ಸೇಡಂ: ಸಿಡಿಲಿಗೆ ಮತ್ತೊಬ್ಬ ವ್ಯಕ್ತಿ, ಎತ್ತು ಬಲಿ

ಸುದ್ದಿ ಸಂಗ್ರಹ ಸೇಡಂತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಸುರಿದ ಗುಡುಗು, ಸಿಡಿಲು ಮಿಶ್ರಿತ ಮಳೆಗೆ ಮತ್ತೊಬ್ಬ ವ್ಯಕ್ತಿ ಮತ್ತು ಒಂದು ಎತ್ತು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಜಾಕನಪಲ್ಲಿ ಗ್ರಾಮದ ಆಶಪ್ಪ ಕಂಪಿನ್‌ (60) ಮೃತರು. ಅವರು ಹೊಲದಲ್ಲಿನ ಕಸ-ಕಟ್ಟಿಗೆ ಸುಡಲು ಹೋಗಿದ್ದರು. ಆ ಸಂದರ್ಭದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಅಲ್ಲದೆ ಗ್ರಾಮದ ದೂರದಲ್ಲಿರುವ ದೊಡ್ಡಿಯಲ್ಲಿ ಕಟ್ಟಿದ ಎತ್ತೊಂದು ಸಿಡಿಲು ಬಡಿದು ಮೃತಪಟ್ಟಿದೆ. ಚಂದ್ರಪ್ಪ ಪುಲಮೋ‌ ಅವರಿಗೆ ಸೇರಿದ ಎತ್ತು ಇದಾಗಿದೆ. ಜಾಕನಪಲ್ಲಿ ಗ್ರಾಮಕ್ಕೆ […]

Continue Reading

ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಆದೇಶ

ಸುದ್ದಿ ಸಂಗ್ರಹ ನವದೆಹಲಿಭಾರತ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಆದೇಶ ಪ್ರಕಟಿಸಿದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ ಹೊರತು ಪಡಿಸಿ ಉಳಿದ ರಾಜ್ಯಗಳಲ್ಲಿ ಎಸ್‌ಐಆರ್‌ ನಡೆಯಲಿದೆ. ಈ ರಾಜ್ಯಗಳಲ್ಲಿ ಕಷ್ಟಕರವಾದ ಭೂಪ್ರದೇಶ, ಹವಾಮಾನ ಅಡಚಣೆಗಳು ಮತ್ತು ಕಾರ್ಯಾಚರಣೆಯ ಸವಾಲುಗಳು, ವಿಶೇಷವಾಗಿ ಹಿಮಪಾತ ಪೀಡಿತ ಮತ್ತು ಎತ್ತರದ ಪ್ರದೇಶಗಳಿರುವುದರಿಂದ ಎಸ್‌ಐಆರ್‌ ಪ್ರಕ್ರಿಯೆ ಮುಂದೂಡಿದೆ. ಜನಗಣತಿಯ ಎರಡನೇ ಹಂತದ […]

Continue Reading

ಕಲಬುರಗಿ: ವರ್ಗಾವಣೆಯಾದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ಗೆ ಆತ್ಮೀಯ ಬೀಳ್ಕೊಡುಗೆ

ಸುದ್ದಿ ಸಂಗ್ರಹ ಕಲಬುರಗಿಜಿಲ್ಲೆಯಲ್ಲಿ ಹೊಸ ತಹಸೀಲ್ದಾರ್‌ ಕಚೇರಿಗಳ ಆರಂಭ, 4 ಹೊಸ ಪ್ರಜಾಸೌಧ ಕಾಮಗಾರಿಗಳಿಗೆ ಚಾಲನೆ, ಸಕಾಲ ಸೇವೆಯಲ್ಲಿ ನಂ.1, 364 ಕಂದಾಯ ಗ್ರಾಮ ಘೋಷಣೆ, ಹಕ್ಕು ಪತ್ರ ವಿತರಣೆ, ಕಲಬುರಗಿ ರೊಟ್ಟಿಗೆ ಅಂತರರಾಷ್ಟ್ರೀಯ ಮಾನ್ಯತೆ, ಕಾರ್ಮಿಕರ ಆಶ್ರಯ ತಂಗುದಾಣ, ಅನಾಥ ಮಕ್ಕಳ ದತ್ತು ಕಾರ್ಯ, ರಾಜಿ ಇಲ್ಲದ ಕೆಲಸ ಜಿಲ್ಲಾಧಿಕಾರಿಯಾಗಿ ಬಿ.ಫೌಜಿಯಾ ತರನ್ನುಮ್‌ ಅವರು ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಅಧಿಕಾರಿಗಳು ಬಿಚ್ಚಿಟ್ಟ ಯಾದಿ ಇದು. ವರ್ಗಾವಣೆಯಾದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಅವರಿಗೆ […]

Continue Reading

ವಾಡಿ: ಬಿರುಗಾಳಿಗೆ ಧರೆಗುರುಳಿದ ಮರಗಳು

ವಾಡಿ: ಮಂಗಳವಾರ ಮಧ್ಯಾಹ್ನ ಬೀಸಿದ ಬಿರುಗಾಳಿಗೆ ಹೆದ್ದಾರಿಯ ಪಕ್ಕದ ಮರಗಳು ಧರೆಗುರುಳಿವೆ. ಬಿರುಗಾಳಿಗೆ ಹಲಕರ್ಟಿ ಲಾಡ್ಲಾಪುರ ರಾಷ್ಟ್ರೀಯ ಹೆದ್ದಾರಿ-150ರ ಎರಡು ಬದಿಗಳಲ್ಲಿ ಸಾಲು ಸಾಲು ಮರಗಳು ಉರುಳಿ ಬಿದ್ದಿದ್ದು, ಭೀಕರ ಗಾಳಿಗೆ ಸಾಕ್ಷಿಯಾದವು. ಸುಮಾರು ಅರ್ಧಗಂಟೆಗಿಂತ ಹೆಚ್ಚು ಕಾಲ ಜೋರಾದ ಗಾಳಿ ಬೀಸಿತು ಮತ್ತು ಅಲ್ಲಲ್ಲಿ ಮಳೆಯೂ ಸುರಿಯಿತು. ಗಾಳಿ ಮಳೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.

Continue Reading

ಶಾಲಾ-ಕಾಲೇಜುಗಳಲ್ಲಿ ಹಿಜಬ್‌ಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ – ಕೇಸರಿ ಶಾಲಿಗಿಲ್ಲ ಅವಕಾಶ 

ಸುದ್ದಿ ಸಂಗ್ರಹ ಬೆಂಗಳೂರು ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ರಾಜ್ಯ ಸರ್ಕಾರ ಮತ್ತೆ ಅವಕಾಶ ಕಲ್ಪಿಸಿದೆ. ಎಲ್ಲಾ ಧರ್ಮಗಳ ಧಾರ್ಮಿಕ, ಸಾಂಪ್ರದಾಯಿಕ ವಸ್ತುಗಳಿಗೆ ಅವಕಾಶ ಕೊಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಶೈಕ್ಷಣಿಕ ವರ್ಷದಿಂದಲೇ ಆದೇಶ ಜಾರಿಗೆ ಬರಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.  ಸರ್ವಶಿಕ್ಷಣ ಕಚೇರಿಯಲ್ಲಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಷದ್ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಹಿಜಬ್‌ ನಿರ್ಬಂಧಿಸಿ 2022ರಲ್ಲಿ ಬಿಜೆಪಿ ಸರ್ಕಾರ […]

Continue Reading

ನಾಪತ್ತೆಯಾಗಿದ್ದ ಬಾಲಕ 4 ವರ್ಷಗಳ ನಂತರ ಪತ್ತೆ: ಸುಳಿವು ನೀಡಿದ್ದು ಆತನಿಗಿದ್ದ ಕಬಡ್ಡಿ ಕ್ರೇಜ್​​

ಸುದ್ದಿ ಸಂಗ್ರಹ ಮಂಡ್ಯನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ 4 ವರ್ಷದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶಾಲೆಯ ಆವರಣದಿಂದ ನಾಪತ್ತೆಯಾಗಿದ್ದ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದ ತಂದೆ ಕೊನೆಗೂ ನಿಟ್ಟುಸಿರು ಬಿಟ್ಟಿದ್ದು, ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದರು. ಅಂತಿಮವಾಗಿ ಆತನನ್ನು ಪತ್ತೆ ಮಾಡಲಾಗಿದ್ದು, ಹಿರೇಮರಳಿ ಗ್ರಾಮದ ಕಿಶೋರ್ ಎಂಬಾತನನ್ನು ಮರಳಿ ಕುಟುಂಬಸ್ಥರ ಮಡಿಲಿಗೆ ಸೇರಿಸಲಾಗಿದೆ. ವಿಶೇಷವೆಂದರೆ ಬಾಲಕನಿಗಿದ್ದ ಕಬಡ್ಡಿ ಕ್ರೇಜೇ ಆತನ ಪತ್ತೆ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದೆ. ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡರ 9ನೇ ತರಗತಿ […]

Continue Reading

ಹಂಟಾವೈರಸ್ ಅಪಾಯ: ಭಾರತದಲ್ಲಿ ರೋಗ ಹರಡುವುದನ್ನು ತಡೆಯಲು 165 ಲ್ಯಾಬ್‌ಗಳು ಸಜ್ಜು

ಎಂವಿ ಹೋಡಿಯಸ್ ಕ್ರೂಸ್ ಹಡಗಿನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಹಂಟಾವೈರಸ್ (Hantavirus) ಸೋಂಕಿನ ಬಳಿಕ ವಿಶ್ವದ ಹಲವು ದೇಶಗಳು ಎಚ್ಚೆತ್ತುಕೊಂಡಿದೆ. ಈ ವೈರಸ್‌ ಕೆಲವರ ಸಾವಿಗೂ ಕಾರಣವಾಗಿರುವುದರಿಂದ ಭಾರತವೂ ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನು ಕಠಿಣಗೊಳಿಸಿದೆ. ವಿಶೇಷವಾಗಿ ಹಡಗಿನಲ್ಲಿ ಭಾರತೀಯರು ಇದ್ದ ಕಾರಣ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದೇಶದಾದ್ಯಂತ ಇರುವ ಸುಮಾರು 165 ವೈರಸ್ ರಿಸರ್ಚ್ ಮತ್ತು ಡಯಗ್ನೋಸ್ಟಿಕ್ ಲ್ಯಾಬ್‌ಗಳನ್ನು ಸಕ್ರಿಯಗೊಳಿಸಿದೆ. ವಿದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಹಂಟಾವೈರಸ್ ಲಕ್ಷಣಗಳು ಕಂಡುಬಂದರೆ, ಅವರ […]

Continue Reading

ಕಲಬುರಗಿ ನೂತನ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅಧಿಕಾರ ಸ್ವೀಕಾರ

ಸುದ್ದಿ ಸಂಗ್ರಹ ಕಲಬುರಗಿಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ಕೇಡರ್‌ನ 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಇಕ್ರಮ್ ಶರೀಫ್ (ಮೊಹಮ್ಮದ್ ಇಕ್ರಮುಲ್ಲಾ ಶರೀಫ್) ಅವರು ಸೋಮವಾರ ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿ ಹೂಗುಚ್ಛ ನೀಡಿ ಶುಭ ಕೋರಿದರು. ಸರ್ಕಾರ ಇತ್ತೀಚೆಗೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನದ ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಿತ್ತು. ಅವರ ಸ್ಥಾನಕ್ಕೆ ಹಣಕಾಸು ಇಲಾಖೆಯ […]

Continue Reading

ಸರ್ಕಾರಿ ನೌಕರರಿಗೆ ಶೇ.1.5 ತುಟ್ಟಿಭತ್ಯೆ ಹೆಚ್ಚಳ: ಬಳೂಂಡಗಿ ಹರ್ಷ

ಸುದ್ದಿ ಸಂಗ್ರಹ ಕಲಬುರಗಿ ರಾಜ್ಯದ ಸರಕಾರಿ ನೌಕರರ ದೀರ್ಘಾಕಾಲದ ಬೇಡಿಕೆಯಾಗಿದ್ದ ತುಟ್ಟಿಭತ್ಯೆ ಹೆಚ್ಚಳಕ್ಕೆ ಮುಖ್ಯಮಂತ್ರಿ ಅಧಿಕೃತವಾಗಿ ಅನುಮೋದನೆ ನೀಡಿ ಮೂಲ ವೇತನದ ಶೇ.1.5 ರಷ್ಟು ತಟ್ಟಿಭತ್ಯೆ ಹೆಚ್ಚಳವು ಜನೆವರಿ 1 ರಿಂದ ಪೂರ್ವಾನ್ವಯವಾಗುವಂತೆ ಇತ್ತೀಚೆಗೆ ಆರ್ಥಿಕ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದಕ್ಕೆ  ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಹರ್ಷ ವ್ಯಕ್ತಪಡಿಸಿದ್ದಾರೆ.  ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರಕಾರಿ ನೌಕರರ ಸಂಘದ ರಾಜಾಧ್ಯಕ್ಷ ಸಿ.ಎಸ್ ಷಡಾಕ್ಷರಿ ನೇತೃತ್ವದ ಪದಾಧಿಕಾರಿಗಳ ನಿಯೋಗ ಡಿ.ಎ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿಗೆ […]

Continue Reading

ಬಿಎಸ್‍ವೈ ಅಭಿಮಾನೋತ್ಸವ ಕಾರ್ಯಕ್ರಮ ಯಶಸ್ವಿಗೆ ಕಾರಜೋಳ ಕಾರ್ಯ ‌ಶ್ಲಾಘನೀಯ: ದೀಪಕ್ ಹೊಸ್ಸೂರಕರ್

ಸುದ್ದಿ ಸಂಗ್ರಹ ಚಿತ್ತಾಪುರಚಿತ್ರದುರ್ಗದಲ್ಲಿ ಮೊನ್ನೆ ನಡೆದ ಬಿಎಸ್‍ವೈ ಅಭಿಮಾನೋತ್ಸವ ಕಾರ್ಯಕ್ರಮದ ಮುಖ್ಯ ಕಾರಣಿಕರ್ತರಾಗಿರುವ ಸಂಸದ ಗೋವಿಂದ ಕಾರಜೋಳ ಮತ್ತು ಅವರ ಸುಪುತ್ರ ಯುವ ನಾಯಕ ಉಮೇಶ್ ಕಾರಜೋಳ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಯಡಿಯೂರಪ್ಪನವರು 50 ವರ್ಷಗಳ ಯಶಸ್ವಿ ರಾಜಕೀಯ ಪರ್ವ ಪೂರೈಸಿದ ಹಿನ್ನೆಲೆಯಲ್ಲಿ, ಅದನ್ನು ಕಾರ್ಯಗತ ಮಾಡಲು ಪಟ್ಟ ಶ್ರಮ ನಿಜಕ್ಕೂ ಪ್ರಶಂಸನೀಯ, […]

Continue Reading