ಕನ್ನಡ ಸಾಹಿತ್ಯಕ್ಕೆ ಡಾ.ಯು.ಆರ್ ಅನಂತಮೂರ್ತಿ ಕೊಡುಗೆ ಅನನ್ಯ: ಎಚ್.ಬಿ ಪಾಟೀಲ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಕವಿತೆ, ಕಥೆ, ಕಾದಂಬರಿ, ಸಾಹಿತ್ಯ, ವಿಮರ್ಶೆ, ನಾಟಕ ಹೀಗೆ ಹಲವು ವೈವಿಧ್ಯಮಯ ಪ್ರಕಾರದಲ್ಲಿ ತಮ್ಮದೆಯಾದ ಪಾಂಡಿತ್ಯ ಹೊಂದಿದ್ದ ಡಾ.ಯು.ಆರ್ ಅನಂತಮೂರ್ತಿ, ಕನ್ನಡ ಸಾಹಿತ್ಯ ಬೆಳವಣಿಗೆಗೆ ಅನನ್ಯವಾದ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಜರುಗಿದ ‘ಡಾ.ಯು.ಆರ್ ಅನಂತಮೂರ್ತಿಯವರ 93ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ಭಾಷೆ, ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸ, ಪರಂಪರೆಯಿದ್ದು, ಇದಕ್ಕೆ ಅನೇಕ ಸಾಹಿತಿಗಳು, ಹೋರಾಟಗಾರರು ಶ್ರಮಿಸಿದ್ದಾರೆ ಎಂದರು.

ಡಾ.ಯು.ಆರ್ ಅನಂತಮೂರ್ತಿ ಅವರು ವಿವಿಧ ಮುಖಗಳಲ್ಲಿ ಸಾಹಿತ್ಯ, ಕೃಷಿ ಮಾಡುವ ಮೂಲಕ ಕನ್ನಡಕ್ಕೆ ಆರನೇ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟಿದ್ದಾರೆ. ‘ಭಾರತಿಪುರ’, ‘ಸಂಸ್ಕಾರ’ ಸೇರಿದಂತೆ ಮುಂತಾದ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ವಿದ್ಯಾರ್ಥಿಗಳು ನಾಡು-ನುಡಿಗಾಗಿ ಸೇವೆ ಸಲ್ಲಿಸಿರುವ ಮಹನೀಯರ ಬಗ್ಗೆ ತಿಳಿದುಕೊಂಡು ಕನ್ನಡದ ಶ್ರೇಷ್ಠತೆ ವಿಶ್ವದೆಲ್ಲೆಡೆ ಸಾರುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕ ಸಾಲಿ ಸಂಗೀತಾ, ಶಿಕ್ಷಕಿಯರಾದ ಕಾಶಮ್ಮ ಚಿನ್ಮಳ್ಳಿ, ಪ್ರಿಯಾಂಕಾ ಪಿ.ಕೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಆದಿತ್ಯ, ಅದಿತಿ ಮತ್ತು ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *