ಶಹಾಬಾದ್: ಡಯಾಲಿಸಿಸ್ ಘಟಕ ಮತ್ತು ರಕ್ತದಾನ ಘಟಕ ಉದ್ಘಾಟನೆ

ಸುದ್ದಿ ಸಂಗ್ರಹ ಶಹಾಬಾದ್ರಕ್ತದಾನ ಘಟಕ ಮತ್ತು ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಿದ್ದು ತುಂಬಾ ಸಂತೋಷದ ವಿಷಯ ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು. ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಡಯಾಲಿಸಿಸ್ ಕೇಂದ್ರ ಮತ್ತು ರಕ್ತದಾನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಘೋಷಣೆಯಾದ ನಂತರ ಆಸ್ಪತ್ರೆಯಲ್ಲಿ ಅತಿ ಹೆಚ್ಚು ಸೌಲಭ್ಯ ದೊರೆಯುವಂತೆ ಗಮನ ಹರಿಸುತ್ತಿದ್ದೆನೆ, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ, ಮಾತ್ರೆಗಳ ಮತ್ತು ಔಷಧಿಗಳ ಅವಶ್ಯಕತೆ ಇರುವಷ್ಟು ಪೂರೈಕೆ ಆಗದಿರುವುದು ಅನೇಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ, […]

Continue Reading

ಶಿಕ್ಷಣ ಮಕ್ಕಳ ವಿದ್ಯಾರ್ಜನೆಗೆ ಸೀಮಿತವಾಗದೆ ಸಮಗ್ರ ವಿಕಾಸಕ್ಕೆ ಕಾರಣವಾಗಲಿ: ಮರಿಯಪ್ಪ ಹಳ್ಳಿ

ಸುದ್ದಿ ಸಂಗ್ರಹ ಶಹಾಬಾದ್ಶಿಕ್ಷಣ ಮಕ್ಕಳ ವಿದ್ಯಾರ್ಜನೆಗೆ ಮಾತ್ರ ಸೀಮಿತವಾಗದೆ ಅವರಲ್ಲಿನ ಪ್ರತಿಭೆ ಹೊರಹಾಕಿ ವಿಕಾಸ ಹೊಂದಲು ಸಹಾಯ ಮಾಡುವುದು ಶಿಕ್ಷಣದ ಮಹತ್ತರ ಉದ್ದೇಶವಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು. ನಗರದ ಇಂಗಿನಶೆಟ್ಟಿ ಸಭಾಗೃಹದಲ್ಲಿ ನಡೆದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟ ಶಾಲೆ, ನಂದಗೋಕುಲ ಶಾಲೆ, ವಿಜಯ ಕಂಪ್ಯೂಟರ್ ತರಬೇತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಚಿಣ್ಣರ ಹಬ್ಬ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ […]

Continue Reading

ಫೆ‌‌.9 ರಿಂದ ಶಹಾಬಾದ್ ಸಾಂಸ್ಕೃತಿಕ ಜನೋತ್ಸವ

ಸುದ್ದಿ ಸಂಗ್ರಹ ಶಹಾಬಾದ್ನೇತಾಜಿ ಸುಭಾಷ್ ಚಂದ್ರ ಬೋಸ್’ರ 129ನೇ ಜನ್ಮ ದಿನಾಚರಣೆ ಅಂಗವಾಗಿ 13ನೇ ಸಾಂಸ್ಕೃತಿಕ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಎಐಎಂಎಸ್ಎಸ್ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ ಹೇಳಿದರು. ಹನುಮಾನ ನಗರ ಸಂಘಟನಾ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಡಿವೈಓ, ಎಐಡಿಎಸ್ಓ ಮತ್ತು ಎಐಎಂಎಸ್ಎಸ್ ವತಿಯಿಂದ ಸಿದ್ದರಾಮೇಶ್ವರ ಶಾಲಾ ಆವರಣದಲ್ಲಿ ಫೆ.9 ಮತ್ತು 10ರಂದು ಸಂಜೆ 5:30ಕ್ಕೆ ಸಂಸ್ಕೃತಿಕ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು. ಸಂಸ್ಕೃತಿಕ ನಾಟಕ, ನೃತ್ಯ, ಜಾನಪದ ಗೀತೆ, ಕೋಲಾಟ, ಡೊಳ್ಳಿನ […]

Continue Reading

ಕಲಬುರಗಿ: ಸರಕಾರಿ ನೌಕರರ ಭವನದ ನಿವೇಶನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಸುದ್ದಿ ಸಂಗ್ರಹ ಕಲಬುರಗಿನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದ ನಿವೇಶನಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಯಿಂದ ಗುತ್ತಿಗೆ ಅವಧಿ ವಿಸ್ತರಣೆ ಹಿನ್ನಲೆಯಲ್ಲಿ ವಿಧಿ‌ಸಲಾದ 2.ಕೋಟಿ 3.7 ಲಕ್ಷ ರೂ ಗುತ್ತಿಗೆ ಶುಲ್ಕ ಭರಿಸಲು ಆದೇಶಿಸಲಾಗಿದೆ. ಆದರೆ ಸರ್ಕಾರಿ ನೌಕರರ ಸಂಘಕ್ಕೆ ಯಾವುದೆ ಆದಾಯ ಮೂಲಗಳಿಲ್ಲ ಹೀಗಾಗಿ ವಿಧಿಸಲಾದ ಗುತ್ತಿಗೆ ಶುಲ್ಕ ಭರಿಸಲು ತೊಂದರೆಯಾಗುತ್ತಿದೆ, ಅದಕ್ಕಾಗಿ ವಿಧಿಸಲಾದ ಗುತ್ತಿಗೆ ಶುಲ್ಕ ಸಂಪೂರ್ಣವಾಗಿ ವಿನಾಯಿತಿಗೊಳಿಸಲು ಸರ್ಕಾರಕ್ಕೆ ತಾವು ಪ್ರಸ್ತಾವನೆ […]

Continue Reading

ಮಾನವನ ಎರಡನೆ ತಾಯಿ ಗೋಮಾತೆ, ಗೋ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಿವರಾಜ ಅಂಡಗಿ

ಸುದ್ದಿ ಸಂಗ್ರಹ ಕಲಬುರಗಿಒಂದು ಹಸುವಿಗೆ ಆಹಾರ ನೀಡಿದರೆ ಮುಕ್ಕೋಟಿ ದೇವರಿಗೆ ನೈವೇದ್ಯ ನೀಡಿದ ಸಮ, ತಾಯಿ ಹಾಲಿಗಿಂತ ಹೆಚ್ಚು ಗೋವಿನ ಹಾಲು ಕುಡಿದ ನಾವು ಗೋ ಸಂರಕ್ಷಣೆ ಕರ್ತವ್ಯ ನಿರ್ವಹಿಸಬೇಕು ಎಂದು ಟೆಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು. ಗೋ ಮಾತೆ ಪೂಜೆಗೆ ಸಂಗ್ರಹಿಸುವ ಕಾರ್ಯಕ್ಕೆ ಮುಂದಾದ ಮಕ್ತಂಪುರ ಮಠದಲ್ಲಿ ಗೋಶಾಲೆ ನಿರ್ಮಾಣ ಮಾಡಿದ ಪೂಜ್ಯ ಚರಲಿಂಗ ಮಹಾಸ್ವಾಮಿಗಳಿಗೆ ಕೋಟಿ ಪ್ರಣಾಮ ಸಲ್ಲಿಸಿ ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿಗಳಿಗೆ ಟೆಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ […]

Continue Reading

ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಮನೆಯೊಳಗೆ ಹುದುಗಿಹೋಗಿದ್ದ 5 ದೇವಾಲಯಗಳು, ಬಾವಿ: ಜೀರ್ಣೋದ್ಧಾರಕ್ಕೆ ಸಿಗಲಿದೆ ಚಾಲನೆ

ಸುದ್ದಿ ಸಂಗ್ರಹ ಗದಗ ಪುರಾತನ ದೇಗುಲಗಳ ಊರು ಎಂದೆ ಖ್ಯಾತವಾಗಿರುವ ಲಕ್ಕುಂಡಿಯಲ್ಲಿ ಬಂಗಾರದ ನಿಧಿ ದೊರೆತ ಬಳಿಕ, ಅದೆ ಗ್ರಾಮದ ಮನೆಯೊಳಗೆ ಹುದುಗಿ ಹೋಗಿದ್ದ ಮತ್ತು ಅಭಿವೃದ್ಧಿಯಾಗದೆ ಉಳಿದಿದ್ದ 5 ದೇವಾಲಯಗಳು ಪತ್ತೆಯಾಗಿವೆ. 5 ದೇವಾಲಯಗಳಿಗೆ, 5 ಬಾವಿಗಳಿಗೆ ಸಚಿವ ಎಚ್.ಕೆ ಪಾಟೀಲ್ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಿದ್ದಾರೆ. 10 ಅಡಿ ಆಳದಲ್ಲಿ ಮುಚ್ಚಿಹೋಗಿದ್ದ ಚೌಕಿಮಠದ ಅರ್ಧಲಿಂಗೇಶ್ವರ ದೇವಾಲಯ, ವಿದ್ಯಾಶಂಕರಲಿಂಗ ದೇವಾಲಯ, ಸೋಮಲಿಂಗೇಶ್ವರ ದೇವಾಲಯಗಳು ಹುದುಗಿ ಹೋಗಿವೆ. ಸಮರ್ಪಕ ಪರಿಹಾರ ಕೊಟ್ಟರೆ ಮನೆ ಬಿಡುವುದಾಗಿಯೂ ಕುಟುಂಬಸ್ಥರು ಹೇಳಿದ್ದಾರೆ. ಕಲಾಕೃತಿಯಿರುವ […]

Continue Reading

ಮಾಜಿ ಸಚಿವ ಅರವಿಂದ್‌ ಲಿಂಬಾವಳಿ ಹುಟ್ಟು ಹಬ್ಬದ ಪ್ರಯುಕ್ತ ಅನ್ನದಾಸೋಹ, ಸ್ವಚ್ಛತಾ ಕಾರ್ಯಕ್ರಮ

ಸುದ್ದಿ ಸಂಗ್ರಹ ಶಹಾಬಾದಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ 59ನೇ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕಿನ ಭಾರತ ಚೌಕ್ ನಲ್ಲಿ ಅಭಿಮಾನಿ ಬಳಗದ ವತಿಯಿಂದ ಅನ್ನದಾಸೋಹ ಮತ್ತು ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳ, ದೇವದಾಸ ಜಾಧವ, ಶರಣು ಪಗಲಾಪುರ, ಉಮೇಶ ನಿಂಬಾಳಕರ, ಕೃಷ್ಣ ಮಾನೆ, ಪ್ರಕಾಶ ಮಾನೆ, ಸಾಗರ, ಸುಧಾಕರ, ಸಂಜೀವ ದಂಡಗುಲ್ಕರ್, ಕೃಷ್ಣ ರ್‍ಯಾಪನೂರ, ಶ್ರೀನಿವಾಸ ದಂಡಗುಂಡ, ದೇವಕರ, ಮಹೇಶ, ಸತೀಶ, ಕಾರ್ತಿಕ, ರಾಜು ಸೇರಿದಂತೆ ಸ್ನೇಹಿತರ ಬಳಗ […]

Continue Reading

ರಾಷ್ಟ್ರಕೂಟರ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪಿಸಿ: ಮಹಿಪಾಲರೆಡ್ಡಿ

ಸುದ್ದಿ ಸಂಗ್ರಹ ಕಲಬುರಗಿಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ‘ಕವಿರಾಜಮಾರ್ಗ’ ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಾರ್ಗ ನೀಡಿದ ಕನ್ನಡದ ಪ್ರಖ್ಯಾತ ದೊರೆ ನೃಪತುಂಗ ಅಮೋಘವರ್ಷ ಆಡಳಿತದ ‘ರಾಷ್ಟ್ರಕೂಟ’ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸುವಂತೆ ಹಿರಿಯ ಸಾಹಿತಿ, ಪತ್ರಕರ್ತ, ನಟ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಸೇಡಂ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರಕೂಟ […]

Continue Reading

ಫ್ರೀ ಮೋಮೋಸ್ ಆಮಿಷ: ಮನೆಯಲ್ಲಿದ್ದ 85 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಬಾಲಕ

ಸುದ್ದಿ ಸಂಗ್ರಹ ಲಕ್ನೋ ಫ್ರೀಯಾಗಿ ಮೋಮೋಸ್ ತಿನ್ನುವ ಆಸೆಗೆ ಬಿದ್ದು ಬಾಲಕನೋರ್ವ 85 ಲಕ್ಷ ರೂ. ಬೆಲೆ ಬಾಳುವ ಆಭರಣಗಳನ್ನು ಬೀದಿ ಬದಿ ವ್ಯಾಪಾರಿಗಳಿಗೆ ಕೊಟ್ಟ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 7ನೇ ತರಗತಿ ಓದುವ ಬಾಲಕನೊಬ್ಬನಿಗೆ ಮೋಮೋಸ್ ಮೇಲಿದ್ದ ವ್ಯಾಮೋಹ ಕಂಡುಕೊಂಡಿದ್ದ ಕಿರಾತಕರು, ಇದನ್ನೆ ಬಂಡವಾಳವನ್ನಾಗಿಸಿಕೊಂಡು ಆತನಿಂದ 85 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಲಪಟಾಯಿಸಿದ್ದಾರೆ. ವಾರಣಾಸಿಯ ದೇಗುಲದಲ್ಲಿ ವಿಮಲೇಶ್ ಮಿಶ್ರಾ ಎಂಬವರು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಮಗನಿಗೆ ಮೋಮೋಸ್ ಎಂದರೆ ಪ್ರಾಣ. […]

Continue Reading

ವಾಡಿ: ಮಡಿವಾಳ ಮಾಚಿದೇವ ಜಯಂತಿ ಆಚರಣೆ

ಸುದ್ದಿ ಸಂಗ್ರಹ ವಾಡಿ‌ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶಿವಶರಣರ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಡಿವಾಳ ಮಾಚಿದೇವ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಮಡಿವಾಳ ಮಾಚಿದೇವನ ಜೀವನ ಚರಿತ್ರೆ ಇಡಿ ಶರಣ ಸಮುದಾಯದಲ್ಲಿಯೆ ವೈಶಿಷ್ಠ್ಯತೆ ಪಡೆದುಕೊಂಡಿದೆ ಎಂದರು. ಶರಣರನ್ನು, ಸಮಾಜದ ಜನರನ್ನು ತಿದ್ದುವ ಇವರ ಕಾರ್ಯ ಶ್ಲಾಘನೀಯ. ಅವರ ವಿಚಾರ ಶೀಲತೆ, ಭಕ್ತಿ, ಜ್ಞಾನ, ಅನುಭವ, ಪರಸ್ಪರ ಗೌರವ, ವೃತ್ತಿಗೌರವ, ಸಮಾನತೆ ಮುಂತಾದ ತತ್ವಗಳಿಗೆ ಅವರ ವಚನಗಳು […]

Continue Reading