ವಾಡಿ: ಬಿಜೆಪಿ ರಾಜ್ಯ ನಾಯಕರ ಜನ್ಮ ದಿನದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ

ಪಟ್ಟಣ

ವಾಡಿ: ಪಟ್ಟಣದ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಬಿಜೆಪಿ ರಾಜ್ಯ ನಾಯಕರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಮತ್ತು ಕೇಂದ್ರ ರೈಲ್ವೆ ಜಲಶಕ್ತಿ ಸಚಿವ ವಿ ಸೋಮಣ್ಣ ಅವರ ಜನ್ಮದಿನದ ಪ್ರಯುಕ್ತ ರವಿವಾರ ಶಕ್ತಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ರಾಜ್ಯದ ಪ್ರತಿಯೊಬ್ಬ ಕಾರ್ಯಕರ್ತರ ಮನದಲ್ಲಿ ಪಕ್ಷ ಸಂಘಟನೆಯ ಬಗ್ಗೆ, ಸ್ವಾಭಿಮಾನದ ಬಗ್ಗೆ ಕಿಚ್ಚನ್ನು ಮೂಡಿಸುವಲ್ಲಿ ಚಲುವಾದಿ ನಾರಾಯಣಸ್ವಾಮಿ ಮತ್ತು ವಿ ಸೋಮಣ್ಣ ಪ್ರಮುಖರಾಗಿದ್ದಾರೆ ಎಂದರು.

ನಮ್ಮ ಹೆಮ್ಮೆಯ ಚಲುವಾದಿ ನಾರಾಯಣಸ್ವಾಮಿ ಅವರು ವಿಧಾನ ಪರಿಷತ್ತಿನ ಪ್ರಬಲ ವಿರೋಧ ಪಕ್ಷದ ನಾಯಕರಾಗಿ ರಾಜ್ಯ ಸರ್ಕಾರದ ದುರಾಡಳಿತದಲ್ಲಿ ತೊಡಗಿದ್ದವರಿಗೆ ಸಿಂಹ ಸ್ವಪ್ನವಾಗಿದ್ದಾರೆ. ತಮ್ಮ ಸರಳ ವ್ಯಕ್ತಿತ್ವದಿಂದ ಎಲ್ಲರ ಅಚ್ಚುಮೆಚ್ಚಿನವರಾಗಿದ್ದು, ಸಾಮಾನ್ಯ ಕಾರ್ಯಕರ್ತನ ಬಗ್ಗೆ ಕಾಳಜಿ ವಹಿಸಿ, ಸ್ಪಂದಿಸುವ ಗುಣದಿಂದ ಎಲ್ಲಾ ಕಾರ್ಯಕರ್ತರಿಗೆ ಆತ್ಮೀಯ ನಾಯಕರಾಗಿದ್ದಾರೆ ಎಂದರು.

ಕೇಂದ್ರ ಸಚಿವ ವಿ ಸೋಮಣ್ಣ ಮತ್ತು ಪ್ರಧಾನಿ ಮೋದಿ ಅವರ ದೇಶಾಭಿವೃದ್ಧಿ ಆಶಯದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ಪ್ರಗತಿಪರ ಯೋಜನೆಯನ್ನು ರೈಲ್ವೆ ಇಲಾಖೆಯಲ್ಲಿ ಅಳವಡಿಸಿ ಜನಸಾಮಾನ್ಯರ ಬದುಕಿಗೆ ಪೂರಕವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಇವರ ಜನಪರ ಕಾಳಜಿ, ದೇಶಾಭಿಮಾನ, ಪಕ್ಷ ನಿಷ್ಠೆ ನಮೆಲ್ಲರಿಗೂ ಪ್ರೇರಣೆಯಾಗಿದೆ. ನಮ್ಮ ಹೆಮ್ಮೆಯ ನಾಯಕರಾದ ಚಲುವಾದಿ ನಾರಾಯಣಸ್ವಾಮಿ ಮತ್ತು ವಿ ಸೋಮಣ್ಣ ಅವರಿಗೆ ದೇವರು ಅಯುಷ್ಯಾರೋಗ್ಯ ಕೊಟ್ಟು ಕಾಪಾಡಲಿ ಎಂದು ನಾವೆಲ್ಲರು ಶುಭಕೊರುತ್ತೆವೆ ಎಂದರು.

ಈ ಸಂಧರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಮಂಗಳಮೂರ್ತಿ ಜ್ಯೋಶಿ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮುಖಂಡರಾದ ರಾಜು ಮುಕ್ಕಣ್ಣ, ಭೀಮರಾವ ದೊರೆ, ಅರ್ಜುನ ಕಾಳೆಕರ, ಶಿವಶಂಕರ ಕಾಶೆಟ್ಟಿ,ಹರಿ ಗಲಾಂಡೆ, ಮಲ್ಲಿಕಾರ್ಜುನ ಸಾತಖೇಡ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ,ಉಮಾಭಾಯಿ ಗೌಳಿ, ಶಿವುಪ್ರಸಾದ್ ಗೋಳಾ,
ದತ್ತಾ ಖೈರೆ, ವಿಶ್ವನಾಥ ನಾಯಕ, ಪರಮೇಶ್ವರ ಚೊಪಡೆ ಸೇರಿದಂತೆ ಅನೇಕರು ಪಾಲ್ಗೊಂಡು ಪರಸ್ಪರ ಸಿಹಿ ಹಂಚಿ,ಸಾರ್ವಜನಿಕರಿಗೆ ಹಣ್ಣು ಹಂಪಲಗಳನ್ನು ವಿತರಿಸಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *