ಪತ್ರಿಕಾ ಭವನ ನಿರ್ಮಾಣಕ್ಕೆ ಅನುದಾನ: ಶಾಸಕ ಬಸವರಾಜ ಮತ್ತಿಮೂಡ

ನಗರದ

ಸುದ್ದಿ ಸಂಗ್ರಹ ಶಹಾಬಾದ
ತಾಲೂಕು ಕೇಂದ್ರದಲ್ಲಿ ಪತ್ರಕರ್ತರ ಕಾರ್ಯ ಚಟುವಟಿಕೆಗೆ ಪತ್ತಿಕಾ ಭವನ ನಿರ್ಮಾಣಕ್ಕೆ ಅನುದಾನ ನೀಡುವದಲ್ಲದೆ, ನಗರ ಸಭೆಯಿಂದ ನಿವೇಶನ ನೀಡಿದ್ದಲ್ಲಿ, ಸರಕಾರದ ಮಾರ್ಗ ಸೂಚಿಯಂತೆ ನಿವೇಶನ ಖರೀದಿಯ ಅರ್ಧ ವೆಚ್ಚ ಭರಿಸಿ, ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವದಾಗಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಭರವಸೆ ನೀಡಿದರು.

ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ನಡೆದ ನೂತನವಾಗಿ ಆಯ್ಕೆಯಾದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣಕ್ಕೆ ಕೂಡಲೆ ಸ್ಥಳದ ಲಭ್ಯತೆ ಕುರಿತು ಮಾಹಿತಿ ಒದಗಿಸುವಂತೆ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ ಅವರಿಗೆ ಸೂಚಿಸಿದರು.

ಈ ಭಾಗದಲ್ಲಿ ಕಾರ್ಖಾನೆಗಳು ಮುಚ್ಚಿದ್ದರಿಂದ ಜನರು ಮುಂಬೈ, ಬೆಂಗಳೂರಿಗೆ ಗುಳೆ ಹೋಗುತ್ತಿದ್ದು, ಇಂದು ಅಲ್ಲಿಯೂ ಕೆಲಸ ಸಿಗುತ್ತಿಲ್ಲ, ಈ ಕುರಿತು ಪತ್ರಕರ್ತರು ಬೆಳಕು ಚೆಲ್ಲಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಪತ್ರಕರ್ತರ ಜವಾಬ್ದಾರಿ ಹಿಂದಿಗಿಂತಲೂ ಇಂದು ಬಹಳ ಹೆಚ್ಚಿದೆ. ವೈಯುಕ್ತಿಕ ಬದುಕಿನ ಬೇಸರ ಪಕ್ಕಕ್ಕಿಟ್ಟು ಕೆಲಸ ಮಾಡುತ್ತಿರುವ ಪತ್ರಕರ್ತರು ಸದಾ ಅಭಿನಂದನಾ ಅರ್ಹರು, ನೊಂದವರ ಧ್ವನಿಯಾಗಿ ಕೆಲಸ ಮಾಡುವಲ್ಲಿ ಪತ್ರಕರ್ತರು ಮತ್ತಷ್ಟು ಹೆಚ್ಚಿಸಬೇಕು ಎಂದರು.

ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿ, ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮತ್ತು ಸಮಸ್ಯೆಗಳ ಮಧ್ಯೆ ಕೆಲಸ ಮಾಡುವುದು ಸವಾಲಿನ ಕೆಲಸವಾಗಿದೆ. ಪತ್ರಿಕೆಗಳಿಗೆ ಜೀವ ತುಂಬುವ ಕಾರ್ಯಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.

ಕಾಡಾ ನಿಗಮ ಅಧ್ಯಕ್ಷ ಎಂ.ಎ ರಶೀದ್ ಮತ್ತು ನಗರಸಭೆ ಪೌರಾಯುಕ್ತ ಡಾ. ಕೆ.ಗುರುಲಿಂಗಪ್ಪ ಮಾತನಾಡಿದರು.

ಪತ್ರಿಕಾ ಭವನಕ್ಕೆ ನಿವೇಶನ
ಶಹಾಬಾದ ತಾಲೂಕ ಪತ್ರಕರ್ತರಿಗೆ ಅನುಕೂಲವಾಗಲು
ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ನೀಡಲು ಶಾಸಕ
ಬಸವರಾಜ ಮುತ್ತಿಮೂಡ ಅವರ ಆಗ್ರಹಕ್ಕೆ, ಒಪ್ಪಿದ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ ನಾನು ನಿವೃತ್ತಿ ಹಂತದಲ್ಲಿದ್ದು, ನನ್ನ ಅವಧಿಯಲ್ಲಿಯೆ ಪತ್ರಿಕಾ ಭವನಕ್ಕೆ ನಿವೇಶನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿ, ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡುವದಾಗಿ ಆಶ್ವಾಸನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಕೆ.ರಮೇಶ ಭಟ್ ವಹಿಸಿದ್ದರು.

ವೇದಿಕೆಯ ಮೇಲೆ ಪಿಐ ನಟರಾಜ ಲಾಡೆ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅರುಣಕುಮಾರ ಕದಂ, ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ, ಅನಿಲ ಸ್ವಾಮಿ, ಖಜಾಂಚಿ ಆಶೋಕ ಕಪನೂರ, ಕಾರ್ಯಕಾರಿ ಸದಸ್ಯರಾದ ಗುರುರಾಜ ಕುಲಕರ್ಣಿ, ವಿನಯಕುಮಾರ ಜಿಡಗಾ, ಮುಖಂಡರಾದ ಸಂಗಮೇಶ ವಾಲಿ, ಮರಿಯಪ್ಪ ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪತ್ರಕರ್ತರಾದ ನಾಗರಾಜ ದಂಡಾವತಿ, ಮ.ಮುಸ್ತಾಕಾ, ಖಾಜಾ ಪಟೇಲ, ದಾಮೋಧರ ಭಟ್, ಗಣ್ಯರಾದ ರಾಜು ಮೇಸ್ತ್ರಿ , ಕನಕಪ್ಪ ದಂಡಗುಂಡಕರ್, ಶರಣಬಸಪ್ಪ ಕೋಬಾಳ, ಬಾಬುರಾವ ಪಂಚಾಳ, ನಿಂಗಣ್ಣ ಹುಳಗೋಳ, ಸಾಹೇಬಗೌಡ ಬೊಗುಂಡಿ, ಸುರೇಶ ಮೆಂಗನ್, ರಾಜೇಶ ಯನಗುಂಟಿಕರ್, ಭೀಮರಾವ ಸಾಳೊಂಕೆ, ಶರಣು ಪಗಲಾಪುರ, ವಿಶ್ವರಾಜ ಫಿರೋಜಾಬಾದ್, ನಾಗಪ್ಪ ರಾಯಚೂರಕರ್, ರಾಮು ಕುಸಾಳೆ, ಬಸವರಾಜ ಬಿರಾದಾರ ಸೇರಿಂದ ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಕು.ಭಾವನಾ ಪ್ರಾರ್ಥಿಸಿದರು, ಲೋಹಿತ್ ಕಟ್ಟಿ ನಿರೂಪಿಸಿದರು, ನಿಂಗಣ್ಣ ಜಂಬಗಿ ಸ್ವಾಗತಿಸಿದರು, ಶಿವಕುಮಾರ ಕುಸಾಳೆ ವಂದಿಸಿದರು.

ಕು.ಭಾವನಾ, ಸಿದ್ದಾರೋಢ, ರಾಜು ಜಂಬಗಿ, ವಿಶ್ವರಾಜ ಚಿತ್ತಾಪುರ, ಶಿವುಶಂಕರ ಹಿರೇಮಠ, ರವಿ ಚವ್ಹಾಣ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *