ಕಲಬುರಗಿ: ನಗರ ಪೊಲೀಸ್ ಆಯುಕ್ತರಾಗಿ 2009 ಬ್ಯಾಚಿನ ಐಪಿಎಸ್ ಅಧಿಕಾರಿ ಡಾ. ಎಸ್.ಡಿ ಶರಣಪ್ಪ ಅವರನ್ನು ನೇಮಕಗೊಳಿಸಿ ಸರ್ಕಾರ ಅದೇಶ ಹೊರಡಿಸಿದೆ. ಇದರಿಂದ ಕಳೆದೊಂದು ತಿಂಗಳಿನಿಂದ ಖಾಲಿ ಇದ್ದ ಹುದ್ದೆಗೆ ಖಡಕ್ ಅಧಿಕಾರಿ ನಿಯೋಜನೆಗೊಂಡಂತಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದವರು. ಇದೇ ಮೊದಲ ಬಾರಿಗೆ ಅವರು ತವರು ಜಿಲ್ಲೆಯಲ್ಲಿ ಸೇವೆಗೆ ನಿಯೋಜನೆಗೊಂಡಿದ್ದಾರೆ. ಅಲ್ಲದೆ ಜಿಲ್ಲೆಯವರೇ ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ಮೊದಲಿಗರು ಎಂಬ ಹೆಗ್ಗಳಿಕೆ ಅವರದಾಗಿದೆ.
ಈ ಹಿಂದೆ ರೈಲ್ವೆ ವಿಭಾಗದ ಡಿಐಜಿಯಾಗಿ, ಬೆಂಗಳೂರಿನಲ್ಲಿ
ದಕ್ಷಿಣ ವಿಭಾಗ, ಪೂರ್ವ ವಿಭಾಗ ಹಾಗೂ ಸಿಸಿಬಿ ಕೈಂ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.