ಅರಳಿ ಮರ ಆಕ್ಸಿಜನ್, ಆರೋಗ್ಯದ ಆಗರ 

ಜಿಲ್ಲೆ

ಕಲಬುರಗಿ: ಕೆಲವು ಜಾತಿಯ ಮರಗಳ ಎಲೆ, ಬೇರು ಮತ್ತು ತೊಗಟೆಯ ಕಷಾಯವನ್ನು ಭೇದಿ, ವಾಂತಿ, ಹಲ್ಲುನೋವು, ದಮ್ಮು ಇತ್ಯಾದಿ ರೋಗಗಳಿಗೆ ಉಪಯೋಗಿಸುತ್ತಾರೆ. ಇದು ಆಕ್ಸಿಜನ್, ಆರೋಗ್ಯದ ಆಗರವಾಗಿದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಸಂತೋಷ ಕಾಲೋನಿಯ ದಕ್ಷಿಣಮುಖಿ ಅಂಜನೇಯ ದೇವಸ್ಥಾನದ ಆವರಣದ ಅರಳಿ ಮರದ ಕಟ್ಟೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ಅರಳಿ ಮರದ ಮಹತ್ವದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಳಿ ಮರದ ಎಲೆಯನ್ನು ದನ-ಕರು, ಆಡು, ಕುರಿಗಳಿಗೆ ಮೇವಾಗಿ ಬಳಸುತ್ತಾರೆ. ಇವುಗಳ ಹಾಲಿನಲ್ಲಿರುವ ಜಿಗುಟಾದ ದ್ರವದಿಂದ ರಬ್ಬರನ್ನು ಮಾಡಬಹುದು. ಅರಳಿಮರವನ್ನು ಸೌದೆಯಾಗಿ ಉಪಯೋಗಿಸುತ್ತಾರೆ ಎಂದರು.

 ಪುರಾತನ ಕಾಲದಿಂದಲೂ  ಜನರು ಅರಳಿ ಮರವನ್ನು ಪೂಜಿಸುವದು ಹಾಗೂ  ಪ್ರದಕ್ಷಿಣೆ ಹಾಕುತ್ತಿರುವದು ಕಂಡುಬರುತ್ತದೆ.  ಇದು ಕೇವಲ ಸಂಪ್ರದಾಯವಾಗಿರದೆ, ಆಮ್ಲಜನಕವನ್ನು  ಹೆಚ್ಚಾಗಿ ಹೊರಹಾಕುವ ಮರಗಳಲ್ಲಿ ಅಶ್ವತ್ಥ ವೃಕ್ಷ ಕೂಡ ಒಂದು. ಹಾಗೆಯೇ ಔಷಧೀಯ ದೃಷ್ಟಿಕೋನದಿಂದ ಅರಳಿ ಮರ ಅತ್ಯಂತ ಉಪಯುಕ್ತವಾಗಿದೆ ಎಂದರು. 

 ಅರಳಿ ಮರದ ಎಲೆಗಳು ಮತ್ತು ಅದರ ತೊಗಟೆ, ರೆಂಬೆ ಸೇರಿದಂತೆ ಎಲ್ಲಾ ಭಾಗಗಳನ್ನು ಬಳಸಿ ಅನೇಕ ರೋಗಗಳನ್ನು ತಡೆಗಟ್ಟಬಹುದು. ಅಸ್ತಮಾ ಸಮಸ್ಯೆ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಅದಕ್ಕೆ ಪರಿಹಾರ ಹಾಗೂ ಉಸಿರಾಟದ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ. ಅರಳಿ ಮರದ ತೊಗಟೆ ತಂದು ಒಣಗಿಸಿ ಅದರ ಒಳ ಭಾಗವನ್ನು ಪುಡಿ ಮಾಡಿ ನೀರಿನೊಂದಿಗೆ ಸೇವಿಸಬೇಕು. ನಿಯಮಿತವಾಗಿ ಸೇವನೆ ಮಾಡುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಅಷ್ಟೆ ಅಲ್ಲದೆ ಅರಳಿ ಮರದ ಎಲೆ ಹಾಲಿನಲ್ಲಿ ಕುದಿಸಿ ಕುಡಿಯಬಹುದು. ಇದರಿಂದ ಅಸ್ತಮಾ ಸಮಸ್ಯೆ ನಿವಾರಣೆಯಾಗುತ್ತದೆ. ಎಲೆಗಳ ಚಿಗುರನ್ನು ಜಗಿಯುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿವಯೋಗೆಪ್ಪಾ ಎಸ್ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *