ಚಿತ್ತಾಪುರ: ಗುಂಡಗುರ್ತಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭನ್ವರ್ಸಿಂಗ್ ಮೀನಾ ಅವರು ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದರು.
ತಾಲೂಕಿನ ಗುಂಡಗುರ್ತಿ ಪ್ರೌಢ ಶಾಲೆಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಭೇಟಿ ನೀಡಿ ಶಾಲೆಯ ಕೋಣೆಗಳು, ಆವರಣವನ್ನು ವಿಕ್ಷಿಸಿದರು, ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ, ಗ್ರಾ.ಪಂ ಅಧ್ಯಕ್ಷೆ ಸಂಪೂರ್ಣ ಬಣ್ಣಕ್ಕಿ, ಪಿಡಿಒ, ಗ್ರಾ.ಪಂ ಸದಸ್ಯ ಬಸವರಾಜ ಹಾಳಕಾಯಿ, ಸುನೀಲ್ ಅಮ್ಮಗೊಳ, ಇಸ್ಮಾಯಿಲ್ ನಿಗೇವಾನ್, ಆಸೀಫ್ ಇದ್ದರು.