ನೂತನ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್.ಡಿ ಅವರಿಗೆ ಸತ್ಕಾರ

ಸುದ್ದಿ ಸಂಗ್ರಹ

ಕಲಬುರಗಿ: ನೂತನ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್.ಡಿ ಅವರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸತ್ಕರಿಸಿ, ಶುಭಾಷಯ ಕೋರಲಾಯಿತು.

ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ ಅಭಿನಂದಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದವರಾದ ತಾವು ಕಲಬುರಗಿ ಪೊಲೀಸ್ ಕಮಿಷನರ್ ಆಗಿ ಆಗಮಿಸಿದ್ದು, ನಮ್ಮ ಆಳಂದ ತಾಲೂಕು ಹಾಗೂ ಜಿಲ್ಲೆಯ ಸಮಸ್ತ ಜನತೆಗೆ ತುಂಬಾ ಹರ್ಷವಾಗಿದೆ. ತಮ್ಮ ಅಧಿಕಾರದಲ್ಲಿ ಇಲಾಖೆಯ ಕೀರ್ತಿಯ ಜೊತೆಗೆ ಜಿಲ್ಲೆಯ ಕೀರ್ತಿ ಹೆಚ್ಚಾಗುತ್ತದೆ. ಜಿಲ್ಲೆಯ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳಿಗೆ ತಾವು ಮಾರ್ಗದರ್ಶನ ನೀಡುವ ಮೂಲಕ ನಮ್ಮ ಜಿಲ್ಲೆಯಿಂದ ಐಎಎಸ್, ಐಪಿಎಸ್ ಅಧಿಕಾರಿಗಳು ಹೊರಹೊಮ್ಮಲಿ. ಅದಕ್ಕೆ ನಮ್ಮ ಬಳಗ ವೇದಿಕೆ ಒದಗಿಸಿಕೊಡುತ್ತದೆ ಎಂದರು.

ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಸಹಾಯಕ ಪಿಎಫ್ ಅದಿಕಾರಿ ಬಸವರಾಜ ಹೆಳವರ ಯಾಳಗಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *