ಮತದಾನದಿಂದ ಪ್ರಜಾಪ್ರಭುತ್ವದ ಯಶಸ್ಸು: ನೀಲಪ್ರಭಾ

ಚಿತ್ತಾಪುರ: ಪ್ರತಿಯೊಬ್ಬ ಮತದಾರರು ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯ ಎಂದು ತಾಲೂಕ ದಂಡಾಧಿಕಾರಿ ನೀಲಪ್ರಭಾ ಹೇಳಿದರು. ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ದಿ ಸಂಸ್ಥೆಯಲ್ಲಿ ಶಹಾಬಾದ ತಾಲೂಕ ಆಡಳಿತ ವತಿಯಿಂದ ನಡೆದ “ಸ್ವೀಪ್” ಕಾರ್ಯಕ್ರಮದಡಿ ಈಶಾನ್ಯ ಶಿಕ್ಷಕರ ಚುನಾವಣೆ ಅಂಗವಾಗಿ ನಡೆದ ಮತದಾರ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳೇ ಬುನಾದಿ. ಪ್ರತಿಯೊಬ್ಬರು ಚುನಾವಣಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗಿಯಾದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಅರ್ಹತೆ ಇರುವ ಶಿಕ್ಷಕರು ಕಡ್ಡಾಯವಾಗಿ […]

Continue Reading

ಭೀಕರ ದುರಂತಕ್ಕೆ 20 ಬಲಿ: ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ ?

ಹೈದರಾಬಾದ್‌: ಕರ್ನೂಲ್‌ನಲ್ಲಿ ನಡೆದ ಭೀಕರ ಬಸ್ಸು ದುರಂತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದಾರೆ. ಆದರೆ ಈ ದುರಂತಕ್ಕೆ ಕಾರಣವಾದ ಬೈಕ್‌ ಮತ್ತು ಬಸ್ಸಿನ ನಡುವೆ ಅಪಘಾತ ಹೇಗೆ ಸಂಭವಿಸಿದೆ ಎನ್ನುವುದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ದುರಂತ ಹೇಗಾಯ್ತು ?ಬೈಕ್‌ನಲ್ಲಿದ್ದ ವ್ಯಕ್ತಿಯನ್ನು ಶಿವಶಂಕರ್ ಎಂದು ಗುರುತಿಸಲಾಗಿದೆ. ಬಸ್ಸು ಮತ್ತು ಬೈಕ್‌ ಒಂದೆ ದಿಕ್ಕಿನಲ್ಲಿ ಪ್ರಯಾಣಿಸುತ್ತಿತ್ತು. ವೇಗವಾಗಿ ಬರುತ್ತಿದ್ದ ಬಸ್ಸು ಮೊದಲು ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಕೆಳಗಡೆ ಬಿದ್ದಿದೆ. ಬೈಕ್‌ ಕೆಳಗಡೆ ಬಿದ್ದರೂ […]

Continue Reading

ರಾಷ್ಟ್ರದ ಅಭಿವೃದ್ಧಿಯಲ್ಲಿ ಮಾಹಿತಿ, ಸಂವಹನದ ಪಾತ್ರ ಪ್ರಮುಖ

ಕಲಬುರಗಿ: ವಿಶ್ವದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ವಿಶ್ವದೆಲ್ಲೆಡೆ ಜನ ಜಾಗೃತಿ ಮೂಡಿಸಲು ಮತ್ತು ಅವುಗಳ ಪರಿಹರಿಸಲು ಅಂತರರಾಷ್ಟ್ರೀಯ ಸಹಕಾರ ಉತ್ತೇಜಿಸುವಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಪಾತ್ರ ಪ್ರಮುಖವಾಗಿದೆ. ಇವುಗಳ ಸದುಪಯೋಗದಿಂದ ರಾಷ್ಟ್ರ ಸೇರಿದಂತೆ ಜಾಗತಿಕ ಅಭಿವೃದ್ಧಿಗೆ ಸರ್ವರು ಕೈಜೋಡಿಸುವುದು ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಮಾಹಿತಿ ಪ್ರಸಾರ […]

Continue Reading

ಹಾವೇರಿ: ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಮೂವರು ದುರ್ಮರಣ

ಹಾವೇರಿ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರು ಬಲಿಯಾಗಿದ್ದಾರೆ. ಮೃತರನ್ನು ಚಂದ್ರಶೇಖರ ಕೋಡಿಹಳ್ಳಿ (70), ಗನಿಸಾಬ್ ಬಂಕಾಪುರ (70) ಹಾಗೂ ಭರತ್ (22) ಎಂದು ಗುರುತಿಸಲಾಗಿದ್ದು, 5ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹಾವೇರಿ ವೀರಭದ್ರಶ್ವರ ದೇವಸ್ಥಾನದ ಮುಂದೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಮನೆಗೆ ಹೋಗುತ್ತಿದ್ದ ಹೋರಿ ತಿವಿದು ಚಂದ್ರಶೇಖರ ಎಂಬ ವಯೋವೃದ್ದ ಸಾವನ್ನಪ್ಪಿದ್ದಾರೆ. ದೇವಿಹೊಸೂರು ಗ್ರಾಮದಲ್ಲಿ ಹೋರಿ ಹಬ್ಬದಲ್ಲಿ ಭಾಗವಹಿಸಿದ ಹೋರಿ ಮನೆಗೆ ನುಗ್ಗಿ ವಯೋವೃದ್ದ ಗನಿಸಾಬ್ ಬಂಕಾಪುರ ಎಂಬುವವರನ್ನು […]

Continue Reading

ಬಿಗ್‌ ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮನೆಗೆ ಬೀಗ ಜಡಿದ ಪ್ರಕರಣ ಮಾಸುವ ಮುನ್ನವೆ ಬಿಗ್‌ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ. ಬಿಗ್ ಬಾಸ್ ಮನೆಯಲ್ಲಿ S ಪದ ಬಳಕೆ ಮಾಡಿದಕ್ಕೆ ಅಶ್ವಿನಿಗೌಡ ಮತ್ತು ಆಯೋಜಕರ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಹ ಸ್ಪರ್ಧಿ ರಕ್ಷಿತಾ ಕುರಿತು ಈ ಮಾತನ್ನು ಆಡಿದ್ದಾರೆ. ಇದೊಂದು ವ್ಯಕ್ತಿತ್ವ ನಿಂದನೆ ಎಂದು ಆರೋಪಿಸಿ ಅಶ್ವಿನಿಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ […]

Continue Reading

ವಚನ ಸಂರಕ್ಷಣೆಯಲ್ಲಿ ಚನ್ನಬಸವಣ್ಣನವರ ಪಾತ್ರ ಪ್ರಮುಖ

ಕಲಬುರಗಿ: ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ಜರುಗಿದ ಸಾಮಾಜಿಕ ಚಳುವಳಿಯಲ್ಲಿ ಚನ್ನಬಸವಣ್ಣನವರು ಸಾಕಷ್ಟು ಶ್ರಮಿಸಿದ್ದಾರೆ. ಅಮೂಲ್ಯವಾದ ವಚನಗಳನ್ನು ರಚಿಸಿ, ರಕ್ಷಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವಿರಳ ಜ್ಞಾನಿಯಾಗಿದ್ದ ಅವರ ಕೊಡುಗೆ ಅನನ್ಯವಾಗಿದೆ. ಅವರು ಪ್ರಮುಖ ವಚನಕಾರರಾಗಿದ್ದು, ಶರಣರ ಕ್ರಾಂತಿಯ ನಂತರ ವಚನಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು. ನಗರದ ಆಳಂದ ರಸ್ತೆಯ ದೇವಿ ನಗರ ಕಮಾನ್ ಹತ್ತಿರದ ಬಿರಾದಾರ ಕಾಂಪೆಕ್ಸ್ ಆವರಣದಲ್ಲಿ ಬಸವೇಶ್ವರ ಸಮಾಜ […]

Continue Reading

ಭಾರತೀಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಬಂಜಾರರ ಕೊಡುಗೆ ಅಪಾರ

ಕಲಬುರಗಿ: ಆಧುನಿಕತೆ ಭರಾಟೆಯಲ್ಲಿ ಬಂಜಾರ ಸಮುದಾಯದವರು ತಮ್ಮದೆಯಾದ ವೇಷ-ಭೂಷಣ, ಕಲೆ, ಭಾಷೆ, ಸಂಸ್ಕೃತಿ, ಪರಂಪರೆಯನ್ನು ಇಂದಿಗೂ ಕೂಡಾ ಸಂರಕ್ಷಿಸಿಕೊಂಡು ಬಂದವರು. ಯಾವುದೆ ಹಬ್ಬ, ಉತ್ಸವ, ಆಚರಣೆಗಳನ್ನು ಶೃದ್ಧೆ, ಭಕ್ತಿಯಿಂದ ಮಾಡುವ ಮೂಲಕ ಮುಂದಿನ ಪೀಳಿಗೆಗೆ ವರ್ಗಾಯಿಸುವ ಬಂಜಾರರು ಭಾರತೀಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಅಪಾರವಾದ ಕೊಡುಗೆ ನೀಡುತ್ತಿದ್ದಾರೆ ಎಂದು ಬಳಿರಾಮ ಮಹಾರಾಜರು ಅಭಿಮತಪಟ್ಟರು. ಅಫಜಲಪುರ ತಾಲೂಕಿನ ಗೊಬ್ಬೂರ ವಾಡಿಯ ತಾಂಡಾದ ಸಂತ ಸೇವಾಲಾಲ್ ಆಶ್ರಮದಲ್ಲಿ ದೀಪಾವಳಿ ಪಾಡ್ಯಮಿಯಂದು ಬುಧವಾರ ಜರುಗಿದ ‘ಬಂಜಾರಾ ದೀಪಾವಳಿ ಸಂಭ್ರಮ’ದಲ್ಲಿ ಬಾಲಕಿಯರು, ಮಹಿಳೆಯರಿಂದ ಜರುಗಿದ […]

Continue Reading

ಹಾವೇರಿ: ರಾಘವೇಂದ್ರ ಸ್ವಾಮಿ ಮಠದ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

ಹಾವೇರಿ: ನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳ್ಳರು ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ‌ಮಾಡಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಮಠದಲ್ಲಿ ಎರಡು ಕೋಣೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮಠದಲ್ಲಿರುವ ಚಿನ್ನಾಭರಣ, ಬೆಳ್ಳಿಯ ಆಭರಣ ಮತ್ತು ತಾಮ್ರದ ವಸ್ತುಗಳನ್ನು ಖದೀಮರು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳವಾದ ವಸ್ತುಗಳು1) 15 ಗ್ರಾಂ ಬಂಗಾರದ ಸರದ ಹುಕ್ಕು, 1,79,550 ರೂ. ಮೌಲ್ಯದ್ದು2) 18 ಗ್ರಾಂ ಬಂಗಾರದ […]

Continue Reading

ಮನಸ್ಸನ್ನು ಅರಳಿಸುವ ಶಕ್ತಿ ಸಂಗೀತಕ್ಕಿದೆ: ಡಾ.ಸಿದ್ಧತೋಟೇಂದ್ರ ಶ್ರೀ

ಚಿತ್ತಾಪುರ: ಸಂಗೀತಕ್ಕೆ ನೋವು, ದುಃಖ, ಆತಂಕ, ಖಿನ್ನತೆ ಮರೆಸುವ ಶಕ್ತಿಯಿದೆ, ಮಾನಸಿಕ ಆರೋಗ್ಯ ವೃದ್ಧಿಗೆ ಸಂಗೀತವು ಒಂದು ಸಾಧನವಾಗಿ ಕೆಲಸ ಮಾಡುತ್ತದೆ ಎಂದು ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹೇಳಿದರು. ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ರಾತ್ರಿ ಶ್ರೀಮಠದ ಸಿದ್ಧತೋಟೇಂದ್ರ ಸುವರ್ಣ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಶಿವಾನುಭವ ಚಿಂತನ ಹಾಗೂ ಸಂಗೀತೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ದಾಸರ ಹಾಡುಗಳು, ಸರ್ವಜ್ಞರ ತ್ರಿಪದಿಗಳು, ಸ್ವರ ವಚನಗಳಿಗೆ ಭಾವಗೀತೆಗಳಿಗೆ ಸಂಗೀತ […]

Continue Reading

ಬಿ12 ಕೊರತೆಗೂ, ಪದೇ ಪದೆ ಉಗುರುಗಳು ಮುರಿಯುವುದಕ್ಕೂ ಸಂಬಂಧವಿದೆಯೆ ? ಇಲ್ಲಿದೆ ತಜ್ಞರು ನೀಡಿದ ಕಾರಣ

ಕೆಲವರಿಗೆ ಉಗುರು ಬಿಡುವುದು ಎಂದರೆ ಬಲು ಪ್ರೀತಿ. ಅದಕ್ಕೆ ನಾನಾ ರೀತಿಯಲ್ಲಿ ಸಿಂಗಾರ ಮಾಡಿ ಬಣ್ಣ ಬಣ್ಣದ ನೈಲ್ ಪೊಲಿಶ್ ಹಚ್ಚಿಕೊಳ್ಳುತ್ತಾರೆ. ಇದು ಹುಡುಗಿಯರಿಗೆ ಮಾತ್ರ ಸೀಮಿತವಾಗಿಲ್ಲ. ಕೆಲವು ಹುಡುಗರು ಕೂಡ ಉಗುರನ್ನು ಬೆಳೆಸುತ್ತಾರೆ. ಇದು ಕೈಗಳ ಅಂದವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ ಎಂಬುದು ಹಲವರ ನಂಬಿಕೆ ಆದರೆ ಕೆಲವರಿಗೆ ಸ್ವಲ್ಪ ಉಗುರು ಬರುವುದರೊಳಗೆ ಅದು ತನ್ನಿಂದ ತಾನಾಗಿಯೇ ಮುರಿದು ಹೋಗುತ್ತದೆ. ಈ ರೀತಿ ನಿಮ್ಮ ಉಗುರುಗಳು ಕೂಡ ದುರ್ಬಲವಾಗಿದ್ದರೆ ಅಥವಾ ಆಗಾಗ ಮುರಿದು ಹೋಗುತ್ತಿದ್ದರೆ ಅದಕ್ಕೆ ಕಾರಣ […]

Continue Reading