300 ಜನರಿದ್ದ ದೋಣಿಗೆ ಬೆಂಕಿ: ಜೀವ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ ಪ್ರಯಾಣಿಕರು

ಇಂಡೋನೇಷ್ಯಾದ ಉತ್ತರ ಸುಲವೇಸಿಯಲ್ಲಿರುವ ತಾಲಿಸ್ ದ್ವೀಪದ ಬಳಿ ಇಂದು (ಜು.20) ಮನಾಡೊ ಬಂದರಿಗೆ ಹೋಗಲು, ಸುಮಾರು 300 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಐದು ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬೆಂಕಿಯಿಂದ ಪಾರಾಗಲು ಕೆಲವು ಪ್ರಯಾಣಿಕರು ಸಮುದ್ರಕ್ಕೆ ಹಾರಿದ್ದಾರೆ, ಅನೇಕರು ಕೆಎಂ ಬಾರ್ಸಿಲೋನಾ ವಿಎ ಹೆಸರಿನ ದೋಣಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ 150 ಜನರನ್ನು ರಕ್ಷಿಸಲಾಗಿದೆ, ಅವರನ್ನು ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ಜಂಟಿ ತಂಡವು ರಕ್ಷಣೆ ಮಾಡಿದೆ. ರಕ್ಷಣಾ […]

Continue Reading

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮೈಲಿಗಲ್ಲು ಚಂದ್ರಯಾನ-3: ಎಚ್.ಬಿ ಪಾಟೀಲ

ಕಲಬುರಗಿ: ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನಿಗೂ ಭೂಮಿಗೆ ನಂಟು. ಚಂದ್ರನಲ್ಲಿರುವ ವಾತಾವರಣ, ಅಲ್ಲಿನ ಮಾಹಿತಿಯ ಬಗ್ಗೆ ವ್ಯಾಪಕವಾಗಿ ಸಂಸೋಧನೆ ಜರುಗುತ್ತಿದ್ದು, ಈ ನಿಟ್ಟನಿಲ್ಲಿ ಭಾರತ ಇತ್ತೀಚಿಗೆ ಚಂದ್ರಯಾನ-3ರ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆ, ಶಿವಾ ವಿದ್ಯಾ ಮಂದಿರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಏರ್ಪಡಿಸಲಾಗಿದ್ದ ‘ವಿಶ್ವ ಚಂದ್ರ’ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾನವ ಪ್ರಥಮ […]

Continue Reading

ಚೆಸ್ ಆಟದಿಂದ ಬುದ್ಧಿಶಕ್ತಿ, ಏಕಾಗ್ರತೆ, ಸೃಜನಶೀಲತೆ ವೃದ್ಧಿ

ಕಲಬುರಗಿ: ಚೆಸ್ ಆಟ ಆಡುವುದರಿಂದ ಏಕಾಗ್ರತೆ, ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. ಇದು ಮೆದುಳಿಗೆ ವ್ಯಾಯಾಮ ನೀಡಿ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಗುರುಲಿಂಗಯ್ಯ ಮಠ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ವಿಶ್ವ ಚೆಸ್ ದಿನಾಚರಣೆ”ಯಲ್ಲಿ ಮಾತನಾಡಿದ ಅವರು, ಚೆಸ್ ಎಲ್ಲಿ ಬೇಕಾದರೂ ಅಭ್ಯಾಸ ಮಾಡಬಹುದು ಮತ್ತು ಭಾಷೆ, ವಯಸ್ಸು, ಲಿಂಗ, ದೈಹಿಕ ಸಾಮರ್ಥ್ಯ ಅಥವಾ ಸಾಮಾಜಿಕ ಸ್ಥಾನಮಾನದ ಅಡೆತಡೆಗಳನ್ನು ಮೀರಿ ಎಲ್ಲರೂ […]

Continue Reading

ವಾಡಿ: ಬಿಜೆಪಿ ರಾಜ್ಯ ನಾಯಕರ ಜನ್ಮ ದಿನದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ

ವಾಡಿ: ಪಟ್ಟಣದ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಬಿಜೆಪಿ ರಾಜ್ಯ ನಾಯಕರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಮತ್ತು ಕೇಂದ್ರ ರೈಲ್ವೆ ಜಲಶಕ್ತಿ ಸಚಿವ ವಿ ಸೋಮಣ್ಣ ಅವರ ಜನ್ಮದಿನದ ಪ್ರಯುಕ್ತ ರವಿವಾರ ಶಕ್ತಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ರಾಜ್ಯದ ಪ್ರತಿಯೊಬ್ಬ ಕಾರ್ಯಕರ್ತರ ಮನದಲ್ಲಿ ಪಕ್ಷ ಸಂಘಟನೆಯ ಬಗ್ಗೆ, ಸ್ವಾಭಿಮಾನದ ಬಗ್ಗೆ ಕಿಚ್ಚನ್ನು ಮೂಡಿಸುವಲ್ಲಿ ಚಲುವಾದಿ ನಾರಾಯಣಸ್ವಾಮಿ […]

Continue Reading

112ಗೆ ಕರೆ ಮಾಡಿದ್ದ ಮಹಿಳೆಯನ್ನು ಬಲೆಗೆ ಬೀಳಿಸಿಕೊಂಡ ಪೊಲೀಸಪ್ಪನ ಪೋಲಿ ಆಟ

ರಾಮನಗರ: ಪೊಲೀಸರೆಂದರೆ ಒಂದು ನಂಬಕೆ ಮತ್ತು ಧೈರ್ಯ. ಆದರೆ ಅಂತಹ ಹುದ್ದೆಗೆ ಅಪವಾದವೆಂಬಂತೆ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯ ಮೇಲೆ ಪೊಲೀಸ್ ಪೇದೆ ಆತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲೂಕಿನ 112 ವಾಹನದ ಚಾಲಕನಾಗಿರುವ ಪುಟ್ಟಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂತ್ರಸ್ತೆ ಮಹಿಳೆ ದೂರು ದಾಖಲಿಸಿದ್ದಾಳೆ. ಇದರ ಬೆನ್ನಲ್ಲೇ ಪೇದೆ ಪುಟ್ಟಸ್ವಾಮಿಯನ್ನು ಅಮಾನತು ಮಾಡಲಾಗಿದೆ. ಅದೊಂದು ದಿನ 112ಗೆ ಕರೆ ಬಂದಿತ್ತು. ನಮ್ಮೂರಲ್ಲಿ ಗಲಾಟೆಯಾಗುತ್ತಿದೆ […]

Continue Reading

ಆ ಒಂದು ಮಾತು ಆಡಿದ್ದಕ್ಕೆ ASI ಕೊಂದು ಆಕೆ ಕೆಲಸ ಮಾಡುತ್ತಿದ್ದ ಠಾಣೆಗೆ ಶರಣಾದ ಯೋಧ

ಗುಜರಾತ್​: ಕಚ್​ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆಕೆಯ ಲಿವ್​ ಇನ್​ ಸಂಗಾತಿ ಹಾಗೂ ಸಿಆರ್​ಪಿಎಫ್​ ಕಾನ್​​ಸ್ಟೆಬಲ್​ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮೃತಳನ್ನು ಅರುಣಾಬೆನ್ ನಾಥುಭಾಯ್ ಜಾದವ್ (25) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ದಿಲೀಪ್ ಡಾಂಗ್ಚಿಯಾ, ಅರುಣಾಬೆನ್​ರನ್ನು ಕೊಂದು, ಆಕೆಯನ್ನು ನಿಯೋಜಿಸಲಾಗಿದ್ದ ಅಂಜರ್ ಪೊಲೀಸ್ ಠಾಣೆಗೆ ಶನಿವಾರ ಬೆಳಗ್ಗೆ ತೆರಳಿ ತನ್ನ ಅಪರಾಧವನ್ನು ದಿಲೀಪ್​ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅರುಣಾಬೆನ್ ಅವರು ಕಚ್‌ನ ಅಂಜರ್ ಪೊಲೀಸ್ ಠಾಣೆಯಲ್ಲಿ […]

Continue Reading

ಭಾವನ ಜೊತೆ ಅಕ್ರಮ ಸಂಬಂಧ: ಕರೆಂಟ್‌ ಶಾಕ್‌ ಕೊಟ್ಟು ಗಂಡನ ಕೊಂದ ಹೆಂಡತಿ

ನವದೆಹಲಿ: ಆಕಸ್ಮಿಕ ಸಾವು ಎಂದು ನಂಬಲಾಗಿದ್ದ ದೆಹಲಿ ನಿವಾಸಿ ಕರಣ್‌ ದೇವ್‌ ಸಾವಿನ ಪ್ರಕರಣ ತಿರುವು ಪಡೆದುಕೊಂಡಿದ್ದು, ಪ್ರಿಯಕರ ಜೊತೆ ಸೇರಿ ಪತ್ನಿಗೆ ವಿದ್ಯುತ್‌ ಶಾಕ್‌ ಕೊಟ್ಟು ಕೊಂದಿದ್ದಾಳೆ ಎಂದು ತನಿಖೆಯಿಂದ ಬಯಲಾಗಿದೆ. ಜುಲೈ 13ರಂದು ಕರಣ್‌ ದೇವ್‌ ಅವರನ್ನು ಮಾತಾ ರೂಪಾರಾಣಿ ಮ್ಯಾಗೊ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪತ್ನಿ ಸುಶ್ಮಿತಾ, ವಿದ್ಯುತ್‌ ಆಕಸ್ಮಿಕವಾಗಿ ತಗುಲಿ ಬಿದ್ದಿದ್ದಾರೆ ಎಂದು ಹೇಳಿದ್ದಳು. ಪರೀಕ್ಷೆ ನಡೆಸಿದ ಆಸ್ಪತ್ರೆ ಸಿಬ್ಬಂದಿ ಕರಣ್‌ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಆಕಸ್ಮಿಕ ಸಾವು ಆಗಿದ್ದರಿಂದ ಮರಣೋತ್ತರ ಪರೀಕ್ಷೆ […]

Continue Reading

ಕಲಬುರಗಿ: ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆ, 50 ಸಾವಿರ ರೂ ದಂಡ

ಕಲಬುರಗಿ: ತಾಲೂಕಿನ ಗ್ರಾಮವೊಂದರ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಕಬ್ಬಿನ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ ಅಪರಾಧ ಸಾಬೀತಾಗಿದ್ದರಿಂದ ಹೊನ್ನಪ್ಪ ಶರಣಪ್ಪ ದೊಡ್ಡಮನಿ ಎಂಬಾತನಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿದೆ. 22 ಜನವರಿ 2024 ರಂದು ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರ ಎಸಗುತ್ತಿದ್ದ. ಈ ಸಂದರ್ಭದಲ್ಲಿ ಮಹಿಳೆ ಚೀರಾಡಿದ್ದರಿಂದ ಆಕೆಯ ಸೋದರತ್ತೆ ಬಂದು ನೋಡಿದಾಗ ಹೊನ್ನಪ್ಪ ಪರಾರಿಯಾಗಿದ್ದ. ನಂತರ ಆಕೆ ಮಹಿಳೆಯ […]

Continue Reading

ಸ್ವಾತಂತ್ರ್ಯ ಚಳುವಳಿಗೆ ನಾಂದಿ ಹಾಡಿದ ಮಂಗಲಪಾಂಡೆ: ನರಸಪ್ಪ ಬಿರಾದಾರ

ಕಲಬುರಗಿ: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತುವ ಮೂಲಕ ಮಂಗಲಪಾಂಡೆ ಸ್ವಾತಂತ್ರ್ಯ ಚಳುವಳಿಗೆ ನಾಂದಿ ಹಾಡಿದ ಅಪ್ರತಿಮ ದೇಶಭಕ್ತ ಎಂದು ಚಿಂತಕ ನರಸಪ್ಪ ಬಿರಾದಾರ ದೇಗಾಂವ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಬೆಳಿಗ್ಗೆ ಜರುಗಿದ ‘ಮಂಗಲಪಾಂಡೆಯವರ ಜನ್ಮದಿನಾಚರಣೆ’ಯಲ್ಲಿ ಮಾತನಾಡಿದ ಅವರು, ವ್ಯಾಪರಕ್ಕಾಗಿ ಭಾರತಕ್ಕೆ ಆಗಮಿಸಿದ ಬ್ರೀಟಿಷರು ಒಡೆದಾಳುವ ನೀತಿಯ ಮೂಲಕ ಸುಮಾರು 250 ವರ್ಷಗಳ ಕಾಲ […]

Continue Reading

30 ವರ್ಷದ ಹಿಂದೆ ಗುತ್ತಿಗೆದಾರನಿಗೆ ಸಿಗಬೇಕಿದ್ದ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಡಿಸಿ ಕಾರು ಜಪ್ತಿ

ಬೆಳಗಾವಿ: 30 ವರ್ಷಗಳ ಹಿಂದೆ ಗುತ್ತಿಗೆದಾರನಿಗೆ ನೀಡಬೇಕಿದ್ದ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಬೆಳಗಾವಿಯ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಓಡಾಡ್ತಿದ್ದ ಕಾರು ಜಪ್ತಿ ಮಾಡಲಾಗಿದೆ. ದೂದಗಂಗಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಕಾಮಗಾರಿಯನ್ನು ದಿ.ನಾರಾಯಣ ಕಾಮತ್ ಎಂಬುವರಿಗೆ ಗುತ್ತಿಗೆ ನೀಡಲಾಗಿತ್ತು. 1992-93ರಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ ಕಾಮಗಾರಿ ಮಾಡಲಾಗಿತ್ತು. ಕಾಮಗಾರಿ ಮುಗಿದು 2 ವರ್ಷ ಕಳೆದಿದ್ದರೂ ಬಿಲ್‌ ಪಾವತಿ ಆಗಿರಲಿಲ್ಲ. ಹೀಗಾಗಿ ಬಿಲ್‌ಗಾಗಿ 1995ರಲ್ಲಿ ಗುತ್ತಿಗೆದಾರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ […]

Continue Reading