ಕಲಬುರಗಿ: ದುಪ್ಪಟ್ಟು ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಅಧಿಕಾರಿಗಳು ದಾಳಿ

ಕಲಬುರಗಿ: ರಾಜ್ಯದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಬಿತ್ತನೆ ಕಾರ್ಯ ಜೋರಾಗಿದೆ. ಇದನ್ನು ಬಂಡವಾಳ ಮಾಡಿಕೊಂಡು ಕಲಬುರಗಿ ಜಿಲ್ಲೆಯ ರೈತರಿಂದ ದುಪ್ಪಟ್ಟು ಹಣ ಪಡೆದು ರಸಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾದ ಹಿನ್ನೆಲೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡಲಾಗಿದೆ. ಅದನ್ನೆ ಬಂಡವಾಳ ಮಾಡಿಕೊಂಡಿರುವ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ರೇವಣಸಿದ್ದೇಶ್ವರ ಅಗ್ರೋ ಏಜೆನ್ಸಿ ಗೊಬ್ಬರ […]

Continue Reading

8 ಕೋಟಿ ಮೌಲ್ಯದ ಐಷಾರಾಮಿ ಹಡಗು: ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷದಲ್ಲಿ ಮುಳುಗಡೆ

ಟರ್ಕಿ: ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲವೇ ಕ್ಷಣದಲ್ಲಿ 1 ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿಗೂ ಅಧಿಕ ಮೌಲ್ಯದ ಐಷಾರಾಮಿ ವಿಹಾರಿ ಹಡಗೊಂದು ಮುಳುಗಿದ ಆಘಾತಕಾರಿ ಘಟನೆ ಟರ್ಕಿಯಲ್ಲಿ ನಡೆದಿದೆ. ಡೋಲ್ಸ್ ವೆಂಟೊ ಹೆಸರಿನ ಈ ವಿಹಾರಿ ನೌಕೆಯು ಸರಿಸುಮಾರು 85 ಅಡಿ ಉದ್ದವಿತ್ತು. ಮಂಗಳವಾರ ಉತ್ತರ ಟರ್ಕಿಯ ಎರೆಗ್ಲಿ ಜಿಲ್ಲೆಯ ಜೊಂಗುಲ್ಡಕ್ ಕರಾವಳಿಯಲ್ಲಿ ಚೊಚ್ಚಲ ಪ್ರಯಾಣ ಆರಂಭಿಸಿದ 15 ನಿಮಿಷದಲ್ಲೇ ಮುಳುಗಡೆಯಾಗಿದೆ. ಹಡಗಿನಲ್ಲಿದ್ದ ಹಡಗಿನ ಮಾಲೀಕ ಹಡಗು ಮುಳುಗುತ್ತಿದ್ದಂತೆ ನದಿಗೆ ಹಾರಿ ದಡ ಸೇರಲು […]

Continue Reading

ವರ್ಷದ ಕೊನೆಯ ಖಗ್ರಾಸ ಚಂದ್ರಗ್ರಹಣ: ಶುರು-ಅಂತ್ಯ ಯಾವಾಗ ? ಸೂತಕ ಸಮಯ ಸೇರಿದಂತೆ 5 ವಿಶೇಷ ಸಂಗತಿ

ಹಿಂದೂ ಧರ್ಮದಲ್ಲಿ ಚಂದ್ರಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಖಗೋಳ ಘಟನೆಯಾಗಿದ್ದು, ಇದು ಧಾರ್ಮಿಕ ಮಹತ್ವವನ್ನು ಸಹ ಹೊಂದಿದೆ. ಭಾದ್ರಪದ ಪೂರ್ಣಿಮೆ ಸೆಪ್ಟೆಂಬರ್ 7ರಂದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಲಿದೆ. ಈ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುವುದರಿಂದ ಇದನ್ನು ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಈ ಚಂದ್ರಗ್ರಹಣವು ಭಾರತದಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ. ಭಾರತದಲ್ಲಿ ಗೋಚರಿಸುವುದರಿಂದ, ಅದರ ಸೂತಕ ಅವಧಿಯು ಸಹ ಮುಖ್ಯವಾಗುತ್ತದೆ. ಸೂತಕ ಅವಧಿಯಲ್ಲಿ, ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಆ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು […]

Continue Reading

ಸರ್ಕಾರಿ ಆಸ್ಪತ್ರೆ NICU ನಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು: ಇಬ್ಬರು ನರ್ಸ್‌ಗಳ ಅಮಾನತು

ಇಂದೋರ್: ಇಂದೋರ್‌ನ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆಯೊಂದರಲ್ಲಿ, ನವಜಾತ ಶಿಶುಗಳ ತೀವ್ರ ನಿಗಾ ಘಟಕದ ಒಳಗಿದ್ದ ಎರಡು ನವಜಾತ ಶಿಶುಗಳನ್ನು ಇಲಿಗಳು ಕಚ್ಚಿವೆ. ವಾರಾಂತ್ಯದಲ್ಲಿ ಇಲಿಗಳು ಕಚ್ಚಿದ್ದು, ಒಂದು ಶಿಶು ಮಂಗಳವಾರ ಸಾವಿಗೀಡಾಗಿದೆ. ಆದಾಗ್ಯೂ, ಆಸ್ಪತ್ರೆ ಅಧಿಕಾರಿಗಳು ಸಾವಿಗೆ ಕಾರಣ ಇಲಿ ಕಡಿತವಲ್ಲ, ಆಕೆಯ ಗಂಭೀರ ವೈದ್ಯಕೀಯ ಸ್ಥಿತಿ ಎಂದು ಹೇಳಿದ್ದಾರೆ. ಮಹಾರಾಜ ಯಶವಂತರಾವ್ ಆಸ್ಪತ್ರೆಯ NICU ಒಳಗೆ ರವಿವಾರ ಮತ್ತು ಸೋಮವಾರ ಸತತವಾಗಿ ಇಲಿಗಳು ಕಚ್ಚಿರುವ ಘಟನೆ ನಡೆದಿವೆ. ಹುಟ್ಟಿ ಮೂರ್ನಾಲ್ಕು ದಿನಗಳಷ್ಟೇ […]

Continue Reading

ಸೆ.22 ರಿಂದ ಜಿಎಸ್‌ಟಿಯಲ್ಲಿ 2‌ ಸ್ಲ್ಯಾಬ್ ಜಾರಿ, ಯಾವ ವಸ್ತುಗಳ ಬೆಲೆ ಇಳಿಕೆ ? ಯಾವುದು ಏರಿಕೆ ?

ನವದೆಹಲಿ: ಜಿಎಸ್‌ಟಿ ಕೌನ್ಸಿಲ್‌ ಸಿಹಿಸುದ್ದಿ ನೀಡಿದೆ, 8 ವರ್ಷದ ಬಳಿಕ ಜಿಎಸ್‌ಟಿ ಸ್ಲ್ಯಾಬ್‌ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ. ಇನ್ನುಮುಂದೆ ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್‌ ಇರಲಿದೆ ಸೆ.22 ರಿಂದ ನೂತನ ದರಗಳು ಅನ್ವಯವಾಗಲಿದೆ. ನಾಲ್ಕು ಸ್ಲ್ಯಾಬ್ ಬದಲಿಗೆ 5%, 18% ಸ್ಲ್ಯಾಬ್’ಗೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿದೆ. ಎರಡರ ಜೊತೆಗೆ ಐಷರಾಮಿ ವಸ್ತುಗಳಿಗೆ 40% ಜಿಎಸ್‌ಟಿಯ ಸ್ಲ್ಯಾಬ್ ಅನ್ವಯವಾಗಲಿದೆ. ದೆಹಲಿಯಲ್ಲಿ ಎರಡು ದಿನಗಳ ಕಾಲ ಜಿಎಸ್‌ಟಿ ಕೌನ್ಸಿಲ್‌ ಸಭೆ ನಡೆಯುತ್ತಿದ್ದು ಮೊದಲ ದಿನದ ಸಭೆಯ ಬಳಿಕ ಬುಧವಾರ ರಾತ್ರಿ […]

Continue Reading

11 ಐಎಎಸ್‌ ಅಧಿಕಾರಿಗಳನ್ನು ಪ್ರಭಾರ ಹುದ್ದೆಗೆ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರವು 11 ಐಎಎಸ್‌ ಅಧಿಕಾರಿಗಳಿಗೆ ಹಾಲಿ ಇರುವ ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ ಪ್ರಭಾರ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದೆ. ಮೋಹನರಾಜ್‌ ಕೆ.ಪಿ – ವ್ಯವಸ್ಥಾಪಕ ನಿರ್ದೇಶಕರು, ಕೃಷ್ಣಾ ಜಲ ಭಾಗ್ಯ ನಿಗಮ ಇವರಿಗೆ ಆಯುಕ್ತರು, ಕೃಷ್ಠಾ ಮೆಲ್ದಂಡೆ ಯೋಜನೆಯ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್‌ ನಿರ್ಮಾಣ. ಶಿವನಗೌಡ ಪಾಟೀಲ – ಆಯುಕ್ತರು, ಕೃಷಿ ಇಲಾಖೆ ಇವರಿಗೆ ತೋಟಗಾರಿಕೆ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನ ನಿರ್ದೇಶಕ. ಡಾ.ಗೋಪಾಲ ಕೃಷ್ಣ ಎಚ್‌.ಎನ್‌ – ಆಯುಕ್ತರು, ಕಾರ್ಮಿಕ […]

Continue Reading

ಶ್ವಾನಕ್ಕೆ ಮಾಡಿಸಿದ ಆಧಾರ್ ಕಾರ್ಡ್ ಹಿಂದಿದೆ ಮನಕಲುಕುವ ಕತೆ: ತಪ್ಪಿತಸ್ಥರ ವಿರುದ್ಧ ತನಿಖೆಗೆ ಆದೇಶಿಸಿದ ಡಿಸಿ

ಭೋಪಾಲ್: ನಾಯಿಗೆ ಆಧಾರ್‌ಕಾರ್ಡ್‌ ಮಾಡಿಸಿದ ಸ್ಟೋರಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಆದರೆ ಇದರ ಸತ್ಯಾಸತ್ಯತೆ ಹುಡುಕಲು ಹೊರಟ ಅಂಗ್ಲ ಮಾಧ್ಯಮವೊಂದು ಇದರ ಹಿಂದಿನ ರಿಯಲ್ ಕತೆ ಏನು ಎಂಬುದನ್ನು ಬಹಿರಂಗಪಡಿಸಿದೆ. ಕೆಲ ದಿನಗಳ ಹಿಂದೆ ಶ್ವಾನಕ್ಕೆ ಆಧಾರ್‌ ಕಾರ್ಡ್ ಮಾಡಿಸಲಾಗಿದೆ ಎಂಬ ವಿಚಾರದ ಜೊತೆ ನಾಯಿಯ ಫೋಟೋ ಇರುವ ಆಧಾರ್‌ಕಾರ್ಡ್‌ನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಈ ಆಧಾರ್‌ […]

Continue Reading

ಅತಿವೃಷ್ಟಿಯಿಂದ ಬೆಳೆಹಾನಿಯಾದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ

ಕಲಬುರಗಿ: ಸತತವಾಗಿ ಸುರಿದ ಮಳೆಯಿಂದ ಬೆಳೆ ಹಾನಿಯಾಗಿರುವ ಶಹಾಬಾದ ಮತ್ತು ಚಿತ್ತಾಪುರ ತಾಲೂಕಿನ ನಾನಾ ಗ್ರಾಮಗಳ ಜಮೀನುಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಭೇಟಿ ನೀಡಿ ಪರಿಶೀಲಿಸಿದರು. ಚಿತ್ತಾಪುರ ತಾಲೂಕಿನ ವಾಡಿ ಮತ್ತು ಹಲಕಟ್ಟಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಅತಿವೃಷ್ಟಿಯಿಂದ ತೊಗರಿ, ಹೆಸರು, ಹತ್ತಿ ಬೆಳೆ ಹಾನಿಯಾಗಿರುವದು ಪರಿಶೀಲಿಸಿದರು. ಶಹಾಬಾದ ತಾಲೂಕಿನ ರಾವೂರ ಮತ್ತು ಮಾಲಗತ್ತಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ತೊಗರಿ, ಹೆಸರು, ಉದ್ದು ಬೆಳೆ ಹಾನಿಯಾಗಿರುವದು ಪರಿಶೀಲಿಸಿದರು. ಚಿತ್ತಾಪುರ ಮತ್ತು ಶಹಾಬಾದ ತಾಲೂಕಿನಲ್ಲಿ ಅತಿವೃಷ್ಟಿಯಿಂದ […]

Continue Reading

12.5 ಕೋಟಿ ರೂ.ಗೆ ಮನೆ ಮಾರಾಟ ಮಾಡಿ ಐಷಾರಾಮಿ ಕಾರು ಖರೀದಿಸಿದ ನಟಿ ಹೇಮಾ ಮಾಲಿನಿ

ಮುಂಬೈ: ಬಾಲಿವುಡ್ ಡ್ರೀಮ್ ಗರ್ಲ್ ಎಂದು ಗುರುತಿಸಿಕೊಂಡಿರುವ ನಟಿ, ಸಂಸದೆ ಹೇಮಾ ಮಾಲಿನಿ ಹೊಸ ಕಾರು ಖರೀದಿಸಿದ್ದಾರೆ. ಇದರಲ್ಲೇನು ವಿಶೇಷ ಅಂತಿರಾ ? ಇಲ್ಲೆ ಇರೋದು ನೋಡಿ. ಇತ್ತೀಚೆಗಷ್ಟೇ ಹೇಮಾ ಮಾಲಿನಿ ಮುಂಬೈನಲ್ಲಿರುವ ಎರಡು ಮನೆಯನ್ನು ಮಾರಾಟ ಮಾಡಿದ್ದರು. 12.5 ಕೋಟಿ ರೂ.ಗೆ ಮನೆ ಮಾರಾಟ ಮಾಡಿದ ಬೆನ್ನಲ್ಲೆ ಹೇಮಾ ಮಾಲಿನಿ ಐಷಾರಾಮಿ ಕಾರು ಖರೀದಿಸಿದ್ದಾರೆ. ಹೊಸ ಕಾರು ಖರೀದಿಸಿದ ಹೇಮಾ ಮಾಲಿನಿ ಸ್ವತಃ ಪೂಜೆ ಮಾಡಿ ಡ್ರೀಮ್ ಕಾರನ್ನು ಡ್ರೀಮ್ ಗರ್ಲ್ಟ್ ಡ್ರೈವ್ ಮಾಡಿದ್ದಾರೆ. ಈ […]

Continue Reading

ಮಾನವನ ದೇಹಕ್ಕೆ ಎಳೆನೀರು ಸಂಜೀವಿನಿಯಂತೆ

ಕಲಬುರಗಿ: ಮಾನವನ ದೇಹದ ಬೆಳವಣಿಗೆಗೆ ಗಾಳಿ, ನೀರು, ಆಹಾರ ಅತ್ಯವಶ್ಯಕ. ದೇಹಕ್ಕೆ ಬರುವ ರೋಗಗಳಲ್ಲಿ ಆಹಾರ ಸಂಬಂಧಿತ ಕಾಯಿಲೆಗಳು ಪ್ರಮುಖ. ವ್ಯಕ್ತಿ ಯಾವುದೆ ಕಾಯಿಲೆಗೆ ತುತ್ತಾದಾಗ ಆಹಾರ, ನೀರು ಸೇವನೆ ಅಸಾಧ್ಯವಾದಾಗ ಎಳೆನೀರು ಸೇವಿಸಿದರೆ ನೈಸರ್ಗಿಕ ಗ್ಲೂಕೋಸ್ ದೊರೆಯುತ್ತದೆ. ಇದು ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ ‘ವಿಶ್ವ ತೆಂಗು ದಿನಾಚರಣೆ’ಯಲ್ಲಿ ತೆಂಗಿನ ಗಿಡ […]

Continue Reading