YouTube ನಿಂದ ಹಣ ಗಳಿಸುವುದು ಹೇಗೆ ? 2 ದಿನಗಳ ಸರ್ಕಾರಿ ತರಬೇತಿ

ಯೂಟ್ಯೂಬ್ ಕೇವಲ ವಿಡಿಯೋ ವೇದಿಕಯಲ್ಲ. ಅದು ಗಳಿಕೆಗೆ ಅತ್ಯುತ್ತಮ ಮೂಲವಾಗಿ ಬದಲಾಗಿದೆ. ಆದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮದೆಯಾದ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಲು ಬಯಸುತ್ತಾರೆ. ಆದರೆ ಸಮಸ್ಯೆಯೆಂದರೆ ಹೆಚ್ಚಿನ ಜನರಿಗೆ ಎಲ್ಲಿಂದ ಪ್ರಾರಂಭಿಸಬೇಕು ಮತ್ತು ಯಾವ ವಿಷಯಗಳಿಂದ ಜನರನ್ನು ಹೆಚ್ಚು ಆಕರ್ಷಿಸಬೇಕು ಎಂಬುದು ತಿಳಿದಿಲ್ಲ. ನೀವೂ ಕೂಡ ಇದೆ ರೀತಿ ಸಮಸ್ಯೆಯಲ್ಲಿದ್ದರೆ ಈ ಸುದ್ದಿ ನಿಮಗಾಗಿ. ಈಗ ನೀವು ಮನೆಯಲ್ಲಿ ಕುಳಿತು ಎರಡು ದಿನಗಳಲ್ಲಿ YouTube ಚಾನೆಲ್ ರಚಿಸುವ ಮತ್ತು ಅದರಿಂದ ಹಣ ಗಳಿಸುವ ತಂತ್ರವನ್ನು […]

Continue Reading

ಭೂಮಿ ಪೂಜೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಸುದ್ದಿ ಸಂಗ್ರಹ ಶಹಾಬಾದ ರಾಯಚೋಟಿ ವೀರಭದ್ರೇಶ್ವರ ಆಶ್ರಮ ಹಾಗೂ ಭದ್ರಕಾಳಿ ದೇವಸ್ಥಾನದ ನೂತನ ಕಟ್ಟಡದ ಭೂಮಿ ಪೂಜೆಯನ್ನು ಸಮಾಜ ಸೇವಕಿ ಜಯಶ್ರೀ ಮತ್ತಿಮೂಡ ನೆರವೇರಿಸಿದರು ಮತ್ತು 501 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು ಎಂದು ಶ್ರೀ ಮಠದ ಪೂಜ್ಯ ಶಂಕ್ರಯ್ಯ ಸ್ವಾಮಿ ಹೇಳಿದರು.  ನಗರದಲ್ಲಿ ಸೋಮುವಾರ ರಾಯಚೋಟಿ ವೀರಭದ್ರೇಶ್ವರ ಆಶ್ರಮದ ನೂತನ ಕಟ್ಟಡದ ಶಂಕು ಸ್ಥಾಪನೆ ಮತ್ತು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಮಠಕ್ಕೆ ಭಕ್ತರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ […]

Continue Reading

ಅತಿಯಾದ ಮಳೆಯಿಂದ ಬಳವಡಗಿ ಗ್ರಾಮ ಜಲಾವೃತ: ಅಗ್ನಿಶಾಮಕ ಸಿಬ್ಬಂದಿಯಿಂದ 20 ಜನರ ರಕ್ಷಣೆ

ಸುದ್ದಿ ಸಂಗ್ರಹ ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದಲ್ಲಿ ಅತಿ ಹೆಚ್ಚು ಮಳೆಯಾದ ಪರಿಣಾಮ ಗ್ರಾಮದ ಕೆಲಭಾಗ ಜಲಾವೃತಗೊಂಡಿತ್ತು, ಕೂಡಲೇ ಕಲಬುರಗಿ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ 20 ಜನರ ರಕ್ಷಣೆ ಮಾಡಿದರು. ಕಲಬುರಗಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನ ನೇತೃತ್ವದಲ್ಲಿ ಎಸ್‌ಎಸ್‌ಓ ಆಂಜನೇಯ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಾದ ಸತೀಶ ಎಲ್.ಎಫ್, ನೈಮೋದಿನ್, ಗಬ್ಬರ್ ಸಿಂಗ್, ಶಂಕರ ಲಿಂಗ, ಮಲ್ಲಪ್ಪ, ಅಮಿತ, ಬಸವರಾಜ, ಶಂಭುಲಿಂಗಪ್ಪ ಮತ್ತು ರಾಮಾಜಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದರು. […]

Continue Reading

ಸದೃಢ ಆರೋಗ್ಯಕ್ಕಾಗಿ ಸಮತೋಲಿತ ಆಹಾರದ ಸೇವನೆ ಅಗತ್ಯ: ಡಾ.ಅನುಪಮಾ

ಕಲಬುರಗಿ: ಸದೃಢ ಆರೋಗ್ಯಕ್ಕಾಗಿ ಎಲ್ಲರು ಸಮತೋಲಿತ ಆಹಾರ ಸೇವಿಸುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಸೋಮವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಪೋಷಕಾಂಶ ಸಪ್ತಾಹ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದ ಅವರು, ಯಾವುದೆ ರಾಷ್ಟ್ರದ ಅಭಿವೃದ್ದಿಯಲ್ಲಿ ಆರೋಗ್ಯ ಭರಿತ, ಸದೃಢ ಮಾನವ ಸಂಪನ್ಮೂಲ ತುಂಬಾ ಅವಶ್ಯಕ. ಮಗುವಿದ್ದಾಗಲೇ ಅದಕ್ಕೆ ಎಲ್ಲಾ ಪೋಷಕಾಂಶಗಳುಳ್ಳ ಸಮತೋಲಿತ ಆಹಾರ ನೀಡಬೇಕು. ಇದರಿಂದ ಆ […]

Continue Reading

ನೇತ್ರದಾನ ಮಾಡುವುದು ಅಗತ್ಯ: ಡಾ.ಕೇಶ್ವಾರ

ಕಲಬುರಗಿ: ಕಣ್ಣುಗಳು ದಾನ ಮಾಡುವುದು ಒಂದು ಶ್ರೇಷ್ಠ ಕಾರ್ಯ. ಹುಟ್ಟು ಕುರುಡರಾಗಿ ಅಥವಾ ಅಪಘಾತದಿಂದ ದೃಷ್ಟಿ ಕಳೆದುಕೊಂಡವರಿಗೆ ಕಣ್ಣು ದಾನ ಮಾಡುವ ಮೂಲಕ ಅವರಿಗೆ ದೃಷ್ಟಿ ಭಾಗ್ಯ ನೀಡಬಹುದು ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಜರುಗಿದ “41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ” ಕಾರ್ಯಕ್ರಮವನ್ನು ಮಹಿಳೆಯೊಬ್ಬರ ಕಣ್ಣು ಪರೀಕ್ಷಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಾವಿನ ನಂತರವು […]

Continue Reading

ಮಹಿಳೆಯರ ದೂರು ಪೆಟ್ಟಿಗೆ ಅನಾವರಣ

ಸುದ್ದಿ ಸಂಗ್ರಹ ಶಹಾಬಾದ ಪಟ್ಟಣದ ಎಸ್’ಎಸ್ ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಂಪಮ್ಮ ಹಿರೇಮಠ ಮಹಿಳೆಯರ ದೂರು ಪೆಟ್ಟಿಗೆ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಡಾ.ಬಸವರಾಜ್ ಹಿರೇಮಠ, ಡಾ.ಸುರೇಖಾ ನಾಟೆಕರ್, ಡಾ.ಹಣಮಂತ ಸೇಡಂಕರ್, ಡಾ.ಗಂಗಾಧರ್ ಸ್ಥಾವರ ಮಠ, ಡಾ.ಕಾವೇರಿ, ಡಾ.ನಾಗರಾಜ ದೇವತಕಲ್, ಡಾ.ಲಕ್ಷ್ಮಣ ರಾಠೋಡ , ಪ್ರಮುಖರಾದ ಲಾಲಿತ, ಶಿವುಶಂಕರ್ ಹಿರೇಮಠ ಸೇರಿದಂತೆ ಬೋಧಕ ಬೋಧಕ್ಕೆತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Continue Reading

ಶಹಾಬಾದ: ನೂತನ ತಹಸೀಲ್ದಾರ್‌ ನೀಲಪ್ರಭಾ ಬಬಲಾದ ಅವರಿಗೆ ಸನ್ಮಾನ

ಸುದ್ದಿ ಸಂಗ್ರಹ ಶಹಾಬಾದ ನೂತನ ತಹಸೀಲ್ದಾರ್ ನೀಲಪ್ರಭಾ ಬಬಲಾದ ಅವರಿಗೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರ ಕರಣಿಕ ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಗುರುರಾಜ ಸಂಗಾವಿ, ನೌಕರರ ಸಂಘದ ವೀಠಾಬಾಯಿ, ಸುಶೀಲಾ, ಸುಲೋಚನಾ, ಬನ್ನಪ್ಪ ಸೈದಾಪುರ, ಈರಣ್ಣ ಸಾತಖೇಡ, ರವಿಕುಮಾರ ಮುತ್ತಗಿ, ಮುನೀರ್, ನರಸಪ್ಪ ಇದ್ದರು.

Continue Reading

ಪ್ರಾಚಿನ ಕಾಲದ ಧಾರ್ಮಿಕ, ಆಧ್ಯಾತ್ಮಿಕ, ವಾಣಿಜ್ಯ ಕೇಂದ್ರ ಕಡಗಂಚಿ: ಮುಡುಬಿ ಗುಂಡೇರಾವ

ಕಲಬುರಗಿ: ಕುಂತಲ ನಾಡಿನ ಪ್ರಮುಖ ಧಾರ್ಮಿಕ, ಆಧ್ಯಾತ್ಮಿಕ, ವಾಣಿಜ್ಯ ಕೇಂದ್ರವಾಗಿ ಕಡಗಂಚಿ ಗ್ರಾಮವು ಇತಿಹಾಸದಲ್ಲಿ ರಾರಾಜಿಸಿದೆ. ಇಲ್ಲಿನ ಶಾಸನ-ಸ್ಮಾರಕಗಳು ನಾಡಿನ ಇತಿಹಾಸವನ್ನು ಸಾರುತ್ತವೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ಆಳಂದ ತಾಲೂಕಿನ ಕಡಗಂಚಿಯ ಬಕ್ಕೇಶ್ವರ ದೇವಾಲಯದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-37ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕಡಗಂಚಿಯ ಕ್ರಿ.ಶ 1118ರ ಮತ್ತು 12ನೇ ಶತಮಾನದ ಶಾಸನಗಳ ಪ್ರಕಾರ, ಮಲ್ಲಿಕಾರ್ಜುನ ದೇವಾಲಯಕ್ಕೆ ಕಲ್ಯಾಣ […]

Continue Reading

ನಿಜಶರಣ ಅಂಬಿಗರ ಚೌಡಯ್ಯನವರ ಬಗ್ಗೆ ನಾಯಕ ಸಮುದಾಯದವರ ಅವಹೇಳನಕಾರಿ ಮಾತು ಖಂಡನೀಯ

ಚಿತ್ತಾಪುರ: ಕೋಲಿ ಸಮಾಜದ ಗುರು ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಬಗ್ಗೆ ನಾಯಕ ಸಮುದಾಯದವರು ಅವಹೇಳನಕಾರಿ ಮಾತನಾಡಿರುವುದು ತಾಲೂಕು ಕೋಲಿ ಸಮಾಜ ಖಂಡಿಸುತ್ತದೆ ಎಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ಮತ್ತು ಗೌರವಾಧ್ಯಕ್ಷ ರಾಮಲಿಂಗ ಬಾನರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೌಡಯ್ಯನವರ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಬಗ್ಗೆ ದಾಖಲಾಗಿರುವ ಪ್ರಕರಣದಡಿ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಮತ್ತು ರಾಜ್ಯದಿಂದ ಗಡಿಪಾರು‌ ಮಾಡಬೇಕು ಎಂದು ಕೋಲಿ ಸಮಾಜ ಒತ್ತಾಯಿಸುತ್ತದೆ ಎಂದರು. ಈ ಘಟನೆಯನ್ನು ಖಂಡಿಸಿ ಮತ್ತು […]

Continue Reading

ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರಿಗೆ ರಾಷ್ಟ್ರಪತಿ ಪದಕ

ಕಲಬುರಗಿ: ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರಿಗೆ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪ್ರದಾನ ಮಾಡಿದರು.‌ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕರ್ನಾಟಕ ರಾಜ್ಯ ಗೃಹ ಇಲಾಖೆಯಲ್ಲಿ ವಿಶಿಷ್ಟ ಹಾಗೂ ಅಗ್ರಗಣ್ಯ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಗೌರವಾನ್ವಿತ ರಾಜ್ಯಪಾಲರಿಂದ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಶ್ಲಾಘನೀಯ ಸೇವಾ ಪದಕ ಸಮಾರಂಭದಲ್ಲಿ ಪ್ರಾಮಾಣಿಕ ಮತ್ತು ದಕ್ಷತೆಯಿಂದ […]

Continue Reading