ಕಾಳಗಿ: ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಅಂಡಗಿ ಮನೆತನದಿಂದ ಪ್ರತಿವರ್ಷದಂತೆ ಈ ವರ್ಷವೂ ಭೀಮೇಶ್ವರ ರಥೋತ್ಸವದ ಮರುದಿನ ಏ.19 ರಂದು ಶನಿವಾರ 101 ಜಂಗಮರ ಪಾದಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಡಾ.ಶಾಂತಸೋಮನಾಥ ಶಿವಾಚಾರ್ಯರ ಸಾನಿಧ್ಯದಲ್ಲಿ ಸಿದ್ರಾಮಪ್ಪ ಅಂಡಗಿ ಅವರಿಂದ ಜಂಗಮರ ಪಾದಪೂಜೆ ಜರುಗಲಿದೆ ಎಂದು ಟೆಂಗಳಿಯ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.