ಕಲಬುರಗಿ: ದಕ್ಷಿಣ ಆಫ್ರಿಕಾದ ಗಾಂಧಿ ಎಂಬ ಖ್ಯಾತಿ ಪಡೆದಿರುವ ನೆಲ್ಸನ್ ಮಂಡೇಲಾ ಅವರು ಗಾಂಧಿವಾದಿ ಮತ್ತು ಶ್ರೇಷ್ಠ ಸಮಾಜ ಸುಧಾರಕ. ಶಾಂತಿ, ವರ್ಣಭೇದ ನೀತಿ, ಪ್ರಜಾಪ್ರಭುತ್ವ, ಸ್ವಾತಂತ್ರ‍್ಯ, ಸಮಾನತೆ, ವೈವಿಧ್ಯತೆ, ಸಾಮರಸ್ಯಕ್ಕೆ ಮಂಡೇಲಾ ಅವರು ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ನೆಲ್ಸನ್ ಮಂಡೇಲಾರ ಜನ್ಮದಿನ- ಅಂತಾರಾಷ್ಟೀಯ ಮಂಡೇಲಾ ದಿನಾಚರಣೆ ಅಥವಾ ವರ್ಣಭೇದ ನೀತಿ ವಿರೋಧಿ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದ ಅವರು, ಮಂಡೇಲಾ ಅವರು ಮಾಡಿರುವ ಸೇವೆ, ನೀಡಿರುವ ಕೊಡುಗೆ ಪರಿಗಣಿಸಿ ‘ಭಾರತ ರತ್ನ’ ಮತ್ತು ‘ನೋಬೆಲ್ ಶಾಂತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಭೇದ ನೀತಿ ನಿರ್ಮೂಲನೆಗೆ ನಿರಂತರವಾಗಿ ಹೋರಾಟ ಮಾಡಿದರು. ಶಾಂತಿ, ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿ ಕಾರ್ಯನಿರ್ವಹಸಿದ್ದಾರೆ. ಕಪ್ಪು ಜನಾಂಗದ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ 250ಕ್ಕೂ ಹೆಚ್ಚು ಪ್ರಶಸ್ತಿಗಳು ದೊರತಿವೆ. ಅನೇಕ ಪುಸ್ತಕಗಳು ಬರೆದಿದ್ದಾರೆ ಎಂದು ಮಂಡೇಲಾರ ಜೀವನ-ಸಾಧನೆ-ಕೊಡುಗೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಚಂಪಾಕಲಾ ಆರ್.ನೆಲ್ಲೂರೆ, ಶಿಕ್ಷಕಿ ಗೀತಾಂಜಲಿ ಎಸ್.ಹಡಪದ, ಸೇವಕಿ ಸಿದ್ದಮ್ಮ ಎಂ.ಕೌAಟೆ ಹಾಗೂ ವಿದ್ಯಾರ್ಥಿಗಳು ಇದ್ದರು.