ಯಾದಗಿರಿ: ಹಣ ಎಗರಿಸಲು ಮೈ ತುಂಬ ಸೀರೆ ಧರಿಸಿದ
ಪುರುಷರು, ನರೇಗಾ ಕೂಲಿ ಕೆಲಸಕ್ಕೆ ಮುಂದಾಗಿದ್ದಾರೆ.
ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದಲ್ಲಿ
ಇಂತಹದೊಂದು ಘಟನೆ ನಡೆದಿದೆ.
ಮಲ್ಹಾರ ಗ್ರಾಮದಲ್ಲಿಯೇ ಕೂಲಿ ಕಾರ್ಮಿಕರ ಹೆಸರಿನಲ್ಲಿ
ಗೊಲ್ಮಾಲ್ ಮಾಡುವ ಹುನ್ನಾರ ಕೆಲ ಪುರುಷರು
ಅಧಿಕಾರಿಗಳ ಕುಮ್ಮಕ್ಕಿನಿಂದ ಸೀರೆ ಧರಿಸಿ ಕೂಲಿಗೆ
ದುಡಿಯಲು ಮುಂದಾಗಿದ್ದಾರೆ.
ಪೂಜಾರಿ ಎಂಬಾತನ ಹೊಲದ ಬಳಿ ನಾಲೆ ಹೂಳೆತ್ತುವ
ಕಾಮಗಾರಿಯಲ್ಲಿ ನಕಲಿ ಪೋಟೋ NMMS ಮಾಡಿ
ಬಿಲ್ ಎತ್ತುವ ಸಂಚು ರೂಪಿತವಾಗಿದೆ.
ಕಾರ್ಮಿಕರ ಕೆಲಸದ ಹಾಜರಾತಿ ಪೊಟೋ ಅಪ್ಲೋಡ್
ಮಾಡಬೇಕಾದ ಅಧಿಕಾರಿಗಳು ಆದರೆ ಮಹಿಳೆಯರ
ಹೆಸರಿನಲ್ಲಿ ಕೆಲಸ ಮಾಡದೇ ಪುರುಷರು ಸೀರೆ ಧರಿಸಿ ಹಣ
ಕೊಳ್ಳೆ ಹೊಡೆಯುವ ಪ್ಲಾನ್ ಮಾಡಿರುವುದು ನಿಜಕ್ಕೂ
ದುಡಿಯುವ ವರ್ಗಕ್ಕೆ ಮೋಸ ಮಾಡಿದ ರೀತಿಯಲ್ಲಿ
ಎಂದು ಮಲ್ಹಾರ ಭಾಗದ ಮಹಿಳೆ ಕೂಲಿಕಾರರು
ಹೇಳಿದ್ದಾರೆ.
ಪಂಚಾಯತ್ ಇಲಾಖೆ ಬಿಎಫ್’ಟಿ ಅಧಿಕಾರಿ ವಿರೇಶ
ಎಂಬಾತನಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.