ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ: ಇನ್ನುಮುಂದೆ ರೈಲಿನಲ್ಲೂ ಎಟಿಎಂ

ಮುಂಬೈ: ದೇಶದಲ್ಲೆ ಮೊದಲ ಬಾರಿಗೆ ರೈಲಿನಲ್ಲಿ ಸ್ಥಾಪಿಸಲಾದ ಎಟಿಎಂನ (ATM) ಪ್ರಾಯೋಗಿಕ ಪರೀಕ್ಷೆ ಮಂಗಳವಾರ ಯಶಸ್ವಿಯಾಗಿ ನಡೆದಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ಸಹಯೋಗದೊಂದಿಗೆ ಮನ್ಮಾಡ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ವರೆಗೆ ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಈ ಪ್ರಾಯೋಗಿಕ ಪರೀಕ್ಷೆಯ ಬಳಿಕ ಈಶಾನ್ಯ ಗಡಿನಾಡು ರೈಲ್ವೆಗಳಲ್ಲಿ ಎಟಿಎಂಗಳನ್ನು ಪರಿಚಯಿಸಲು ನಿರ್ಧರಿಸಿದೆ. ನಾಸಿಕ್‌ನ ಮನ್ಮಾಡ್ ಮತ್ತು ಮುಂಬೈ ನಡುವೆ ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ ಎಟಿಎಂ ಸ್ಥಾಪಿಸಲಾಗಿದೆ. ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಾಯೋಗಿಕ […]

Continue Reading

ಸಾಮಾಜಿಕ ಸಮತೋಲನ ಕಾಪಾಡುವ ಶಕ್ತಿ ಚಿತ್ರಕಲೆಗಿದೆ

ಕಲಬುರಗಿ: ದೃಶ್ಯ ಕಲೆಯು ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮವಾಗಿದ್ದು, ಇದು ಮನುಷ್ಯರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಸಮಾಜದಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ, ಅವುಗಳಿಗೆ ಪರಿಹಾರವನ್ನು ಸೂಚಿಸಿ ಸಮಾಜದ ಸಮತೋಲನ ಸ್ಥಿತಿಯನ್ನು ಕಾಪಾಡುವ ಶಕ್ತಿ ದೃಶ್ಯಕಲೆಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಸಂಜೆ ಜರುಗಿದ ‘ವಿಶ್ವ ಕಲಾ ದಿನಾಚರಣೆ’ಯಲ್ಲಿ ಮಾತನಾಡಿದ […]

Continue Reading

ಬಸವ ಜಯಂತಿ ಪ್ರಯುಕ್ತ ಏ.19 ರಂದು ಪೂರ್ವಭಾವಿ ಸಭೆ: ನಾಗರಾಜ ಭಂಕಲಗಿ

ಚಿತ್ತಾಪುರ: ಏ.19 ರಂದು ಮಧ್ಯಾಹ್ನ 1 ಗಂಟೆಗೆ ಬಸವ ಜಯಂತಿ ಪ್ರಯುಕ್ತ ಪೂರ್ವಭಾವಿ ಸಭೆ ಕರೆಯಲಾಗಿದೆ, ಆದ್ದರಿಂದ ಮಹಾಸಭಾದ ಸರ್ವ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಹೇಳಿದರು. ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.29 ರಂದು ಕಲಬುರಗಿಯಲ್ಲಿ ಜರುಗುವ ಬಸವ ಜಯಂತಿ ಪ್ರಯುಕ್ತ ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ, ಸಭೆಗೆ ಅಖಿಲ ಭಾರತ ವೀರಶೈವ […]

Continue Reading

ಮುಂಬೈಯಿಂದ ದುಬೈ ಮಧ್ಯೆ ಸಮುದ್ರದೊಳಗೆ ರೈಲು: ದೇಶದ ಭವಿಷ್ಯವನ್ನೆ ಬದಲಿಸಲಿದೆಯಾ ಈ ಪ್ಲ್ಯಾನ್‌ ?

ಸಾಮಾನ್ಯವಾಗಿ ಬಸ್ಸು, ಕಾರುಗಳ ಪ್ರಯಾಣಕ್ಕಿಂತ ರೈಲಿನಲ್ಲಿ ದೀರ್ಘ ಪ್ರವಾಸ ಮಾಡುವ ಮಜಾನೆ ಬೇರೆ. ಇದು ಕೇವಲ ಅಗ್ಗದ ಸಾರಿಗೆ ಮಾತ್ರವಲ್ಲ, ಆರಾಮದಾಯಕವಾಗಿ ನಿಗದಿತ ಸ್ಥಾನವನ್ನು ತಲುಪುತ್ತದೆ. ಮಾರ್ಗದಲ್ಲಿ ಜಲಪಾತಗಳ ಸೌಂದರ್ಯ, ಆಳವಾದ ಕಂದಕ, ಹಚ್ಚ ಹಸಿರಿನ ಸೌಂದರ್ಯ ಸೇರಿದಂತೆ ಅನೇಕ ಅದ್ಭುತವಾದ ಪ್ರಾಕೃತಿಕ ಆಕರ್ಷಣೆಗಳು ಕಣ್ಣು ಕುಕ್ಕುವಂತಿರುತ್ತದೆ. ಜೊತೆಯಲ್ಲಿ ಸ್ನೇಹಿತರಿದ್ದರೆ ಹಿತವಾದ ಮಾತುಗಳನ್ನು ಕೇಳುತ್ತಾ ಊರು ಸೇರಿದ್ದೆ ತಿಳಿಯುದಿಲ್ಲ. ಸಾಮಾನ್ಯ ರೈಲಿನಲ್ಲಿ ಇಷ್ಟೆಲ್ಲಾ ರೋಮಾಂಚಕ ಅನುಭವ ಸಿಗುತ್ತೆ ಅಂದ್ಮೇಲೆ ಇನ್ನೂ ಸಮುದ್ರದೊಳಗೆ ರೈಲಿನಲ್ಲಿ ಪ್ರಯಾಣಿಸಿದರೆ ಅದರ ಅನುಭವ […]

Continue Reading

ಕಾರವಾರ: ಬೀಗ ಮುರಿದು ಸಾಯಿಬಾಬಾ ಮಂದಿರದಲ್ಲಿ ಕಳ್ಳತನ

ಕಾರವಾರ: ಸಾಯಿ ಮಂದಿರದ ಬೀಗ ಮುರಿದು ಮಂದಿರದಲ್ಲಿದ್ದ 15 ಕೆಜಿಗಿಂತ ಹೆಚ್ಚು ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಕಳ್ಳರು ಪರಾರಿಯಾದ ಘಟನೆ ಕಾರವಾರ ನಗರದ ಕೋಡಿಬಾಗ್‌ನ ಸಾಯಿಕಟ್ಟದಲ್ಲಿ ಇರುವ ಸಾಯಿಬಾಬಾ ಮಂದಿರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಂದಿರದ ಬೀಗ ಮುರಿದು ಕಳ್ಳರು ಮಂದಿರದಲ್ಲಿನ ಸಾಯಿಬಾಬನ ಬೆಳ್ಳಿ ಪಾದಕೆ, ಕಿರೀಟ, ಛತ್ರಿ, ಸೇರಿದಂತೆ ಬೆಳ್ಳಿ ಪಾತ್ರೆಗಳ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಒಟ್ಟು 15 ಕೆ‌ಜಿ ಗಿಂತಲೂ ಹೆಚ್ಚು ತೂಕದ ಬೆಳ್ಳಿ ವಸ್ತುಗಳು ಕಳ್ಳತವಾಗಿವೆ. ಸ್ಥಳಕ್ಕಾಗಮಿಸಿದ ಕಾರವಾರ ನಗರ ಠಾಣೆ […]

Continue Reading

UPI ಪೇಮೆಂಟ್​​ ಮಾಡುವಾಗ ಮಿಸ್​ ಆಗಿ ಬೇರೆಯವರಿಗೆ ಹಣ ಕಳಿಸಿದ್ರಾ ? ಚಿಂತಿಸಬೇಡಿ ಈ ರೀತಿ ಮಾಡಿ

ಆನ್​ಲೈನ್​​ ಪಾವತಿ ಮಾಡುವಾಗ ನೀವು ತಪ್ಪಾಗಿ ಯಾವುದೆ ಖಾತೆ, UPI ಐಡಿ ಅಥವಾ ಸಂಖ್ಯೆಗೆ ಪಾವತಿ ಮಾಡಿದರೆ ಚಿಂತಿಸಬೇಡಿ. ಈ ರೀತಿ ಮಾಡಿ ನಿಮ್ಮ ಹಣ ನಿಮಗೆ ವಾಪಸ್​​ ಬರುತ್ತದೆ. ಆನ್​ಲೈನ್ ​​ಮೂಲಕ ಹಣ ಕಾಸಿನ ವ್ಯವಹಾರ, ಆನ್​ಲೈನ್​ ಶಾಪಿಂಗ್ ಮತ್ತು ಊಟ ಬೇಕು ಅಂದರೂ ಆನ್​ಲೈನ್​ನಲ್ಲಿ ಆರ್ಡರ್​​ ಮಾಡಿ ತರಿಸಿಕೊಳ್ಳುತ್ತೆವೆ. ಆವಾಗ ಆನ್​ಲೈನ್​ ಪೇಮೆಂಟ್​ ಮಾಡಲೆಬೇಕು. ಪಾವತಿ ಅಪ್ಲಿಕೇಶನ್‌ ಬಳಸಲು UPI ಮಾಧ್ಯಮವಾಗಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ರಚಿಸಿದ […]

Continue Reading

ವಾಡಿ: ಸಂವಿಧಾನ ಶಿಲ್ಪಿ ಡಾ. ಬಿ‌.ಆರ್ ಅಂಬೇಡ್ಕರ್ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ‌.ಆರ್ ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ ಮುಖಂಡರು ಭಾವಚಿತ್ರಕ್ಕೆ ಗೌರವ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ ಎಂದರು. ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪಣತೊಡಬೇಕಾಗಿದೆ. ಅಂಬೇಡ್ಕರ್ ಅವರು ಉದ್ಯೋಗಿ ಮತ್ತು ನಿರುದ್ಯೋಗಿಗಳಿಗೆ, ಪುರುಷರು ಮತ್ತು ಮಹಿಳೆಯರಿಗೆ ಉತ್ತಮ ಸೌಲಭ್ಯ ಸಿಗಬೇಕೆಂದು ಬಯಸಿದ್ದರು. ಜಾತಿ, […]

Continue Reading

ಸೈಕೋಪಾತ್‌ನಿಂದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ

ಹುಬ್ಬಳ್ಳಿ: ಸೈಕೋಪಾತ್‌ ಒಬ್ಬ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ಸೈಕೋಪಾತ್‌ ಬಾಲಕಿಯನ್ನ ಶೆಡ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಚೀರಾಟ ಕೇಳಿ ಅಲ್ಲೆ ಇದ್ದ ಸ್ಥಳೀಯರು ಶೆಡ್‌ನತ್ತ ಬಂದಿದ್ದಾರೆ. ಜನ ಬರುತ್ತಿರುವದನ್ನು ಕಂಡ ಸೈಕೋಪಾತ್‌ ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಎಸ್ಕೇಪ್‌ ಆಗಿದ್ದಾನೆ. ಬಾಲಕಿ ಹತ್ಯೆ ಖಂಡಿಸಿ ಠಾಣೆ ಮುಂದೆ ಪ್ರತಿಭಟನೆ 5 […]

Continue Reading

ಸಾಮಾನ್ಯರಂತೆ ಬಸ್‌ನಲ್ಲಿ ಪ್ರಯಾಣಿಸಿದ ಕೃಷ್ಣ ಬೈರೇಗೌಡ: ಸಚಿವರ ಸರಳತೆಗೆ ಭಾರಿ ಮೆಚ್ಚುಗೆ

ವಿಜಯಪುರ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಾಮಾನ್ಯರಂತೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದಾರೆ. ಬೆಂಗಳೂರಿನಿಂದ ಸಾರಿಗೆ ಬಸ್‌ನಲ್ಲಿ ವಿಜಯಪುರಕ್ಕೆ ಅವರು ತೆರಳಿದ್ದು, ಸಚಿವರ ಸರಳತೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಇತರ ಸಂಘಟನೆಗಳಿಂದ ಆಯೋಜಿಸಿರುವ ಅಂಬೇಡ್ಕರ್ ಹಬ್ಬದಲ್ಲಿ ಭಾಗಿಯಾಗಲು, ಕೆಕೆಆರ್‌ಟಿಸಿ ಕಲ್ಯಾಣ ರಥ ಬಸ್‌ನಲ್ಲಿ ವಿಜಯಪುರಕ್ಕೆ ತೆರಳಿದ ಸಚಿವ ಕೃಷ್ಣಬೈರೇಗೌಡರನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರು ಹಾಗೂ ಅಧಿಕಾರಿಗಳು ಸ್ವಾಗತಿಸಿದ್ದಾರೆ. ಕಲ್ಯಾಣ ರಥ ಬಸ್‌ನಿಂದ ಇಳಿದ […]

Continue Reading

ಗೋಲ್ಡ್ ಪ್ರಿಯರಿಗೆ ಶಾಕ್‌: ಚಿನ್ನದ ಬೆಲೆ ಒಂದೆ ದಿನ 6 ಸಾವಿರ ರೂ. ಏರಿಕೆ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವಿನ ಪ್ರತಿ ಸುಂಕ ಸಮರದಿಂದಾಗಿ ಭಾರತದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಜಿಗಿದಿದೆ. ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಒಂದೆ ದಿನ ಚಿನ್ನದ ಬೆಲೆ 6,250 ರೂ. ಏರಿಕೆಯಾಗಿದ್ದು 96,450 ರೂ.ಗಳ ಸಾರ್ವಕಾಲಿಕ ಗಡಿ ದಾಟಿದೆ. ಈ ಮೂಲಕ 1 ಲಕ್ಷ ರೂ.ನತ್ತ ದಾಪುಗಾಲು ಹಾಕಿದೆ. ಅಖಿಲ ಭಾರತ ಸರಾಫಾ ಅಸೋಸಿಯೇಷನ್‌ ಪ್ರಕಾರ, ಶುಕ್ರವಾರ ದೆಹಲಿಯಲ್ಲಿ ಚಿನ್ನದ ಬೆಲೆ 6,250 ರೂ.ಗಳಷ್ಟು ಜಿಗಿತ […]

Continue Reading