ಪಂಚಗುಣ ಪಾಲನೆಯಿಂದ ಮಹಾಪುರಷರಾಗಲು ಸಾಧ್ಯ

ನಗರದ

ಕಲಬುರಗಿ: ಉತ್ತಮ ಆಲಿಸುವಿಕೆ, ದೈಹಿಕ ಮತ್ತು ಮಾನಸಿಕವಾಗಿ ಶಕ್ತಿ ಹೊಂದುವುದು, ಜೀವನಕ್ಕಾಗಿ ಜ್ಞಾನ ಪಡೆಯುವುದು, ಶೀಲ ಹಾಗೂ ಚಾರಿತ್ರö್ಯ ಮತ್ತು ಇವುಗಳನ್ನು ದಿನನಿತ್ಯ ಪಾಲನೆ ಮಾಡುವ ವೀರವ್ರತ ಎಂಬ ಈ ಪಂಚಗುಣಗಳನ್ನು ಯಾವ ವ್ಯಕ್ತಿ ತನ್ನ ಜೀವನದಲ್ಲಿ ಅಳವಡಿಸಿಕೊಂಡು, ಅವುಗಳನ್ನು ಚಾಚೂ ತಪ್ಪದೇ ಪಾಲನೆ ಮಾಡುತ್ತಾನೆಯೋ, ಆತ ಮಹಾಪುರಷನಾಗಲು ಸಾಧ್ಯವಾಗುತ್ತದೆ ಚಿಂತಕ ಮಹಾದೇವಯ್ಯ ಕರದಳ್ಳಿ ಅಭಿಮತಪಟ್ಟರು.

ಗಂಗಾ ನಗರದ ವಿವೇಕಾನಂದ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಸುಂದರ ಜೀವನಕ್ಕಾಗಿ ಪ್ರೇರಣೋಪನ್ಯಾಸ’ ಎಂಬ ವಿಶೇಷ ಉಪನ್ಯಾಸ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉಜ್ವಲ ಭವಿಷ್ಯ ಯುವಶಕ್ತಿಯ ಕೈಯಲ್ಲಿದೆ. ವಿದ್ಯಾರ್ಥಿಗಳು ಮತ್ತು ಯುವಕರು ಮಹಾನ ವ್ಯಕ್ತಿಗಳು, ದೇಶಭಕ್ತರ ತತ್ವ, ಮಾತುಗಳನ್ನು ಆಲಿಸುವುದು, ಗ್ರಹಿಸುವುದು, ಸ್ವೀಕರಿಸುವುದು ಮತ್ತು ಪಾಲಿಸುವ ಕಾರ್ಯ ಮಾಡಬೇಕು. ಜೀವನದಲ್ಲಿ ನಿಶ್ಚಿತ ಮತ್ತು ದೃಢಸಂಕಲ್ಪದೊಂದಿಗೆ ಮುನ್ನುಗ್ಗಿ. ಭೃಷ್ಟಾಚಾರ, ಜಾತಿಯತೆ, ಅಪರಾಧ, ಅನೈತಿಕ ಚಟುವಟಿಕೆಗಳಿಂದ ದೂರವಿರಿ. ಸೋಲನ್ನು ಸವಾಲಾಗಿ ಸ್ವೀಕರಿಸಿ. ಸಕಾರಾತ್ಮಕ ಚಿಂತೆನೆ ನಿಮ್ಮದಾಗಿರಲಿ. ಆದರ್ಶ ಗುಣಗಳು ಮೈಗೂಡಿಸಿಕೊಂಡು ದೇಶದ ಅಮೂಲ್ಯವಾದ ಆಸ್ತಿ ನೀವಾಗಬೇಕು ಎಂದು ವಿದ್ಯಾರ್ಥಿಗಳೆ ಹುರಿದುಂಬಿಸಿದರು.

ರೈತ ಮತ್ತು ಸೈನಿಕ ದೇಶದ ಎರದು ಕಣ್ಣುಗಳ್ಳಿದ್ದಂತೆ. ತಂದೆ-ತಾಯಿ, ಗುರು-ಹಿರಿಯರು, ದೇಶವನ್ನು ಗೌರವಿಸಿ. ಇಡಿ ವಿಶ್ವವೇ ನನ್ನ ಮನೆಯಂತೆ ಭಾವಿಸಿ ಸೇವೆ ಮಾಡಿ. ಮೌಲ್ಯಯುತ ಶಿಕ್ಷಣ ಇಂದಿನ ತುರ್ತು ಅಗತ್ಯವಾಗಿದೆ. ನಿರಂತರವಾಗಿ ಅಧ್ಯಯನಶೀಲರಾಗಿ. ಪರಸ್ಪರ ಪ್ರೀತಿ, ಶಾಂತಿ, ಸಹಕಾರ, ಸಹಬಾಳ್ವೆಯಿಂದ ಬದುಕಿ. ಬಂದ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಿ. ಎಂದಿಗೂ ಕೂಡಾ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ಪ್ರತಿಯೊಬ್ಬರು ಕಡ್ಡಾಯ, ಸೂಕ್ತ ವ್ಯಕ್ತಿಗೆ ಮತದಾನ ಮಾಡಿ. ಸರ್ಕಾರಿ ನೌಕರಿಯ ಮೇಲೆಯೇ ಅವಲಂಬಿತವಾಗದೆ, ಸ್ವಯಂ ಉದ್ಯೋಗಿಗಳಾಗಿ. ಸ್ವದೇಶಿ ವಸ್ತುಗಳು ಹಾಗೂ ಸೇವೆಗಳನ್ನು ಮಾತ್ರ ಬಳಸಿ, ವಿದೇಶಿ ವಸ್ತುಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿ ಎಂದು ಪ್ರತಿಜ್ಞೆ ಬೋಧನೆ ಮಾಡಿದರು.

ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಕಾವೇರಿ ವಿ.ಹೂನಳ್ಳಿ, ಶಿಕ್ಷಕಿಯರಾದ ರಾಜೇಶ್ವರಿ ಡಾಂಗೆ, ಅರ್ಚನಾ ಕುಲಕರ್ಣಿ, ರೂಪಾ ಚೇಂಗಟಿ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *