ಸನ್ನಿಧಿಯಲ್ಲಿ ಶ್ರೀಮಠದ ಹಳೆಯ ಜಾತ್ರೆ ಹಾಗೂ ಪ್ರಸಕ್ತ ವರ್ಷದ ಎರಡನೆಯ ತನಾರತಿ ಉತ್ಸವ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ. ಅಕ್ಷಯತದಿಗೆ ಅಮಾವಾಸ್ಯಯ ದಿನ ಬೆಳಿಗ್ಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಲಿದೆ, ಸಂಜೆ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ, ನಾಡಿನ ಹಲವು […]

Continue Reading

ಸಿದ್ದಲಿಂಗ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ಉಚಿತ ಕ್ಷೌರ ಸೇವೆ

ಚಿತ್ತಾಪುರ: ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳ 33ನೇ ಜನ್ಮದಿನದ ಪ್ರಯುಕ್ತ ರಾವೂರನ ಬಾಳಿ ಕಾಂಪ್ಲೆಕ್ಸ್’ನಲ್ಲಿನ ಗುರು ಮೆನ್ಸ್ ಪಾರ್ಲರ್ ವತಿಯಿಂದ ಉಚಿತ ಕ್ಷೌರ ಸೇವೆ ಮಾಡಲಾಯಿತು. ಎರಡು ವರ್ಷಗಳಿಂದ ತಮ್ಮ ವೃತ್ತಿಯಲ್ಲಿ ದುಡಿಯುತ್ತಾ ಪೂಜ್ಯರ ಜನ್ಮದಿನದ ಪ್ರಯುಕ್ತ ಎರಡನೇ ವರ್ಷ ಒಂದು ದಿನ ಸಾರ್ವಜನಿಕರಿಗೆ ಉಚಿತ ಕ್ಷೌರ ಸೇವೆ ಮಾಡುವ ಸಂಕಲ್ಪದೊಂದಿಗೆ ಮಹಾದೇವ ವಡಗೇರಿ, ಅಂಬರೀಷ್ ವಡಗೇರಿ, ಶರಣು ವಡಗೇರಿ, ಭಾಗಣ್ಣ ವಡಗೇರಿ ಮತ್ತು ಗಂಗಾಧರ ವಡಗೇರಿಯವರು ಇಂತಹ ಸತ್ಕಾರ್ಯ […]

Continue Reading

ಸಿದ್ದಲಿಂಗೇಶ್ವರ ಸಂಸ್ಥಾನ ಮಠದಿಂದ ಶಿಕ್ಷಣ ಕ್ರಾಂತಿ: ಮಾತೋಶ್ರೀ ಡಾ.ದಾಕ್ಷಾಯಣಿ ಎಸ್ ಅಪ್ಪ

ಚಿತ್ತಾಪುರ: ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಕಳೆದ 42 ವರ್ಷಗಳಿಂದ ಈ ಭಾಗದ ಜನರ ಆಶಾಕಿರಣವಾಗಿರುವ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ರಾಂತಿ ಮಾಡುತ್ತಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಚೇರ್ಪರ್ಸನ್ ಡಾ. ದಾಕ್ಷಾಯಣಿ ಶರಣಬಸಪ್ಪ ಅಪ್ಪ ಹೇಳಿದರು. ಸಮೀಪದ ರಾವೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಸಿದ್ದಲಿಂಗೇಶ್ವರ ವಸತಿ ನಿಲಯ ಮತ್ತು ಪಾಕಶಾಲೆಯ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿ ಅವರು, ಸಿದ್ದಲಿಂಗೇಶ್ವರ ತ್ರಿವಿಧ ದಾಸೋಹದ ಮೂಲಕ ಈ ಭಾಗದಲ್ಲಿ ಉತ್ತಮ ಸೇವೆ […]

Continue Reading

ದಾಸೋಹ ಮೂರ್ತಿ ಶರಣಬಸವೇಶ್ವರ ಅದ್ಧೂರಿ ರಥೋತ್ಸವ

ಕಾಳಗಿ: ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಏಪ್ರಿಲ್ 18 ರಂದು ಸಾಯಂಕಾಲ 6 ಗಂಟೆಗೆ ಶರಣಬಸವೇಶ್ವರ ರಥೋತ್ಸವವು ಸಹಸ್ರಾರು ಭಕ್ತರ ಜಯ ಘೋಷಣೆಗಳ ಮಧ್ಯೆ ನಡೆಯಿತು. ಗ್ರಾಮದ ಶಾಂತೇಶ್ವರ ಹಿರೇಮಠದ ಡಾ.ಶಾಂತಸೋಮನಾಥ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಭಕ್ತರು ಉತ್ತತ್ತಿ, ಖಾರಿಕ್ ಮತ್ತು ಬಾಳೆ ಹಣ್ಣು ರಥಕ್ಕೆ ಎಸೆದು ಭಕ್ತಿ ಅರ್ಪಿಸಿದರು. ರಾತ್ರಿ ವರ್ಣರಂಜಿತ ಸಿಡಿಮದ್ದು ಸುಡುವ ಕಾರ್ಯಕ್ರಮ ನಡೆಯಿತು. ಏ.17 ರಂದು ರಾತ್ರಿ 8 ಗಂಟೆಗೆ ಪಂಚಲಿಂಗೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆ ಹಾಗೂ ಖ್ಯಾತ ಮಣಿ ಡ್ರಮ್, ಕೆರಳ […]

Continue Reading

ಕೊಂತನಪಲ್ಲಿ: ಮಳೆಗೆ ನೆಲ ಕಚ್ಚಿದ ಪಪ್ಪಾಯಿ ಗಿಡಗಳು

ಸೇಡಂ: ತಾಲೂಕಿನ ಕೊಂತನಪಲ್ಲಿ ಗ್ರಾಮದಲ್ಲಿ ಗುಡುಗು ಮಿಂಚಿನ ಮಳೆಗೆ ಪಪ್ಪಾಯಿ ಗಿಡಗಳು ನೆಲಕ್ಕುರುಳಿ ಬಿದ್ದು ಬೆಳೆ ನಷ್ಟವಾಗಿದೆ. ಗ್ರಾಮದ ರೈತ ಸಂಗಯ್ಯ ಮಾಸ್ಟರ್ ಅವರ 3 ಎಕರೆ ಹೊಲದಲ್ಲಿ 3 ಸಾವಿರ ಪಪ್ಪಾಯಿ ಬೆಳೆದಿದ್ದಾರೆ. ಇದೀಗ ಮಳೆಗೆ ಪಪ್ಪಾಯಿ ಗಿಡಗಳು ನೆಲ ಕಚ್ಚಿವೆ. ಮಳೆಯಿಂದ ಪಪ್ಪಾಯಿ ಹಾಳಾಗಿದೆ.12 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ರೈತ ಸಂಗಯ್ಯ ಮಾಸ್ಟರ್ ಹೇಳಿದರು‌. ಕೊಂತನಪಲ್ಲಿ ಗ್ರಾಮದ ಮತ್ತೊರ್ವ ರೈತ ಮಹೆಬೂಬ ಸೇಡಂ ಅವರ 1 ಎಕರೆ ಹೊಲದಲ್ಲಿ 1 ಸಾವಿರ […]

Continue Reading

ವಾಡಿ ಬಿಜೆಪಿ ಕಛೇರಿಯಲ್ಲಿ ಬಲಿದಾನ ದಿನಾಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹುತಾತ್ಮರ ದಿನದ ಅಂಗವಾಗಿ ಮುಖಂಡರು, ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಗೌರವ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಭಗತ್ ಸಿಂಗ್ ಹಾಗೂ ಅವರ ಸಹಚರರಾದ ಶಿವರಾಮ್ ರಾಜಗುರು, ಸುಖದೇವ್ ಥಾಪರ್ , ತಮ್ಮ ಧೈರ್ಯಶಾಲಿ, ತಾಯ್ನಾಡಿನ ಸೇವೆಗಾಗಿನ ಸಾಹಸ ಜೀವನದಿಂದ ಇಡೀ ದೇಶದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು. ಏಪ್ರಿಲ್ 8, 1929 ರಂದು, ಅವರು ಇಂಕ್ವಿಲಾಬ್ ಜಿಂದಾಬಾದ್ […]

Continue Reading

ಅರಣ್ಯ ಸಂರಕ್ಷಣೆ ಸರ್ವರ ಜವಾಬ್ದಾರಿ: ಪೀರಪ್ಪ ಕಟ್ಟಿ

ಚಿತ್ತಾಪುರ: ಅರಣ್ಯ ಸಂಪತ್ತು ಕಾಪಾಡುವುದರ ಜೊತೆಗೆ ಉಳಿದ ಪ್ರದೇಶದಲ್ಲಿಯೂ ಗಿಡ-ಮರಗಳನ್ನು ಬೆಳೆಸುವದು ಅರಣ್ಯ ಇಲಾಖೆ, ಕೆಲವು ಸಂಘ-ಸಂಸ್ಥೆಗಳು ಮತ್ತು ಆಸಕ್ತ ವ್ಯಕ್ತಿಗಳ ಕಾರ್ಯವಾಗದೆ, ಸರ್ವರ ಜವಾಬ್ದಾರಿಯಾಗಿದೆ ಎಂದು ಉಪ ವಲಯ ಅರಣ್ಯ ಅಧಿಕಾರಿ ಪೀರಪ್ಪ ಕಟ್ಟಿ ಅಭಿಮತಪಟ್ಟರು. ತಾಲೂಕಿನ ಮಾಡಬೂಳ ಸಸ್ಯ ಕ್ಷೇತ್ರದಲ್ಲಿ ಅರಣ್ಯ ಇಲಾಖೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜರುಗಿದ ‘ವಿಶ್ವ ಅರಣ್ಯ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ತನ್ನ ದುರಾಸೆಯಿಂದ ಪರಿಸರದ ಮೇಲೆ ದಬ್ಬಾಳಿಕೆ ಮಾಡಿ, […]

Continue Reading

ತೆಂಗಳಿ: ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ

ತೆಂಗಳಿ: ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ನ್ಯಾಯಬೆಲೆ ಅಂಗಡಿ ವರ್ತಕರ ಸಂಘದ ತಾಲೂಕು ಅಧ್ಯಕ್ಷ ವೀರಭದ್ರಯ್ಯ ಸಾಲಿಮಠ ಮಾತನಾಡಿ, ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಾಂತಿ, ಸಹಬಾಳ್ವೆ ಮತ್ತು ಸಮಾನತೆಯ ಮಹತ್ವ ಸಾರಿ ಮಾನವ ಧರ್ಮಕ್ಕೆ ಜಯವಾಗಲಿ ಎಂದರು. ಭೇಧ ಭಾವಗಳನ್ನು ತೊಡೆದು ಹಾಕಿ ಸಮಾಜದಲ್ಲಿ ಸಮಾನತೆ ಸಾರಿದ ಅವರು ತತ್ವಗಳನ್ನು ಪಾಲಿಸಿದರೆ ಶಾಂತಿ ನೆಲೆಸುತ್ತದೆ, ಸಮಾಜದಲ್ಲಿ ಮಾನವೀಯತೆಯ ಬೀಜ ಬಿತ್ತಿ ಸಮಾಜಕ್ಕೆ ನಾಂದಿ ಹಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ […]

Continue Reading