ದಾಸೋಹ ಮೂರ್ತಿ ಶರಣಬಸವೇಶ್ವರ ಅದ್ಧೂರಿ ರಥೋತ್ಸವ

ಕಾಳಗಿ: ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಏಪ್ರಿಲ್ 18 ರಂದು ಸಾಯಂಕಾಲ 6 ಗಂಟೆಗೆ ಶರಣಬಸವೇಶ್ವರ ರಥೋತ್ಸವವು ಸಹಸ್ರಾರು ಭಕ್ತರ ಜಯ ಘೋಷಣೆಗಳ ಮಧ್ಯೆ ನಡೆಯಿತು. ಗ್ರಾಮದ ಶಾಂತೇಶ್ವರ ಹಿರೇಮಠದ ಡಾ.ಶಾಂತಸೋಮನಾಥ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಭಕ್ತರು ಉತ್ತತ್ತಿ, ಖಾರಿಕ್ ಮತ್ತು ಬಾಳೆ ಹಣ್ಣು ರಥಕ್ಕೆ ಎಸೆದು ಭಕ್ತಿ ಅರ್ಪಿಸಿದರು. ರಾತ್ರಿ ವರ್ಣರಂಜಿತ ಸಿಡಿಮದ್ದು ಸುಡುವ ಕಾರ್ಯಕ್ರಮ ನಡೆಯಿತು. ಏ.17 ರಂದು ರಾತ್ರಿ 8 ಗಂಟೆಗೆ ಪಂಚಲಿಂಗೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆ ಹಾಗೂ ಖ್ಯಾತ ಮಣಿ ಡ್ರಮ್, ಕೆರಳ […]

Continue Reading

ಮೊದಲ ದಿನ ಕೇಸರಿ 2 ಸಿನಿಮಾ ಗಳಿಸಿದ್ದೆಷ್ಟು ? ಗೆದ್ದರಾ ಅಕ್ಷಯಕುಮಾರ

‘ಕೇಸರಿ 2’ ಸಿನಿಮಾ ಮೊದಲ ದಿನ ಸಾಧಾರಣ ಮೊತ್ತ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಮೊದಲ ದಿನ ಈ ಸಿನಿಮಾ ಗಳಿಸಿರುವುದು 7.50 ಕೋಟಿ ರೂ. ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್​ನಿಂದ ಸುಮಾರು 1.50 ಕೋಟಿ ಹಣ ಗಳಿಕೆಯಾಗಿತ್ತು. ಎಲ್ಲವೂ ಸೇರಿ ಮೊದಲ ದಿನಕ್ಕೆ ಕೇವಲ 7.50 ಕೋಟಿ ರೂ ಕಲೆಕ್ಷನ್ ಆಗಿದೆ. ಆ ಮೂಲಕ ಅಕ್ಷಯಕುಮಾರ ಮತ್ತೊಂದು ಸಾಧಾರಣ ಓಪನಿಂಗ್ ಪಡೆದುಕೊಂಡಿದೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಸನ್ನಿ ಡಿಯೋಲ್​ರ ಜಾಟ್ ಸಿನಿಮಾ ಮೊದಲ ದಿನ 7.40 ಕೋಟಿ […]

Continue Reading

ಟೆಂಗಳಲ್ಲಿ101 ಜಂಗಮರ ಪಾದಪೂಜೆ

ಕಾಳಗಿ: ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಅಂಡಗಿ ಮನೆತನದಿಂದ ಪ್ರತಿವರ್ಷದಂತೆ ಈ ವರ್ಷವೂ ಭೀಮೇಶ್ವರ ರಥೋತ್ಸವದ ಮರುದಿನ ಏ.19 ರಂದು ಶನಿವಾರ 101 ಜಂಗಮರ ಪಾದಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ಡಾ.ಶಾಂತಸೋಮನಾಥ ಶಿವಾಚಾರ್ಯರ ಸಾನಿಧ್ಯದಲ್ಲಿ ಸಿದ್ರಾಮಪ್ಪ ಅಂಡಗಿ ಅವರಿಂದ ಜಂಗಮರ ಪಾದಪೂಜೆ ಜರುಗಲಿದೆ ಎಂದು ಟೆಂಗಳಿಯ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಜ್ಞಾನದ ಊರು ಚಿತ್ತಾಪುರ, ಏಷ್ಯಾ ಖಂಡದ ಪ್ರಾಚೀನ ವಿಶ್ವವಿದ್ಯಾಲಯ ನಾಗಾವಿ

ಚಿತ್ತಾಪುರ: ಚಿತ್ತ ಎಂದರೆ ಜ್ಞಾನ, ಪುರ ಎಂದರೆ ಊರು. ಜ್ಞಾನದ ಊರು ಚಿತ್ತಾಪುರವಾಗಿದೆ. ನಾಗಾವಿ ವಿಶ್ವವಿದ್ಯಾಲಯ ವಿಶ್ವದ ಪ್ರಾಚೀನ ಮತ್ತು ದೊಡ್ಡ ವಿಶ್ವವಿದ್ಯಾಲಯವಾಗಿತ್ತು. ಆಕ್ಸಫರ್ಡ ಮತ್ತು ಕೆಂಬ್ರಿಜ್ ವಿಶ್ವವಿದ್ಯಾಲಯದಂತೆ ಮೆರೆದ ನಮ್ಮ ನಾಗಾವಿ ವಿಶ್ವವಿದ್ಯಾಲಯ ಮತ್ತು ಗತ ವೈಭವ ಪುನಃ ಮರುಕಳಿಸಬೇಕಾಗಿದೆ ಎಂದು ಸಂಶೋಧಕ ಸಾಹಿತಿ ಮುಡಬಿ ಗುಂಡೇರಾವ ಆಶಯ ವ್ಯಕ್ತಪಡಿಸಿದರು. ಪಟ್ಟಣದ ಐತಿಹಾಸಿಕ, ಪಾರಂಪರಿಕ ನಾಗಾವಿಯ ತ್ರೈಪುರುಷ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ […]

Continue Reading

ಕೊಂತನಪಲ್ಲಿ: ಮಳೆಗೆ ನೆಲ ಕಚ್ಚಿದ ಪಪ್ಪಾಯಿ ಗಿಡಗಳು

ಸೇಡಂ: ತಾಲೂಕಿನ ಕೊಂತನಪಲ್ಲಿ ಗ್ರಾಮದಲ್ಲಿ ಗುಡುಗು ಮಿಂಚಿನ ಮಳೆಗೆ ಪಪ್ಪಾಯಿ ಗಿಡಗಳು ನೆಲಕ್ಕುರುಳಿ ಬಿದ್ದು ಬೆಳೆ ನಷ್ಟವಾಗಿದೆ. ಗ್ರಾಮದ ರೈತ ಸಂಗಯ್ಯ ಮಾಸ್ಟರ್ ಅವರ 3 ಎಕರೆ ಹೊಲದಲ್ಲಿ 3 ಸಾವಿರ ಪಪ್ಪಾಯಿ ಬೆಳೆದಿದ್ದಾರೆ. ಇದೀಗ ಮಳೆಗೆ ಪಪ್ಪಾಯಿ ಗಿಡಗಳು ನೆಲ ಕಚ್ಚಿವೆ. ಮಳೆಯಿಂದ ಪಪ್ಪಾಯಿ ಹಾಳಾಗಿದೆ.12 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ರೈತ ಸಂಗಯ್ಯ ಮಾಸ್ಟರ್ ಹೇಳಿದರು‌. ಕೊಂತನಪಲ್ಲಿ ಗ್ರಾಮದ ಮತ್ತೊರ್ವ ರೈತ ಮಹೆಬೂಬ ಸೇಡಂ ಅವರ 1 ಎಕರೆ ಹೊಲದಲ್ಲಿ 1 ಸಾವಿರ […]

Continue Reading

ಅವಹೇಳನಕಾರಿ ಜಾಹೀರಾತು ಆರೋಪ: Uber ವಿರುದ್ಧ ಮೊಕದ್ದಮೆ ಹೂಡಿದ RCB

ನವದೆಹಲಿ: ಭಾರತೀಯ ಪ್ರೀಮಿಯರ್ ಲೀಗ್ (IPL)ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕಬ್ಯಾಟರ್ ಟ್ರಾವಿಸ್ ಹೆಡ್ ಅಭಿನಯಿಸಿರುವ ಉಬರ್‌ನಜಾಹೀರಾತೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡವನ್ನು ನ್ಯಾಯಾಲಯದ ಮೊರೆಹೋಗುವಂತೆ ಮಾಡಿದೆ. ಟ್ರಾವಿಸ್ ಹೆಡ್ ಕಳ್ಳಹೆಜ್ಜೆಯೊಂದಿಗೆ ಕ್ರೀಡಾಂಗಣದೊಳಗೆಕಾಲಿಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂಹೈದರಬಾದ್ ತಂಡದ ನಡುವಿನ ಪಂದ್ಯದ ಫಲಕದಲ್ಲಿ ಸ್ಪೇಪೇಯಿಂಟ್ ಬಳಸಿ ‘ರಾಯಲಿ ಚಾಲೆಂಜ್ ಬೆಂಗಳೂರು’ಎಂದು ಬದಲಿಸುತ್ತಾರೆ. ಆ ಹೊತ್ತಿಗೆ ಭದ್ರತಾ ಸಿಬ್ಬಂದಿ ಇವರನ್ನು ಬೆನ್ನಟ್ಟುತ್ತಾರೆ. ಉಬರ್‌ನ ಮೂರು ನಿಮಿಷಗಳಲ್ಲಿ ವಾಹನ ಸೌಲಭ್ಯವನ್ನು ಪಡೆದು ಬೈಕ್‌ನಲ್ಲಿ ಹೆಡ್‌ ಪರಾರಿಯಾಗುತ್ತಾರೆ. ಮೂರು ನಿಮಿಷಗಳಲ್ಲಿ ತನ್ನ ಸೇವೆ […]

Continue Reading

ಭಾರತೀಯರು ಕ್ಯಾಡ್ಬರಿ ಜೆಮ್ಸ್‌ನಂತೆ Dolo-650 ಮಾತ್ರೆ ತೆಗೆದುಕೊಳ್ಳುತ್ತಾರೆ: ವೈದ್ಯರೊಬ್ಬರ ಪೋಸ್ಟ್ ವೈರಲ್

ಭಾರತದಲ್ಲಿ ಪ್ಯಾರಸಿಟಮಾಲ್ ವ್ಯಾಪಕವಾಗಿ ಲಭ್ಯವಿದೆ. ಅನೇಕ ಜನರು ಜ್ವರ ಬಂದರೆ ಸಾಕು ಆ ಮಾತ್ರೆ ತೆಗೆದುಕೊಳ್ಳುತ್ತಾರೆ. ಈ ಪೈಕಿ ಲಭ್ಯವಿರುವ ವಿವಿಧ ಬ್ರ್ಯಾಂಡ್‌ಗಳಲ್ಲಿ ‘ಡೋಲೋ 650’ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಈ ಪ್ರವೃತ್ತಿಯನ್ನು ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಆರೋಗ್ಯ ಶಿಕ್ಷಕ ಪಳನಿಯಪ್ಪನ್ ಮಾಣಿಕ್ಕಮ್ ಎತ್ತಿ ತೋರಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಭಾರತೀಯರು ಡೋಲೋ 650 ಅನ್ನು ಕ್ಯಾಡ್ಬರಿ ಜೆಮ್ಸ್‌ನಂತೆ ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ. ಭಾರತದಲ್ಲಿ ವೈದ್ಯರು ಸಾಮಾನ್ಯವಾಗಿ […]

Continue Reading

ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ಸಕ್ಸಸ್​: ಲಾರಿ ಮಾಲೀಕರ ಮುಷ್ಕರ ವಾಪಸ್

ಬೆಂಗಳೂರು: ಲಾರಿ ಮಾಲೀಕರ ಸಂಘದೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡೆಸಿದ ಎರಡನೇ ಸಭೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ವಾಪಸ್​ ತೆಗೆದುಕೊಳ್ಳುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ ಘೋಷಣೆ ಮಾಡಿದ್ದಾರೆ. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಷ್ಕರ ಈ ಸಮಯದಿಂದಲೇ ವಾಪಸ್ ಪಡೆಯುತ್ತೆನೆ. ಸಚಿವರು ಬಹುತೇಕ ಬೇಡಿಕೆ ಈಡೇರಿಸಿದ್ದಾರೆ. ಸಚಿವರಿಗೆ ಧನ್ಯವಾದ ತಿಳಿಸುತ್ತೆನೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಿದೆ 20 ವರ್ಷಗಳಿಂದ ಈಡೇರದ ಬೇಡಿಕೆ ಸಚಿವ ರಾಮಲಿಂಗಾರೆಡ್ಡಿ ಈಡೇರಿಸಿದ್ದಾರೆ ಎಂದರು. […]

Continue Reading

ಹಿಮೋಫಿಲಿಯಾ ಅನುವಂಶಿಕ ಕಾಯಿಲೆ: ಡಾ.ರಾಜಶೇಖರ ಪಾಟೀಲ

ಕಲಬುರಗಿ: ರಕ್ತ ಹೆಪ್ಪುಗಟ್ಟುವ ಕ್ರಿಯೆಗೆ ಬೇಕಾಗುವ ಅಂಶಗಳಲ್ಲಿ ಕೆಲವು ಅಂಶಗಳ ತೀವ್ರ ಕೊರತೆಯಿಂದ ದೇಹದಲ್ಲಿ ಗಾಯಗಳಾದರೆ, ರಕ್ತನಾಳಗಳಿಗೆ ಯಾವುದೆ ಪೆಟ್ಟಾದರೆ ರಕ್ತಸ್ರಾವ ನಿರಂತರವಾಗುತ್ತದೆ. ಸಾಮಾನ್ಯವಾಗಿ ಈ ರೋಗದ ಮುಖ್ಯ ಲಕ್ಷಣ ಎಂದರೆ ನಿರಂತರ ರಕ್ತ ಸ್ರಾವವಾಗುವದು. ಇದರ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದು ಹಿರಿಯ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಹೇಳಿದರು. ನಗರದ ಖಾದ್ರಿ ಚೌಕ್’ನ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ವಿಶ್ವ ಹಿಮೋಫಿಲಿಯಾ ದಿನಾಚರಣೆ”ಯಲ್ಲಿ ಮಾತನಾಡಿದ ಅವರು, […]

Continue Reading

50 ಕೋಟಿಗೆ ನಾಯಿ ಖರೀದಿ ಮಾಡಿದ್ದೆನೆ ಅಂತಿದ್ದ ಸತೀಶ್ ಮನೆ ಮೇಲೆ ಇಡಿ ದಾಳಿ: ಬಯಲಾಯ್ತು ಸತ್ಯ

ಬೆಂಗಳೂರು: 50 ಕೋಟಿ ರೂ ಕೊಟ್ಟು ವಿಶ್ವದಲ್ಲೇ ದುಬಾರಿಯಾಗಿರುವ ಶ್ವಾನ ಖರೀದಿ ಮಾಡಿದ್ದೆನೆ ಎಂದು ಹೇಳುತ್ತಿದ್ದ ಬೆಂಗಳೂರಿನ ಶ್ವಾನ ಪ್ರೇಮಿ ಸತೀಶ್‌ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತೀಶ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು ಇಂದು ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಬೆಲೆ 50 ಕೋಟಿ ಅನ್ನೊದು ಸುಳ್ಳು ಎಂಬುದು ಗೊತ್ತಾಗಿದೆ. ಸದ್ಯ ಸ್ಥಳದಲ್ಲೆ ಬೀಡುಬಿಟ್ಟಿರುವ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಸತೀಶ್‌ 50 ಕೋಟಿ […]

Continue Reading