ಮುತೈದೆಯರು ಸಾಕ್ಷಾತ ದೇವಿ ಸ್ವರೂಪ

ಪಟ್ಟಣ

ಸುದ್ದಿ ಸಂಗ್ರಹ ಶಹಾಬಾದ

ಮುತೈದೆಯರು ಸಾಕ್ಷಾತ ಆದಿ ಶಕ್ತಿ, ಮಹಾಲಕ್ಷ್ಮಿ
ಸ್ವರೂಪರಾಗಿದ್ದು, ಅದ್ದರಿಂದಲೇ ಮುತೈದೆಯರಿಗೆ ಉಡಿ
ತುಂಬಲಾಗುತ್ತದೆ ಎಂದು ಪ್ರವಚನಕಾರ ಪುಟ್ಟರಾಜ ಶಾಸ್ತಿç
ಹಿರೇಮಠ ಹೇಳಿದರು.

ಸುಕ್ಷೇತ್ರ ಮಾಲಗತ್ತಿಯ ಹಿರೋಡೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಪೂಜ್ಯ ಚನ್ನಬಸವ ಶರಣರ ಸಮ್ಮುಖದಲ್ಲಿ ನಡೆದ ಶಿವರಾತ್ರಿ ನಿಮಿತ್ಯ 24ನೇ ವರ್ಷದ ಐದು ದಿನಗಳ
ಸಂಕಲ್ಪ ಸೇವೆಯಲ್ಲಿ 2,500 ಜನ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ದಾಸೋಹ ಮಹಾನ ಮನೆ ಉದ್ಘಾಟನೆ, ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರಿಗೆ ನಾಣ್ಯಗಳಿಂದ ತುಲಾಭಾರ
ಕಾರ್ಯಕ್ರಮದಲ್ಲಿ ಶಿವ ಪುರಾಣ ಪ್ರವಚನ ನೀಡುತ್ತಾ ಮಾತನಾಡಿ, ಶರಣೆ ದಾನಮ್ಮ ದೇವಿ ತಾನು ತುಂಬಿಕೊಂಡಿರುವ ಉಡಿಯನ್ನು ಮಕ್ಕಳಿಲ್ಲದ ಮುತೈದೆಗೆ ಉಡಿ ತುಂಬಿ, ಅವಳಿಗೆ ಮಕ್ಕಳ ಭಾಗ್ಯ
ಕಲ್ಪಿಸಲು ಮುತೈದೆಯರಿಗೆ ಉಡಿ ತುಂಬುವ ಮಹತ್ವವನ್ನು
ಜಗತ್ತಿಗೆ ಸಾರಿದ್ದಾಳೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು ದಾಸೋಹ ಮನೆ ಹಾಗೂ ಧರ್ಮ ಸಭೆಯನ್ನು ಉದ್ಘಾಟಿಸಿದರು.

ಚನ್ನಬಸವ ಶರಣ ದಂಪತಿಗಳಿಂದ ಡಾ.ಚನ್ನವೀರ ಶಿವಾಚಾರ್ಯರಿಗೆ ಪಾದ ಪೂಜೆ, ನಾಣ್ಯಗಳಿಂದ ತುಲಭಾರ ನಡೆಸಲಾಯಿತು. ಚಿ.ದೊಡ್ಡಪ್ಪ ಅಪ್ಪಾ ಸಮ್ಮುಖ ವಹಿಸಿದ್ದರು.

ವೇದಿಕೆ ಮೇಲೆ ಶಾಸಕ ಅಲ್ಲಮಪ್ರಭು ಪಾಟೀಲ, ವಜ್ರಕುಮಾರ ಪಾಟೀಲ, ಶಿವಕಾಂತ ರಾವೂರ, ಐ.ಸಿ ಹೊಸಮನಿ, ಜಯಶ್ರೀ ಎ.ಮಾಲಿಪಾಟೀಲ, ಬಸವರಾಜ
ಬೆಣ್ಣೂರ, ಈಶ್ವರಾಜ ಸಾಲೊಳ್ಳಿ, ಮಲ್ಲಣ್ಣ ಸಣಮೋ, ಮಲ್ಲಿಕಾರ್ಜುನ ಕುಲಕುಂದಿ, ಪಿಎಸ್‌ಐ ಚಂದ್ರಕಾಂತ ಮೆಕಾಲೆ, ಎಎಸ್‌ಐ ಸಾತಲಿಂಗಪ್ಪ ಪಾಟೀಲ
ಸಗರ, ನಾಗರಾಜ ಪೋದ್ದಾರ, ಉಪಸ್ಥಿತರಿದ್ದರು.

ಪತ್ರಕರ್ತರಾದ ಕೆ.ರಮೇಶ ಭಟ್ಟ, ನಿಂಗಣ್ಣ ಜಂಬಗಿ ಮಾತನಾಡಿದರು.

ಭಾರತೀಯ ಸಂಗೀತ ವಿದ್ಯಾಲಯ ವಾಡಿ ತಂಡದವರಿಂದ ಸಂಗೀತ ಸೇವೆ, ಪ್ರತೀಕ್ಷಾ, ದಿವ್ಯಾ ಇಟಗಿ ಸೇರಿದಂತೆ ಮಕ್ಕಳಿಂದ ಭರತ ನಾಟ್ಯ, ನೃತ್ಯ ಪ್ರದರ್ಶನ ನಡೆಯಿತು.

ವೀರೇಶಕುಮಾರ ಸೇಡಂ ಸಂಗೀತ ಸೇವೆ ಸಲ್ಲಿಸಿದರು. ವಿರೇಶಕುಮಾರ ಕಟ್ಟಿ ಸಂಗಾವಿ ತಬಲಾ ಸಾಥ ನೀಡಿದರು.

ಈಶ್ವರ ಮುಗುಳನಾಗಾವ ನಿರೂಪಿಸಿದರು.

ದೇವಸ್ಥಾನದ ಈಶ್ವರ ಯಾದಗಿರಿ, ಬಾಲಕೃಷ್ಣ ಜೋಶಿ, ಧರ್ಮು ಸಣಮೋ, ಅಣವೀರ ಪಡಶೆಟ್ಟಿ, ಶಾಂತಕುಮಾರ ಸಾಲೊಳ್ಳಿ, ಕಾಶಿನಾಥ ಸಣಮೋ, ದೇವೆಂದ್ರ ಪಡಶೆಟ್ಟಿ,ರವಿ ಯರಗೋಳ ಸೇರಿದಂತೆ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *