ಕಲಬುರಗಿ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವಾರು ವಿಧಗಳಲ್ಲಿ ಪ್ರಯೋಜನ ನೀಡುತ್ತದೆ. ಒಂದು ರೀತಿಯಲ್ಲಿ ಇದು ದಿವೌಷಧಿಯಂತೆ ಕೆಲಸ ಮಾಡುತ್ತದೆ ಎಂದು ವೆಲ್‌ಫೇರ್ ಸೊಸೈಟಿಯ ಮಾಜಿ ಅಧ್ಯಕ್ಷ ಈರಣ್ಣ ದಸ್ಮಾ ಹೇಳಿದರು.
ಪಟ್ಟಣದ ವಿದ್ಯಾನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ದೀಪೊತ್ಸವ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತವು ಮನಸ್ಥಿತಿಯನ್ನು ಸುಧಾರಿಸುತ್ತದೆ, ನೋವು, ಆತಂಕ ಕಡಿಮೆ ಮಾಡುತ್ತದೆ. ಭಾವನಾತ್ಮಕ ಅಭಿವ್ಯಕ್ತಿಗೆ ಅವಕಾಶಗಳು ಸುಲಭಗೊಳಿಸುತ್ತದೆ. ಸಂಗೀತ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವು ವಿಧಾನಗಳಲ್ಲಿ ಪ್ರಯೋಜನ ನೀಡುತ್ತದೆ. ಜೀವನದ ಮಹತ್ವವಾದ ದಿನವು ಮಹಾ ಶಿವರಾತ್ರಿಯಂದು ರಾತ್ರಿ ಸಂಗೀತ ಭಜನೆ ಮಾಡಿ ಮಾನಸಿಕ ನೆಮ್ಮೂ ಪಡೆದುಕೊಳ್ಳೊಣ ಎಂದರು.
ಗುರುಲಿಂಗಯ್ಯ ಮಠಪತಿ ಸ್ವಾಗತಿಸಿದರು, ಸಂಗೀತೋತ್ಸವ ಪ್ರಾಯೋಜಕರಾದ ಉಮೇಶ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ಮಹಾನಗರ ಪಾಲಿಕೆ ಸದಸ್ಯೆ ವೆಂಕಮ್ಮ ಗುತ್ತೇದಾರ, ಪಿ.ಎಸ್.ಐ ಶಿವಾನಂದ ವಾಲಿಕಾರ, ದೀಪೋತ್ಸವ ಪ್ರಾಯೋಜಕರಾದ ಶರಣು ವಿಶ್ವನಾಥ ರಟಕಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವೆಲ್‌ಫೇರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ನಿರೂಪಿಸಿ, ವಂದಿಸಿದರು.

ಸಂಜು 6 ಗಂಟೆಯಿಂದ ರಾತ್ರಿ 10.30 ವರೆಗೆ ಸಂಗೀತ ಸೇವೆ ನೀಡಿದ ಕಲಾವಿದರಾದ ಅಣ್ಣಾರಾವ ಮತ್ತಿಮೂಡ, ಶಿವಕುಮಾರ ಪಾಟೀಲ, ಷಣ್ಮುಖಯ್ಯ ಮುತ್ತಗಿ, ಸೂರ್ಯಕಾಂತ ದಂಡೋತಿ, ವಿನೋದ ದಸ್ತಾಪೂರ, ಶರಣಗೌಡ ಪಾಟೀಲ ಪಾಳಾ ಮತ್ತು ಶಿವನ ವೇಷ ಧರಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದುಕೊಟ್ಟರು. ಕುಮಾರ ಮಹಾದೇವ ತೋಟ್ನಳ್ಳಿ, ಏಕಪಾತ್ರ ಅಭಿನಯ ಮಾಡಿದ ಬಾಲರತ್ನ ಪ್ರಶಸ್ತಿ ಪುರಸ್ಕೃತ ವಾಸು ಪಾಟೀಲ, ಭಕ್ತಿಗೀತೆ ಹಾಡಿದ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಆದಿತ್ಯ ಪಾಟೀಲ, ಜನಪದ ಹಾಡುಗಳಿಂದ ಜನಮಮನಗೆದ್ದ ಕಲಾವಿದ ಎಂ.ಎನ್. ಸುಗಂಧಿ, ವಚನಗಳನ್ನು ಸಂಗೀತ ರೂಪದಲ್ಲಿ ಹಾಡಿ ಭಜನೆ ನಡೆಸಿಕೊಟ್ಟ ಅಕ್ಕಮಹದೇವಿ ಮಹಿಳಾ ಟ್ರಸ್ಟ್ನ ಸುಮಾರು 25 ಮಹಿಳೆಯರಿಗೆ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ವತಿಯಿಂದ ಸೇವೆ ಮಾಡಿದ ಇವರನ್ನು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಸಂಜೆ 4.30 ರಿಂದ ರಾತ್ರಿ 9.45ರ ವರೆಗೆ ಸಾಲುಗಟ್ಟಿ ಸಾವಿರಾರು ಭಕ್ತರು ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತ ಹಾಗೂ ಸಂಸ್ಕೃತಿಕ ಕಲಾವಿದರಿಗೆ ಕಾಣಿಕೆ ನೀಡಿ ಪ್ರೋತ್ಸಾಹಿಸಿದರು.