ಬಾಯಲ್ಲಿ 82 ಗ್ರಾಂ ಚಿನ್ನದ ಕ್ಯಾಪ್ಸೂಲ್‌: ಬೆಂಗಳೂರಲ್ಲಿ ಸಿಕ್ಕಿಬಿದ್ದ ದುಬೈ ಪ್ರಯಾಣಿಕ

ಸುದ್ದಿ ಸಂಗ್ರಹ ಬೆಂಗಳೂರುಚಿನ್ನವನ್ನು ಅಕ್ರಮವಾಗಿ ಸಾಗಿಸಲು ಪ್ರಯಾಣಿಕನೊಬ್ಬ ವಿಚಿತ್ರ ಮಾರ್ಗ ಅನುಸರಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ದುಬೈನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಬಾಯಿಯಲ್ಲಿ ಬರೋಬ್ಬರಿ 82 ಗ್ರಾಂ ಚಿನ್ನ ಪತ್ತೆಯಾಗಿದೆ. ಮಹಮ್ಮದ್ ಸಿರಾಜ್ ಎಂಬ ಪ್ರಯಾಣಿಕ ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಿದ್ದ. ಬಳಿಕ ಬೆಂಗಳೂರಿನಿಂದ ಗಾಜಿಯಾಬಾದ್‌ಗೆ ತೆರಳಲು ಸಿದ್ಧವಾಗಿದ್ದ. ಈ ವೇಳೆ ಏರ್‌ಪೋರ್ಟ್‌ನಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಆತನ ವರ್ತನೆ ಅನುಮಾನ ಮೂಡಿಸಿದೆ. ಸಿಬ್ಬಂದಿ ಆತನನ್ನು ಪರಿಶೀಲಿಸಿದರೂ ಮೊದಲಿಗೆ ಯಾವುದೆ ಅನುಮಾನಾಸ್ಪದ […]

Continue Reading

ಜುಡೋ ಬಂಜಾರಾ ಫೌಂಡೇಶನ್ ರಾಜ್ಯ ಸಂಚಾಲಕರಾಗಿ ಅನಿಲ್ ಮಹಾರಾಜ್ ಆಯ್ಕೆ

ಸುದ್ದಿ ಸಂಗ್ರಹ ಶಹಾಬಾದ್ಜೂಡೋ ಬಂಜಾರಾ ಫೌಂಡೇಶನ್ ಸಂಘದ ವತಿಯಿಂದ ತರಿ ತಾಂಡಾದ ಅನಿಲ್ ಮಹಾರಾಜ್ ಅವರನ್ನು ಸಂಘದ ರಾಜ್ಯ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ತಮ್ಮನ್ನು ರಾಜ್ಯ ಸಂಚಾಲಕರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಜೂಡೋ ಬಂಜಾರಾ ಫೌಂಡೇಶನ್‌ನ ರಾಜ್ಯಾಧ್ಯಕ್ಷ ಡಾ. ಸುಭಾಶ್ಚಂದ್ರ ರಾಠೋಡ, ಜಿಲ್ಲಾಧ್ಯಕ್ಷ ರಾಜು ಪವಾರ್ ಮುಂಬೈ, ಮುಖಂಡರಾದ ಖೇಮಸಿಂಗ್ ಆಡೆ, ವಿನೋದ್ ಚವಾಣ್ ಕೃಷ್ಣಪ್ಪ ಕಲ್ದೇವರು ಅವರಿಗೆ ಧನ್ಯವಾದಗಳು ಅರ್ಪಿಸಿದರು. ಈ ಸಂದರ್ಭದಲ್ಲಿ ಅನಿಲ್ ಮಹಾರಾಜ್ ಮಾತನಾಡಿ, ‘ನನ್ನ ಮೇಲೆ ಭರವಸೆ ಮತ್ತು ವಿಶ್ವಾಸವಿಟ್ಟು ನೀಡಿರುವ ಈ […]

Continue Reading

1 ಕೋಟಿ ಮತದಾರರ ಡಿಲೀಟ್‌ ಆತಂಕ: ಕೇಂದ್ರ ಚುನಾವಣಾ ಆಯೋಗಕ್ಕೆ CM ಡಿ.ಕೆ ಶಿವಕುಮಾರ್ ಪತ್ರ

ಸುದ್ದಿ ಸಂಗ್ರಹ ಬೆಂಗಳೂರುಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಸುಮಾರು 1 ಕೋಟಿಗೂ ಅಧಿಕ ಮತದಾರರ ಹೆಸರುಗಳು ರದ್ದಾಗುವ ಅಥವಾ ಕೈಬಿಡಲ್ಪಡುವ ಭೀತಿ ಎದುರಾಗಿದ್ದು, ಈ ಸಂಬಂಧ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೆ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದಿರುವ ಅವರು 4 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಕರಡು ಮತದಾರರ […]

Continue Reading

KPSC ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್‌ ಅಮಾನತು

ಸುದ್ದಿ ಸಂಗ್ರಹ ಬೆಂಗಳೂರುಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಅಮಾನತು ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಸಂಪುಟ ಸಭೆ ನಡೆಸಿ ಅಮಾನತಿಗೆ ಸರ್ಕಾರ ಅಧಿಕೃತ ಶಿಫಾರಸು ಮಾಡಿತ್ತು. ರಾಜ್ಯಪಾಲರಿಂದ 2ನೇ ಬಾರಿಗೆ ಅಮಾನತು ಆದೇಶ ಹೊರಬಿದ್ದಿದೆ. ರಾಷ್ಟ್ರಪತಿಗಳು ಮುಂದಿನ ಆದೇಶ ನೀಡುವವರೆಗೂ ಅಮಾನತು ಆದೇಶ ಜಾರಿಯಲ್ಲಿರಲಿದೆ. ರಾಜ್ಯ ಸಚಿವ ಸಂಪುಟದ ಅನುಮತಿ ಪಡೆಯದೆ ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಈ ಹಿಂದೆ ತಿಳಿಸಿತ್ತು. ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಅಧ್ಯಕ್ಷ […]

Continue Reading

ದೆಹಲಿಯಲ್ಲಿ 2,300ರ ಗಡಿ ದಾಟಿದ ಹಂದಿ ಜ್ವರ ಪ್ರಕರಣ, ಶಾಲೆಗಳಿಗೆ ಸರ್ಕಾರ ಕಟ್ಟೆಚ್ಚರ: ಸಿಎಂ ತುರ್ತು ಸಭೆ

ಸುದ್ದಿ ಸಂಗ್ರಹ ನವದೆಹಲಿರಾಷ್ಟ್ರ ರಾಜಧಾನಿ ದೆಹಲಿಯಲ್ಲಿ H1N1 (ಹಂದಿ ಜ್ವರ) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಇಂದು ತುರ್ತು ಪರಿಶೀಲನಾ ಸಭೆ ಕರೆದಿದ್ದಾರೆ ಎಂದು ಆರೋಗ್ಯ ಸಚಿವ ಪಂಕಜಕುಮಾರ್ ಸಿಂಗ್ ತಿಳಿಸಿದ್ದಾರೆ. ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಮತ್ತು ದೆಹಲಿ ಕ್ಯಾಂಟೋನ್ಮೆಂಟ್ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಅಗತ್ಯ ಪ್ರಮಾಣದಲ್ಲಿ ವೈದ್ಯರು, ಸಿಬ್ಬಂದಿ ಹಾಗೂ ಔಷಧಿಗಳು ಲಭ್ಯವಿವೆ […]

Continue Reading

ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ ದರ: ಕೆಜಿಗೆ ನೂರು ರೂಪಾಯಿಯತ್ತ ಮುನ್ನುಗ್ಗುತ್ತಿದೆ ಬೆಲೆ

ಸುದ್ದಿ ಸಂಗ್ರಹ ಬೆಂಗಳೂರುಕರ್ನಾಟಕದಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಕೆ.ಜಿ ಈರುಳ್ಳಿ ಬೆಲೆ ಪ್ರಸ್ತುತ 60ರಿಂದ 75ಕ್ಕೆ ತಲುಪಿದೆ. ಇದೆ ಪರಿಸ್ಥಿತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಈರುಳ್ಳಿ ದರ 100ರ ಗಡಿ ದಾಟುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಈ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಮಳೆ ಕೊರತೆಯಿಂದಾಗಿ ಈರುಳ್ಳಿ ಇಳುವರಿಯಲ್ಲಿ ಉಂಟಾಗಿರುವ ಕುಸಿತ. ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಅಭಾವ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಸೂಕ್ತ ಕೋಲ್ಡ್ […]

Continue Reading

ನಾಲವಾರ: ಶ್ರಾವಣ ಸಂಭ್ರಮಕ್ಕೆ ವೈಭವದ ಚಾಲನೆ

ಸುದ್ದಿ ಸಂಗ್ರಹ ನಾಲವಾರ ಕಲ್ಯಾಣ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠ ಶ್ರಾವಣದ ಸಂಭ್ರಮದಲ್ಲಿ ಭಕ್ತರ ಆರಾಧ್ಯ ಪರಮಪೂಜ್ಯ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಇಷ್ಟಲಿಂಗ ಮಹಾ ಪಾದಪೂಜೆಯೊಂದಿಗೆ ಈ ಬಾರಿಯ ಶ್ರಾವಣ ವೈಭವಕ್ಕೆ ಎರಡನೇ ಗುರುವಾರ ಚಾಲನೆ ನೀಡಲಾಯಿತು. ಕೈಲಾಸ ಮಂಟಪದ ಸಿದ್ಧಸಿಂಹಾಸನದ ಮೇಲೆ ಪ್ರತಿದಿನ ಗುರುಪಾದ ಪೂಜೆಯ ಝೇಂಕಾರ, ಖ್ಯಾತ ಗಾಯಕರ ಭಕ್ತಿಗೀತೆ, ಮಂತ್ರಘೋಷ, ಇಷ್ಟಲಿಂಗದ ದಿವ್ಯ ದರ್ಶನದೊಂದಿಗೆ ಭಕ್ತರು ಗುರುಗಳ ಪಾದಕ್ಕೆ ನಮಿಸಿ ಕೃತಾರ್ಥರಾಗುತ್ತಿದ್ದಾರೆ. ಪ್ರತಿದಿನ ಮುಂಜಾನೆ ಕೋರಿಸಿದ್ಧೇಶ್ವರರ ಕರ್ತೃ […]

Continue Reading

ಕನ್ನಡಗಿಯ ಮಲ್ಲಿಕಾರ್ಜುನ ದೇವರ ಸಂಭ್ರಮದ ಪಲ್ಲಕ್ಕಿ ಉತ್ಸವ

ಸುದ್ದಿ ಸಂಗ್ರಹ ಕಾಳಗಿತಾಲೂಕಿನ ಹೇರೂರ (ಕೆ) ಬೆಣ್ಣೆತೊರಾ ಜಲಾಶಯ ದಡದ ಸುಕ್ಷೇತ್ರ ಕನ್ನಡಗಿಯ ಮಲ್ಲಿಕಾರ್ಜುನ ದೇವರ ಜಾತ್ರೆ ನಿಮಿತ್ತ ಪಲ್ಲಕ್ಕಿ ಉತ್ಸವ ಶ್ರಾವಣ ಮಾಸದ ಎರಡನೇ ಸೋಮವಾರ ಸಂಭ್ರಮ, ಸಡಗರದಿಂದ ಜರುಗಿತು. ‘ಮಲ್ಲಿಕಾರ್ಜುನ ಮಹಾರಾಜ ಕೀ ಜೈ’ ಎಂಬ ಘೋಷಣೆ ಮುಗಿಲು ಮುಟ್ಟಿತು. ಬೆಳೆಗ್ಗೆ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ಮತ್ತು ಪುಷ್ಪಾಲಂಕಾರ ಮಾಡಲಾಯಿತು. ದೇವಾಲಯದ ಆವರಣದಲ್ಲಿ ವಿವಿಧ ಹೂಗಳಿಂದ ರಚಿತವಾದ ದೊಡ್ಡ ಪ್ರಮಾಣದ ರಂಗೋಲಿ ಚಿತ್ತಾರ ಆಕರ್ಷಿತವಾಗಿತ್ತು. ಅಲಂಕೃತಗೊಂಡ ಮಲ್ಲಿಕಾರ್ಜುನ ದೇವರ ಮೂರ್ತಿ ಒಳಗೊಂಡ […]

Continue Reading

8.43 ಕೋಟಿ ಹಗರಣ ಪ್ರಕರಣ: ಕಿಂಗ್‌ಪಿನ್ ಸಹೋದರನ ಬಂಧನ

ಸುದ್ದಿ ಸಂಗ್ರಹ ಕೊಪ್ಪಳನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಬರೋಬ್ಬರಿ 8.43 ಕೋಟಿ ರೂ ಹಗರಣ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಪ್ರಮುಖ ಆರೋಪಿ ರವೀಂದ್ರಕುಮಾರ್‌ನ ಸಹೋದರ ಅನಿಲಕುಮಾರ್‌ನನ್ನು ಬೆಂಗಳೂರಿನಲ್ಲಿ ಅತ್ಯಂತ ರೋಚಕವಾಗಿ ಬಂಧಿಸಿದ್ದಾರೆ. ನಿವೇಶನ ಕೊಡಿಸುವುದಾಗಿ ನಂಬಿಸಿ ಪ್ರಾಧಿಕಾರದ ಅಧಿಕೃತ ಬ್ಯಾಂಕ್ ಖಾತೆಯಿಂದಲೇ ಸುಮಾರು 40ಕ್ಕೂ ಹೆಚ್ಚು ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ವಂಚಿಸಲಾಗಿತ್ತು. ಈ ಪೈಕಿ ಅನಿಲಕುಮಾರ್ ಖಾತೆಗೆ ಐದಕ್ಕೂ ಹೆಚ್ಚು ಕಂತುಗಳಲ್ಲಿ 1 ಕೋಟಿಗೂ ಅಧಿಕ ಮೊತ್ತ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. […]

Continue Reading

ಯಾದಗಿರಿ: ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆ

ಸುದ್ದಿ ಸಂಗ್ರಹ ಯಾದಗಿರಿಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದ ಹೊರಭಾಗದಲ್ಲಿ ನಡೆದಿದೆ. ರಂಗಯ್ಯ (21) ನಾಪತ್ತೆಯಾದ ಯುವಕ. ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಿ ಸ್ನೇಹಿತರ ಜೊತೆ ಸ್ನಾನಕ್ಕೆ ತೆರಳಿದಾಗ ದುರ್ಘಟನೆ ಸಂಭವಿಸಿದೆ. ನಾಲ್ಕು ಜನ ಸ್ನೇಹಿತರು ನದಿಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದ ಮೂವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ನಾಪತ್ತೆಯಾದ ಇನ್ನೋರ್ವ ಯುವಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಯಾದಗಿರಿ ಗ್ರಾಮೀಣ ಪೊಲೀಸ್ […]

Continue Reading