ಕಲಬುರಗಿ: ರಕ್ತ ಹೆಪ್ಪುಗಟ್ಟುವ ಕ್ರಿಯೆಗೆ ಬೇಕಾಗುವ ಅಂಶಗಳಲ್ಲಿ ಕೆಲವು ಅಂಶಗಳ ತೀವ್ರ ಕೊರತೆಯಿಂದ ದೇಹದಲ್ಲಿ ಗಾಯಗಳಾದರೆ, ರಕ್ತನಾಳಗಳಿಗೆ ಯಾವುದೆ ಪೆಟ್ಟಾದರೆ ರಕ್ತಸ್ರಾವ ನಿರಂತರವಾಗುತ್ತದೆ. ಸಾಮಾನ್ಯವಾಗಿ ಈ ರೋಗದ ಮುಖ್ಯ ಲಕ್ಷಣ ಎಂದರೆ ನಿರಂತರ ರಕ್ತ ಸ್ರಾವವಾಗುವದು. ಇದರ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದು ಹಿರಿಯ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಹೇಳಿದರು.
ನಗರದ ಖಾದ್ರಿ ಚೌಕ್’ನ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ವಿಶ್ವ ಹಿಮೋಫಿಲಿಯಾ ದಿನಾಚರಣೆ”ಯಲ್ಲಿ ಮಾತನಾಡಿದ ಅವರು, ಇದು ಬಾಹ್ಯ ಅಥವಾ ಆಂತರಿಕ ರಕ್ತಸ್ರಾವವಾಗಿರಬಹುದು. ಚಾಲ್ತಿಯಲ್ಲಿರುವ ಯಾವ ವೈದ್ಯಕೀಯ ಕ್ರಮಗಳಿಂದಲೂ ಈ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ, ರೋಗಿಯನ್ನು ಸಾವಿನ ದವಡೆಯಿಂದ ಪಾರು ಮಾಡಬಲ್ಲ ತಾತ್ಕಾಲಿಕ ಚಿಕಿತ್ಸೆ ನೀಡಬಹುದು. ಹಿಮೋಫಿಲಿಯಾದ ಬಗ್ಗೆ ನಿರ್ಲಕ್ಷ್ಯ ಬೇಡ ಎಂದರು.
ಕಾರ್ಯಕ್ರಮದಲ್ಲಿ ಎಚ್.ಬಿ ಪಾಟೀಲ, ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್. ಬಿರಾದಾರ, ಸಿದ್ದಾರೂಡ, ಮಹಾದೇವ ಸೇರಿದಂತೆ ಅನೇಕರು ಇದ್ದರು.