ಭಂಕೂರ: ಡಾ.ಅಂಬೇಡ್ಕರ್‌ ಜಯಂತೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಸುದ್ದಿ ಸಂಗ್ರಹ ಶಹಾಬಾದ್ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸುರೇಶ್ ಮೆಂಗನ್ ಅವರ ಅಧ್ಯಕ್ಷತೆಯಲ್ಲಿ ಭಂಕೂರ ಗ್ರಾಮದ ಬುದ್ಧ ಬಸವ ಡಾ.ಬಿ.ಆರ್ ಅಂಬೇಡ್ಕರ್ ಜಯಂತೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಎಂದು ಭರತ್ ಧನ್ನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಯಂತೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವಲಿಂಗಪ್ಪ ಗುಜ್ಜನ್, ಅಧ್ಯಕ್ಷ ನಾಗರಾಜ್ ಕೆ ಧನ್ನಾ, ಉಪಾಧ್ಯಕ್ಷ ಸಿದ್ದಾರ್ಥ್ ಧನ್ನಾ, ಸುನಿಲ್ ಕಟ್ಟಿಮನಿ, ನಾಗರಾಜ್ ವಗ್ಗನ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸರಡಗಿ, ಸಹ ಕಾರ್ಯದರ್ಶಿ ತೇಜಶ್ ಧನ್ನಾ, ಸಹ […]

Continue Reading

ನಾಳೆ ನಾಲವಾರ ಮಠಕ್ಕೆ ಸಿಎಂ ಸಿದ್ಧರಾಮಯ್ಯ

ಸುದ್ದಿ ಸಂಗ್ರಹ ಚಿತ್ತಾಪುರ ಕಲಬುರಗಿ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಕ್ಷೇತ್ರ ನಾಲವಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಕರ್ತೃ ಗದ್ದುಗೆ ಹಾಗೂ ಪೀಠಾಧಿಪತಿಗಳಾದ ಪರಮಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದರ್ಶನಾಶೀರ್ವಾದ ಪಡೆಯಲಿದ್ದಾರೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ಹೇಳಿದರು. ನಾಳೆ (ಶನಿವಾರ) ಸಂಜೆ 4 ಗಂಟೆಗೆ ಶ್ರೀಕ್ಷೇತ್ರಕ್ಕೆ ಆಗಮಿಸಲಿರುವ ನಾಡದೊರೆಯ ಜೊತೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ, […]

Continue Reading

ದೇಶದ ರಕ್ಷಣೆಯಲ್ಲಿ ಸಿಆರ್‌ಪಿಎಫ್ ಕೊಡುಗೆ ಅನನ್ಯ‌

ಸುದ್ದಿ ಸಂಗ್ರಹ ಕಲಬುರಗಿಕೇಂದ್ರೀಯ ಮೀಸಲು ಪೊಲೀಸ್ ಪಡೆಯು ದೇಶದ ಪ್ರಮುಖ ಆಂತರಿಕ ಭದ್ರತಾ ಪಡೆಯಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದು, ದಂಗೆ ಅಥವಾ ಭಯೋತ್ಪಾದನೆ ನಿಗ್ರಹ, ನಕ್ಸಲ್ ವಿರೋಧಿ ಕಾರ್ಯಾಚರಣೆ ಮತ್ತು ಚುನಾವಣೆ ಸಂದರ್ಭದಲ್ಲಿ ಭದ್ರತೆ ಒದಗಿಸುವ ಮೂಲಕ ದೇಶದ ರಕ್ಷಣೆಯಲ್ಲಿ ಅನನ್ಯವಾದ ಪಾತ್ರ ವಹಿಸಿದೆ ಎಂದು ಸಿಆರ್‌ಪಿಎಫ್ ಮಾಜಿ ಮುಖ್ಯ ಪೇದೆ ಚಂದ್ರಕಾಂತ ಭದ್ರಪೆ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ […]

Continue Reading

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಪ್ರಕ್ರಿಯೆ ಶುರು

ಸುದ್ದಿ ಸಂಗ್ರಹ ಬೆಂಗಳೂರು16 ವರ್ಷ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಪ್ರಕ್ರಿಯೆ ಶಿಕ್ಷಣ ಇಲಾಖೆ ಶುರು ಮಾಡಿದ್ದು, ವರದಿ ನೀಡಲು ಸಮಿತಿ ರಚನೆಗೆ ಮುಂದಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ತಜ್ಞರು, ವಿವಿಧ ಇಲಾಖೆ ಮುಖ್ಯಸ್ಥರು, ಪೋಷಕರು ಒಳಗೊಂಡ ಸಮಿತಿ ರಚನೆಗೆ ಮುಂದಾಗಿದೆ. ಸಮಿತಿಗೆ ಸಚಿವರು ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೆ ಪ್ರಕ್ರಿಯೆ ಶುರು ಮಾಡಲಿದ್ದಾರೆ. 2-3 ತಿಂಗಳ ಒಳಗೆ ವರದಿ ನೀಡಲು ಸಮಿತಿಗೆ ಗಡುವು ನೀಡಲಾಗಿದೆ. ಸೋಶಿಯಲ್ ಮೀಡಿಯಾ ಬ್ಯಾನ್ ಸ್ವರೂಪದ ಬಗ್ಗೆ ಅಧ್ಯಯನ ಮಾಡಿ […]

Continue Reading

ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ ಉಡುಪಿ ಪ್ರಥಮ, ಕಾಮರ್ಸ್‌ನಲ್ಲಿ ಇಬ್ಬರಿಗೆ 600ಕ್ಕೆ 600 ಅಂಕ

ಸುದ್ದಿ ಸಂಗ್ರಹ ಬೆಂಗಳೂರು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.86.48 ರಷ್ಟು ಫಲಿತಾಂಶ ಬಂದಿದೆ ಅಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಉತ್ತೀರ್ಣ ಅಂಕವನ್ನು ಶೇ.35ರಿಂದ ಶೇ.33ಕ್ಕೆ ನಿಗದಿ ಮಾಡಿರುವ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ.13 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 7.7% ಫಲಿತಾಂಶ ಕಡಿಮೆ ದಾಖಲಾಗಿತ್ತು. 6 ಲಕ್ಷದ 32 ಸಾವಿರದ 200 ಪೈಕಿ 5 ಲಕ್ಷದ 46 ಸಾವಿರದ 698 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ […]

Continue Reading

ಏ.11ರಂದು ಬೀದರ್, ಕಲಬುರಗಿಗೆ ಸಿಎಂ ಸಿದ್ದರಾಮಯ್ಯ ಪ್ರವಾಸ

ಸುದ್ದಿ ಸಂಗ್ರಹ ಬೀದರ್/ಕಲಬುರಗಿ ಏ.11ರಂದು ಸಿಎಂ ಸಿದ್ದರಾಮಯ್ಯ ಅವರು ಬೀದರ್ ಹಾಗೂ ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಏ.11ರಂದು ಬೀದರ್‌ನಲ್ಲಿ ನಡೆಯಲಿರುವ 40ನೇ ಪತ್ರಕರ್ತರ ಸಮ್ಮೇಳನದಲ್ಲಿ ಭಾಗಿಯಾಗಿ ಉದ್ಘಾಟನೆ ಮಾಡಲಿದ್ದಾರೆ. ನಂತರ ಬೀದರ್‌ನಿಂದ ಕಲಬುರಗಿಗೆ ತೆರಳಲಿದ್ದಾರೆ. ಈ ವೇಳೆ ಕಲಬುರಗಿಯ ಚಿತ್ತಾಪುರದಲ್ಲಿ ನೂತನವಾಗಿ ನಿರ್ಮಿಸಿರುವ ಭೋಜಲಿಂಗೇಶ್ವರರ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಸಂಜೆ 5 ಗಂಟೆಗೆ ಕೋಡಿ ಮಹಾಸಿದ್ದೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ರಾತ್ರಿ ಕಲಬುರಗಿಯಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

Continue Reading

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಇಲ್ಲ, ವದಂತಿಗೆ ಕಿವಿಗೊಡಬೇಡಿ: ಆಹಾರ ಇಲಾಖೆ

ಸುದ್ದಿ ಸಂಗ್ರಹ ಬೆಂಗಳೂರು ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಇಲ್ಲ. ವದಂತಿಗಳಿಗೆ ಯಾರು ಕಿವಿಗೊಡಬಾರದು ಎಂದು ಆಹಾರ ಇಲಾಖೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿ ಹರಡುತ್ತಿದೆ. ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ಸುದೀರ್ಘ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ವದಂತಿಗಳಾಗಿದ್ದು, […]

Continue Reading

ಆಟವಾಡುತ್ತಾ ಮೂರನೇ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು: ಮಗಳ ಸ್ಥಿತಿ ಕಂಡು ತಾಯಿ ಮೂರ್ಛೆ

ಸುದ್ದಿ ಸಂಗ್ರಹ ಬೆಂಗಳೂರು ಆಟವಾಡುತ್ತಾ ಮೂರನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ನಾಯಂಡಳ್ಳಿಯಲ್ಲಿ ನಡೆದಿದೆ. ಆಟವಾಡುತ್ತಾ ಮಗು ಕೆಳಗೆ ಬಿದ್ದ ಎದೆ ಝಲ್ ಎನ್ನುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಏ.6ರಂದು ಈ ಘಟನೆ ನಡೆದಿದೆ. ಮಗು ಕೆಳಗೆ ಬಿದ್ದ ತಕ್ಷಣ ಅದರ ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವವಾಗಿದೆ. ವಿಷಯ ತಿಳಿದ ಕೂಡಲೆ ಓಡಿ ಬಂದ ತಾಯಿ ಮಗುವಿನ ಸ್ಥಿತಿ ಕಂಡು ರಸ್ತೆ ಮಧ್ಯೆಯೇ ಮೂರ್ಛೆ ಹೋಗಿದ್ದಾರೆ. ಕೂಡಲೆ ಕುಟುಂಬದವರು ಮಗುವನ್ನು […]

Continue Reading

ಲೋಕಾಯುಕ್ತ ದಾಳಿ: ಮಂಗಳೂರು ಸಹಾಯಕ ಡ್ರಗ್ ಕಂಟ್ರೋಲರ್ ಬಳಿ 3.37 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಸುದ್ದಿ ಸಂಗ್ರಹ ಮಂಗಳೂರು ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ಮಂಗಳೂರಿನ ಪ್ರಾದೇಶಿಕ ಉಪ ಡ್ರಗ್ ಕಂಟ್ರೋಲರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಡ್ರಗ್ ಕಂಟ್ರೋಲರ್ ಬಾಬು ಬಿ.ಎನ್ ಅವರ ಮನೆ ಮತ್ತು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ ದಿನೇಶಕುಮಾರ್ ಅವರ ಮೇಲ್ವಿಚಾರಣೆಯಲ್ಲಿ, ಆರು ಲೋಕಾಯುಕ್ತ ತಂಡಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣ, ಬೆಂಗಳೂರು ನಗರ ಮತ್ತು ಮಂಗಳೂರಿನಲ್ಲಿರುವ ಆರೋಪಿಗಳಿಗೆ ಸಂಬಂಧಿಸಿದ ಆಸ್ತಿಗಳ […]

Continue Reading

ಒಡೆದ ಫೋನ್​ನಿಂದ ಸೆಲ್ಫಿ ತೆಗೆಯುವುದನ್ನು ಗಮನಿಸಿ ಅಭಿಮಾನಿಗೆ ಹೊಸ ಮೊಬೈಲ್​​ ಕೊಟ್ಟ ಸಂಜು

ಐಪಿಎಲ್​ ಶುರುವಾಗುವ ಮುನ್ನ ಮುಕ್ತಾಯಗೊಂಡ ಟಿ20 ವಿಶ್ವಕಪ್​ ಟೂರ್ನಮೆಂಟ್​ನಲ್ಲಿ ಸ್ಫೋಟಕ ಆಟವಾಡಿ ಟೀಮ್​ ಇಂಡಿಯಾ ವಿಶ್ವಕಪ್​ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್​, ಐಪಿಎಲ್​ನಲ್ಲಿ ತಮ್ಮ ಫಾರ್ಮ್​ ಕಳೆದುಕೊಂಡಿದ್ದಾರೆ. ಈ ಸೀಸನ್​ನಿಂದ ಆರಂಭಿಕ ಆಟಗಾರನಾಗಿ ಸಿಎಸ್​ಕೆ ತಂಡ ಸೇರಿಕೊಂಡಿರುವ ಸಂಜು ಸ್ಯಾಮ್ಸನ್, ಒಂದೆ ಒಂದು ಪಂದ್ಯದಲ್ಲಿ ಎರಡಂಕಿಯನ್ನು ದಾಟಿಲ್ಲ. ಹೀಗಾಗಿ ಫಾರ್ಮ್​ಗೆ ಮರಳಲು ಸಂಜು ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. ಇದರ ನಡುವೆ ಸಂಜು ಮಾಡಿದ ಕೆಲಸವೊಂದು ಎಲ್ಲರ ಮೆಚ್ಚುಗೆ […]

Continue Reading