ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುವ ಟೆಂಗಳಿ ಸ್ಮಾರಕಗಳು: ಮುಡಬಿ ಗುಂಡೆರಾವ

ಸುದ್ದಿ ಸಂಗ್ರಹ

ಕಾಳಗಿ: ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುವ ಟೆಂಗಳಿ ಸ್ಮಾರಕಗಳ ಕೊಡುಗೆ ಅಪಾರ. ನಾಡು, ನುಡಿ ಸಂಸ್ಕ್ರತಿ ಪರಿಚಯಿಸುವ ಕೆಲಸವಾಗಬೇಕು ಎಂದು ಸಂಶೋಧಕ ಸಾಹಿತಿ ಮುಡಬಿ ಗುಂಡೇರಾವ ಹೇಳಿದರು.

ತಾಲೂಕಿನ ಟೆಂಗಳಿ ಗ್ರಾಮದ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮೂರು ನಮಗೆ ಮೇಲು ವಿಶೇಷ ಉಪನ್ಯಾಸ ಕಾರ್ಯಕ್ರಮಲ್ಲಿ ಸಂಶೋಧಕ ಸಾಹಿತಿ ಮುಡಬಿ ಗುಂಡೇರಾವ ಮಾತನಾಡಿ, ತೆಂಗಳಿಯ ಶಾಸನಗಳು, ದೇವಾಲಯಗಳು, ವೀರಗಲ್ಲು ಸ್ಮಾರಕಗಳು, ಪ್ರಾಚೀನ ಕನ್ನಡಿಗರ ಆಡಳಿತ, ಶಿಕ್ಷಣ, ಧರ್ಮ, ಆಧ್ಯಾತ್ಮ, ಸಮಾಜ ,ಆರ್ಥಿಕ ಸೇರಿದಂತೆ ಮುಂತಾದ ವಿವಿಧ ಕ್ಷೇತ್ರಗಳ ಸಾಧನೆಗಳು ತೆರೆಯುವದು ಅಪಾರ ಎಂದರು.

ತೆಂಗಳಿ ಒಂದು ಕಾಲಕ್ಕೆ 70 ಹಳ್ಳಿಗಳಿಗೆ ರಾಜಧಾನಿಯಾಗಿತ್ತು. ಇಲ್ಲಿನ ಈಶ್ವರ ದೇವಾಲಯ ಶಿಕ್ಷಣ ನಿಡುವ ಅಗ್ರಹಾರವಾಗಿತ್ತು. ನಾಡಿನ ವಿವಿಧ ಪ್ರದೇಶಗಳಿಂದ ವಿದ್ಯಾರ್ಥಿಗಳು ಕನ್ನಡ ವಿವಿಧ ವಿಷಗಳ ಬಗ್ಗೆ ಕಲಿಯಲು ಆಗಮಿಸುತ್ತಿದ್ದರು. ತೆಂಗಳಿ, ಮಂಗಲಿಗಿ , ಕಾಳಗಿ ,ಮರ್ತೂರ , ಇಂಗಳಿಗಿ , ದಂಡೋತಿ, ಮಾನ್ಯಖೇಡ, ಸನ್ನತಿ ಸೇರಿದಂತೆ ಮುಂತಾದ ಪವಿತ್ರ ತಾಣಗಳು ಪ್ರವಾಸಿ ತಾಣಗಳಾಗುವ ಸರ್ವ ಅರ್ಹತೆಗಳು ಹೊಂದಿವೆ. ಇವುಗಳ ರಕ್ಷಣೆ ಯಾಗಬೇಕು ಹಾಗೂ ಇವುಗಳು ಇತಿಹಾಸ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಬೇಕು ಹಾಗೂ ನಮ್ಮೆಲ್ಲರ ನಡೆ – ನುಡಿ ಸ್ಮಾರಕಗಳ ರಕ್ಷಣೆಯ ಕಡೆಗೆ ಸಾಗಬೇಕು ಎಂದರು.

ಮಂಗಲಗಿ – ತೆಂಗಳಿಯ ಶಾಂತೇಶ್ವರ ಮಠದ ಪೀಠಾಧಿಪತಿ ಡಾ. ಶಾಂತಸೋಮನಾಥ ಶಿವಾಚಾರ್ಯರು ವಿಶೇಷ ಉಪನ್ಯಾಸ ನೀಡಿದ ಅವರು, ಮಕ್ಕಳಿಗೆ ತಾಯಿ ಹಾಲು ಎಷ್ಟು ಶ್ರೇಷ್ಟವೊ ಅಷ್ಟೆ ಕನ್ನಡಿಗರಿಗೆ ಕನ್ನಡ ಭಾಷೆ ಶ್ರೇಷ್ಠವಾಗಿದೆ, ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ಥಿ ಪಡೆದ ಹೆಮ್ಮೆಯ ಭಾಷೆ ನಮ್ಮದು. ಭಾಷೆ ಮತ್ತು ಊರಿನ ಅಭಿಮಾನ ಊಳಿಸಿ ಬೆಳೆಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಸಂತೋಷ ಕುಡಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕಾಳಗಿ ತಾಲುಕಿನ ಕನ್ನಡ ಸಾಹಿತ್ಯ ಪರಂಪರೆ ಬಿಂಬಿಸುವ ಐತಿಹಾಸಿಕ ಸ್ಮಾರಕಗಳ ಸಾಹಿತ್ಯ ರಚಿಸಿ ಪ್ರಕಟಗೊಳಿಸುವ ಉದ್ದೇಶ ಕಾಳಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ ಹೊಂದಿದೆ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಆಶಯ ನುಡಿಗಳನ್ನಾಡಿದ ಅವರು, ಟೆಂಗಳಿ ಗ್ರಾಮದ ಬೆಣ್ಣೆತೋರೆ ಹಳ್ಳದ ತಿಳಿನೀರಿನ ದಡದಲ್ಲಿದ್ದು, ತಂಗಾಳಿ ಹವೆಯಲ್ಲಿ ತಂಪಾದ ವಾತಾವರಣದಲ್ಲಿ ಜೀವಿಸಿ ಬಾಳಿ ಬದುಕಿದ ನಿಸ್ವಾರ್ಥ ರಾಜಕಾರಣಿಗಳು, ಮಿಲಿಟರಿ ಸೇವೆ ಸಲ್ಲಿಸಿದವರು, ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದರು ಸೇರಿದಂತೆ ಸರ್ವರು ನಮಗೆ ಪ್ರೇರಣೆ.‌ ಕಡಲಿ, ತೊಗರಿ, ಜೋಳ ಬೆಳೆಯುವ ನೆಲ ಈಗ ಔಷಧಿ ಬೆಳೆಗಳು ಬೆಳೆಯುತ್ತಿರುವ ನಮ್ಮ ನೆಲ, ಗ್ರಾಮದ ಅನುಕೂಲಕ್ಕಾಗಿ ದೆಹಲಿವರೆಗೆ ಹೋಗಿ ಸವಲತ್ತು ಪಡೆದುಕೊಂಡು ಮುಖ್ಯಮಂತ್ರಿ ಬಂದು ಹೋಗಿರುವ ನೆಲ ಅನೇಕ ಐತಿಹಾಸಿಕ ಪರಂಪರೆ ಬಿಂಬಿಸುವ ಸ್ಮಾರಕಗಳಿರುವ ಇಂತಹ ನೆಲದ ಹಿರಿಮೆ ಗರಿಮೆ ಕುರಿತು ನಮ್ಮೂರು ನಮಗೆ ಮೇಲು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ತೆಂಗಳಿ ಕಸಾಪ ವಲಯ ಘಟಕದ ಅಧ್ಯಕ್ಷ ಭಿಮಾಶಂಕರ ಆಂಕಲಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಜಗದೀಶ ಕೇಶ್ವಾರ, ರಾಜಕುಮಾರ ಪಟೇದ, ಮಹ್ಮದ ಲದಾಫ, ಪ್ರಶಾಂತ ಹಳ್ಳಿ, ವಿಶ್ವನಾಥ ಬಾಳದೆ, ಬಸವರಾಜ, ಶಾಲೆಯ ಮುಖ್ಯಗುರು ಶರಣಬಸಪ್ಪಾ ಮುನ್ನಳ್ಳಿ, ಶಿಕ್ಷಕರಾದ ನಿರ್ಮಲಾ ಮಠಪತಿ, ಬಸಮ್ಮ ಹಲಚೆರಿ, ಭವಾನಿ ಮಠಪತಿ, ಚನ್ನಮ್ಮ ಜಂಬಗಿ, ಸ್ನೇಹಾ ಭಯ್ಯಾರ ಸೇರಿದಂತೆ ಗ್ರಾಮದ ಹಿರಿಯರು, ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *