ತನ್ನ ಪತ್ನಿ ಚಿಕನ್​ ತಿನ್ನಲ್ಲ ಎಂದಿದ್ದಕ್ಕೆ ಸೂಸೈಡ್​ ಮಾಡಿಕೊಂಡ ಗಂಡ

ರಾಷ್ಟೀಯ

ತನ್ನ ಪತ್ನಿ ಚಿಕನ್ ತಿನ್ನಲ್ಲ ಎಂದಿದಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ರವಿವಾರ ನಡೆದಿದೆ.

ತಂಜವೂರು ಜಿಲ್ಲೆಯ ಕುಂಭಕೋಣ ತಾಲೂಕಿನ ಸಕ್ಕೋಟ್ಟೈ ಪ್ರದೇಶದ ನಿವಾಸಿ ಮಣಿಕಂಠನ್ ​(29) ಮೃತಪಟ್ಟಿದ್ದಾರೆ. ಪೀಠೋಪಕರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠನ್​, ಅಲ್ಲಿಯೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಸುಬ್ಬಲಕ್ಷ್ಮಿ (25) ಅವರನ್ನು ಪ್ರೀತಿಸುತ್ತಿದ್ದರು.

ಒಂದು ತಿಂಗಳ ಹಿಂದೆ ಮನೆಯವರನ್ನು ದಿಕ್ಕರಿಸಿ ಇಬ್ಬರು ಮದುವೆಯಾಗಿದ್ದರು.

ಕುಟುಂಬ ವಿರೋಧಿಸಿದ್ದರಿಂದ ತಿರುಪ್ಪೂರು ಜಿಲ್ಲೆಯ ವೆಲ್ಲಾ ಕೋವಿಲ್‌ನ ಪುತ್ತೂರಿನಲ್ಲಿರುವ ಸುಬ್ಬಲಕ್ಷ್ಮಿಯ ಸಹೋದರಿ ಮೇನಕಾ ಅವರ ಮನೆಯಲ್ಲಿ ಉಳಿದುಕೊಂಡರು. ಈ ಸ್ಥಿತಿಯಲ್ಲಿ, ಮೇನಕಾ ಮತ್ತು ಅವರ ಪತಿ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮಕ್ಕಾಗಿ ತಿರುಚಿಗೆ ಹೋಗಿದ್ದರು.

ರವಿವಾರ ಮಣಿಕಂಠನ್​ ಅಂಗಡಿಯಿಂದ ಚಿಕನ್​ ತಂದು ಚಿಕನ್​ ಸಾಂಬಾರ್​ ಮಾಡುವಂತೆ ಹೇಳಿದ್ದ, ಅಡುಗೆ ಮಾಡಿದ ಬಳಿಕ ತನ್ನ ಸಹೋದರಿ ದೇವಸ್ಥಾನಕ್ಕೆ ಹೋಗಿದ್ದರಿಂದ ಅವಳು ಮನೆಯಲ್ಲಿ ಕೋಳಿ ತಿನ್ನಲು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಮಣಿಕಂಠನ್ ಮನೆಯ ಹೊರಗಿನ ಕಬ್ಬಿಣದ ಸರಳಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡನು. ಈ ಬಗ್ಗೆ ಸ್ಥಳೀಯರಿಗೆ ವಿಷಯ ತಿಳಿಯುತ್ತಿದ್ದಂತೆ ಅವನನ್ನು ರಕ್ಷಿಸಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅವನನ್ನು ಪರೀಕ್ಷಿಸಿದ ವೈದ್ಯರು ಮಣಿಕಂಠನ್ ಮೃತಪಟ್ಟಿರುವುದಾಗಿ ತಿಳಿಸಿದರು.(ಏಜೆನ್ಸೀಸ್​)

Leave a Reply

Your email address will not be published. Required fields are marked *