ರಾಜ​ಕುಮಾರ ಗಾಯನದ ಬಗ್ಗೆ ವ್ಯಂಗ್ಯವಾಡಿ ತಲೆಮರೆಸಿಕೊಂಡ ಗಾಯಕ

ರಾಜ್ಯ

ವರನಟ ಡಾ.ರಾಜಕುಮಾರ ಕೇವಲ ಉತ್ತಮ ನಟ ಮಾತ್ರವಲ್ಲ, ಒಳ್ಳೆಯ ಗಾಯಕ ಕೂಡ ಹೌದು. ಅವರ ಧ್ವನಿಯಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಪರಭಾಷೆಯವರೂ ರಾಜ್​ಕುಮಾರ್ ಧ್ವನಿಯನ್ನು ಮೆಚ್ಚಿಕೊಂಡಿದ್ದಾರೆ. ಅವರ ಹಾಡಿನ ಬಗ್ಗೆ, ಅವರ ಕಂಠದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವ ಕೆಲಸವನ್ನು ಯಾರೂ ಮಾಡಿರಲಿಲ್ಲ.

ಆದರೆ ಈಗ ಸಂಜಯನಾಗ ಹೆಸರಿನ ಗಾಯಕ ರಾಜಕುಮಾರ ಬಗ್ಗೆ ಟೀಕೆ ಮಾಡಿ ಸಂಕಷ್ಟ ಎದುರಿಸಿದ್ದಾರೆ. ಅವರಿಗೆ ಎದುರಾದ ಟೀಕೆಗಳಿಂದ ಟ್ವಿಟರ್ ಖಾತೆಯನ್ನೆ ಅಳಿಸಿ ಹಾಕಿದ್ದಾರೆ.

ಸೋಶಿಯಲ್ ಮೀಡಿಯಾ ಬಲವಾಗಿದೆ. ಕನ್ನಡ, ಕರ್ನಾಟಕ ಹಾಗೂ ನಮ್ಮ ನಾಡಿನ ಹೆಮ್ಮೆಯ ನಾಯಕರ ಬಗ್ಗೆ ಟೀಕೆ ಎದುರಾದರೆ ಯಾರೂ ಸಹಿಸುವುದಿಲ್ಲ. ಇತ್ತೀಚೆಗೆ ಟ್ವೀಟ್ ಮಾಡಿದ್ದ ಸಂಜಯನಾಗ, ‘ರಾಜ್​ಕುಮಾರ ಒಳ್ಳೆಯ ನಟ, ಆದರೆ ಅವರ ಧ್ವನಿ ಹಾರಿಬಲ್ ಆಗಿದೆ’ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ.

ಇದಾದ ಬಳಿಕ ಸಂಜಯನಾಗ ಅವರಿಗೆ ಸಾಕಷ್ಟು ಟೀಕೆಗಳು ಕೇಳಿ ಬಂತು. ಆ ಬಳಿಕ ಟ್ವಿಟರ್ ಖಾತೆಯನ್ನೆ ಅವರು ಡಿ-ಆಯಕ್ಟಿವೇಟ್ ಮಾಡಿದ್ದಾರೆ. ಈ ಕಾರಣಕ್ಕೆ ಅನೇಕರು ಟೀಕೆ ಮಾಡಿದ್ದಾರೆ. ‘ಅಂಗಡಿ ಖಾಲಿ ಮಾಡಿದಾನೆ’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಎಲ್ಲಿ, ಎಕ್ಸ್ (ಟ್ವಿಟರ್) ಖಾತೆಯನ್ನು ಅಳಿಸಿ ಹೋಗಿದ್ದಿಯಾ ಎಂದು ಕೆಲವರು ಬರೆದುಕೊಂಡಿದ್ದಾರೆ.

ರಾಜ​ಕುಮಾರ ಕಂಠದಲ್ಲಿ ಹಲವು ಹಾಡುಗಳು ಮೂಡಿ ಬಂದಿವೆ. ಯಾರೇ ಕೂಗಾಡಲಿ.., ನಾರಿಯಾ ಸೀರೆ ಕದ್ದ.., ಅಶ್ವಮೇಧ.. ರೀತಿಯ ಹಾಡುಗಳನ್ನು ಹಾಡಿದ್ದಾರೆ. ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು.., ಅರಿಷಿಣ ಕುಂಕುಮ.. ಹಾಡಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇಷ್ಟು ಉತ್ತಮ ಗಾಯಕನ ಬಗ್ಗೆ ಟೀಕೆ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.

Leave a Reply

Your email address will not be published. Required fields are marked *