ಮಾನವರೆಲ್ಲರು ಒಂದೆ, ಒಗ್ಗಟ್ಟಾಗಿರುವುದು ಅಗತ್ಯ: ಎಚ್.ಬಿ ಪಾಟೀಲ

ನಗರದ

ಸುದ್ದಿ ಸಂಗ್ರಹ ಕಲಬುರಗಿ  
ಮಾನವರೆಲ್ಲರು ಒಂದೆಯಾಗಿದ್ದು, ಜಾತಿ, ಮತ, ಪ್ರದೇಶ, ಸಂಸ್ಕೃತಿ, ಪರಂಪರೆಯಿಂದ ಮೇಲು-ಕೀಳು ಸಲ್ಲದು. ಇವುಗಳು ಮಾನವನನ್ನು ಅಲ್ಪರನ್ನಾಗಿಸುತ್ತವೆ. ಮಾನವರೆಲ್ಲರು ಒಂದೆಯಾಗಿದ್ದು, ಒಗ್ಗಟ್ಟಿನಿಂದ ಜೀವನ‌ ಸಾಗಿಸಬೇಕು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಮತಪಟ್ಟರು.

ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್ ‘ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟು ದಿನಾಚರಣೆ”ಯಲ್ಲಿ ಮಾತನಾಡಿದ ಅವರು, ವೈವಿಧ್ಯತೆಯಲ್ಲಿ ಏಕತೆ  ಆಚರಿಸುವುದು, ಬಡತನ, ಅಸಮಾನತೆ ಮತ್ತು ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆಗಳನ್ನು ನಿವಾರಿಸಲು ಜನರು ಮತ್ತು ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವದು ಒತ್ತಿ ಹೇಳುವುದು ಮತ್ತು ಸುಸ್ಥಿರ ಅಭಿವೃದ್ಧಿ ಗುರಿ  ಸಾಧಿಸಲು ಒಗ್ಗಟ್ಟನ್ನು ಪ್ರೋತ್ಸಾಹಿಸುವುದು ದಿನಾಚರಣೆಯ ಉದ್ದೇಶವಾಗಿವೆ ಎಂದರು. 

ಮಾನವನ ಒಗ್ಗಟ್ಟು  ಸರ್ಕಾರಗಳಿಗೆ ಅಂತಾರಾಷ್ಟ್ರೀಯ ಒಪ್ಪಂದಗಳ ಬದ್ಧತೆಗಳನ್ನು ಗೌರವಿಸಲು ಸ್ಮರಿಸುತ್ತದೆ.  ಬಡತನ ನಿರ್ಮೂಲನೆಗಾಗಿ ಹೊಸ ಉಪಕ್ರಮ ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತದೆ. ಭೌಗೋಳಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಗಡಿ ಮೀರಿ ಜನರು ಒಂದಾಗಬೇಕು ಎಂದು ಒತ್ತಿ ಹೇಳುತ್ತದೆ. ಸಮಾನತೆ ಮತ್ತು ನ್ಯಾಯದ ಬಗ್ಗೆ ತಿಳಿಸುತ್ತದೆ. ಹವಾಮಾನ ಬದಲಾವಣೆ ಮತ್ತು ಸಾಮಾಜಿಕ ಅನ್ಯಾಯದಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಒಗ್ಗಟ್ಟಿನ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ. ಶಿಕ್ಷಣ ನೀಡುವ ಮೂಲಕ, ಅಗತ್ಯವಿರುವರಿಗೆ ಸಹಾಯ ಮಾಡುವ ಮೂಲಕ ಅಥವಾ ಸ್ಥಳೀಯ ಯೋಜನೆಗಳನ್ನು ಬೆಂಬಲಿಸುವ ಮೂಲಕ ಭಾಗವಹಿಸಲು ಪ್ರೋತ್ಸಾಹಿಸುತ್ತದೆ, ಒಟ್ಟಾರೆಯಾಗಿ ಪ್ರತಿಯೊಬ್ಬರೂ ಒಂದೆ ಮಾನವ ಕುಟುಂಬದ ಭಾಗವೆಂಬುದನ್ನು ಸಾರುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ್ ಮುತ್ತಾ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಶಿಕ್ಷಕ ಆದರ್ಶ ಬಿರಾದಾರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *