‘ಕೇಸರಿ 2’ ಸಿನಿಮಾ ಮೊದಲ ದಿನ ಸಾಧಾರಣ ಮೊತ್ತ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಮೊದಲ ದಿನ ಈ ಸಿನಿಮಾ ಗಳಿಸಿರುವುದು 7.50 ಕೋಟಿ ರೂ. ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ನಿಂದ ಸುಮಾರು 1.50 ಕೋಟಿ ಹಣ ಗಳಿಕೆಯಾಗಿತ್ತು. ಎಲ್ಲವೂ ಸೇರಿ ಮೊದಲ ದಿನಕ್ಕೆ ಕೇವಲ 7.50 ಕೋಟಿ ರೂ ಕಲೆಕ್ಷನ್ ಆಗಿದೆ. ಆ ಮೂಲಕ ಅಕ್ಷಯಕುಮಾರ ಮತ್ತೊಂದು ಸಾಧಾರಣ ಓಪನಿಂಗ್ ಪಡೆದುಕೊಂಡಿದೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಸನ್ನಿ ಡಿಯೋಲ್ರ ಜಾಟ್ ಸಿನಿಮಾ ಮೊದಲ ದಿನ 7.40 ಕೋಟಿ ರೂ ಗಳಿಕೆ ಕಂಡಿತ್ತು.
ಶುಕ್ರವಾರ ಗುಡ್ ಫ್ರೈಡೆ ರಜೆ ಇತ್ತು. ಹಾಗಿದ್ದರೂ ಸಹ ಜನ ಅಕ್ಷಯಕುಮಾರ ಅವರ ಸಿನಿಮಾ ನೋಡಲು ಆಸಕ್ತಿ ತೋರಿಸಿಲ್ಲ. ಮೊದಲ ದಿನ 7.50 ಕೋಟಿ ಸಾಧಾರಣ ಮೊತ್ತವಾದರೂ ನಿರಾಶಾದಾಯಕ ಮೊತ್ತವಲ್ಲ. ‘ಜಾಟ್’ ಸಿನಿಮಾ ರೀತಿ ಇದೆ ಸರಾಸರಿಯನ್ನು ಮುಂದುವರೆಸಿಕೊಂಡು ಹೋದಲ್ಲಿ ‘ಕೇಸರಿ 2’ ಸಿನಿಮಾ 50-60 ಕೋಟಿ ಕಲೆಕ್ಷನ್ ಸುಲಭವಾಗಿ ದಾಟಿಕೊಳ್ಳಲಿದೆ.
ಇದೆ ವರ್ಷ ಜನವರಿಯಲ್ಲಿ ಬಿಡುಗಡೆ ಆಗಿದ್ದ ಅಕ್ಷಯಕುಮಾರ ನಟನೆಯ ‘ಸ್ಕೈ ಫೋರ್ಸ್’ ಸಿನಿಮಾ ಮೊದಲ ದಿನ 11 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿತ್ತು. ಸಿನಿಮಾ ಒಟ್ಟು ಕಲೆಕ್ಷನ್ ಸಹ ಉತ್ತಮವಾಗಿಯೇ ಇತ್ತು. ಇದೀಗ ಲಾಂಗ್ ವೀಕೆಂಡ್ ನಡೆಯುತ್ತಿದ್ದು ‘ಕೇಸರಿ 2’ ಸಿನಿಮಾದ ಕಲೆಕ್ಷನ್ ವೀಕೆಂಡ್ನಲ್ಲಿ ಉತ್ತಮಗೊಳ್ಳುವ ನಿರೀಕ್ಷೆ ಇದೆ. ಅಲ್ಲದೆ ಸಿನಿಮಾ ನೋಡಿದ ಜನರೂ ಸಹ ಸಿನಿಮಾ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಇದು ಸಹ ಸಿನಿಮಾದ ಕಲೆಕ್ಷನ್ ಉತ್ತಮಗೊಳ್ಳಲು ಸಹಕಾರಿ ಆಗಬಹುದು.