ವಿಚಕ್ಷಣ ದಳದ ದಾಳಿಗೆ ಹೆದರಿ ಕಿಟಕಿಯಿಂದ ನೋಟುಗಳ ಬಂಡಲ್ ಎಸೆದ ಇಂಜಿನಿಯರ್: 2.1 ಕೋಟಿ ಜಪ್ತಿ
ಭುವನೇಶ್ವರ: ನಿನ್ನೆಯಷ್ಟೇ ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ವಿಚಕ್ಷಣ ದಳದ ದಾಳಿಗೆ ಹೆದರಿ ಸಿಕ್ಕಿ ಬೀಳುವ ಭಯದಲ್ಲಿ ವಿಲೇಜ್ ಅಕೌಂಟೆಂಟ್ ಒಬ್ಬರು ತಾವು ಪಡೆದ ಲಂಚದ ಹಣವನ್ನು ನುಂಗಿದಂತಹ ಘಟನೆ ನಡೆದ ಬಗ್ಗೆ ವರದಿಯಾಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ಒಡಿಶಾದಲ್ಲಿ ಇದೆ ರೀತಿಯ ಘಟನೆಯೊಂದು ನಡೆದಿದೆ. ಮನೆ ವಿಚಕ್ಷಣ ದಳದ ದಾಳಿ ನಡೆಯುವುದು ತಿಳಿಯುತ್ತಿದ್ದಂತೆ ಸರ್ಕಾರಿ ಅಧಿಕಾರಿಯೊಬ್ಬ ತಮ್ಮ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ನೋಟುಗಳನ್ನು ಕಿಟಿಕಿಯ ಮೂಲಕ ಹೊರಗೆ ಎಸೆದಂತಹ ಘಟನೆ ನಡೆದಿದೆ. ಈತನ ಬಳಿಯಿಂದ 2.1 […]
Continue Reading