ಚಿತ್ತಾಪುರ: ಹಜರತ್ ಸೈಯದ್ ಪೀರ್ ದರ್ಗಾ ಧ್ವಂಸಗೊಳಿಸಿದ ಕಿಡಿಗೇಡಿಗಳು

ಚಿತ್ತಾಪುರ: ತಾಲೂಕಿನ ಕರದಾಳ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಹಜರತ್ ಸೈಯದ್ ಪೀರ್ ದರ್ಗಾವನ್ನು ಕಡಿಗೆಡಿಗಳು ಧ್ವಂಸಗೊಳಿಸಿದ್ದಾರೆ‌. ಹಜರತ್ ಸೈಯದ್ ಪೀರ್ ದರ್ಗಾದಲ್ಲಿನ ಮಜಾ‌ರ್ (ಸಮಾಧಿ) ಕಿತ್ತು ಹಾಕಿದ ಕಿಡಿಗೇಡಿಗಳು, ಸುತ್ತಲೂ ಕಟ್ಟಿದ ತಡೆಗೋಡೆಯ ಕಲ್ಲುಗಳನ್ನು ನೆಲಕ್ಕುರುಳಿಸಿದ್ದಾರೆ. ಬುಧವಾರ ರಾತ್ರಿ ಈ ಕೃತ್ಯ ನಡೆದಿದೆ, ಗುರುವಾರ ಬೆಳಿಗ್ಗೆಯಿಂದ ನೂರಾರು ಜನರು ದರ್ಗಾಗೆ ಭೇಟಿ ನೀಡಿ , ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬದಿಯಲ್ಲಿದ್ದ ಹಜರತ್ ಸೈಯದ್ ಪೀರ್ ದರ್ಗಾ ಕಟ್ಟಡಕ್ಕೆ ಹಾನಿ ಮಾಡಿದ ಕಿಡಿಗೇಡಿಗಳು, ದರ್ಗಾ ಮುಂಭಾಗದ ಹೊಲದಲ್ಲಿ […]

Continue Reading

ಸೇಡಂ ದಸರಾ ಉತ್ಸವದಲ್ಲಿ ಇಂದು ನಟಿ ಸಿತಾರಾ

ಸೇಡಂ: ಇಲ್ಲಿಯ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ 43ನೇ ವರ್ಷದ ದಸರಾ ಉತ್ಸವದಲ್ಲಿ ಅ. 10 ರಂದು ಗುರುವಾರ ಸಂಜೆ 7 ಕ್ಕೆ ಕಿರುತೆರೆ ಹಾಗೂ ಸಿನಿಮಾ ನಟಿ ಸಿತಾರಾ ಭಾಗವಹಿಸುವರು ಎಂದು ದೇವಾಲಯ ಕಮಿಟಿಯ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ಹಳೆ ಬಜಾರದಲ್ಲಿರುವ ಐತಿಹಾಸಿಕ ಚಾಲುಕ್ಯ ಕಾಲದ ದೇವಾಲಯದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಪ್ರತಿಭಾನ್ವಿತ ನಟಿ ಸಿತಾರಾ ಅವರನ್ನು ಸತ್ಕರಿಸಲಾಗುವದು. 2005 ರಲ್ಲಿ ವಿಶ್ವವಿಖ್ಯಾತ ಹೆಗ್ಗೋಡಿನ ನೀನಾಸಂನಲ್ಲಿ ರಂಗ ತರಬೇತಿಯಾಗಿದ್ದು, 2011 […]

Continue Reading

ಹೆಬ್ಬಾಳ ಪ್ರೌಢಶಾಲೆಗೆ ಮಾಜಿ ಶಾಸಕ ವಿಶ್ವನಾಥ ಪಾಟೀಲ ಭೇಟಿ

ಕಾಳಗಿ: ತಾಲೂಕಿನ ಹೆಬ್ಬಾಳ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು ಭೇಟಿ ನೀಡಿದರು. ಶಾಲೆಗೆ ಭೇಟಿ ನೀಡಿ ಶಾಲೆಯ ಕಾರ್ಯವೈಖರಿ ಪ್ರಶಂಸೆ ಮಾಡಿದರು. ಅಕ್ಷರದಾಸೋಹ ಕಾರ್ಯಕ್ರಮ ವೀಕ್ಷಿಸುವ ಮೂಲಕ ವಿಧ್ಯಾರ್ಥಿಗಳಿಗೆ ಚಿಕ್ಕಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಶಿವರಾಜ ಚೆಂಗಟಿ, ವಕೀಲರಾದ ಬಬ್ಬರ್ ಉಪಸ್ಥಿತರಿದ್ದರು.

Continue Reading

ದಿಗ್ಗಾಂವ ಗ್ರಾಮದ 120 ಮನೆಗಳಲ್ಲಿ ನುಗ್ಗಿದ ಮಳೆ ನೀರು, ತಹಸೀಲ್ದಾರ್ ಭೇಟಿ

ಚಿತ್ತಾಪುರ: ಮಂಗಳವಾರ ರಾತ್ರಿ ಸುರಿದ ಮಳೆಯಿಂದ ದಿಗ್ಗಾಂವ ಗ್ರಾಮದ 110 ರಿಂದ 120 ಮನೆಯೊಳಗೆ ಹಳ್ಳದ ನೀರು ನುಗ್ಗಿದೆ, ಇದರಿಂದ ಅಪಾರ ಪ್ರಮಾಣದ ಆಹಾರ ಸಾಮಗ್ರಿಗಳು ಹಾಳಾಗಿವೆ. ತಾಲೂಕಿನ ದಿಗ್ಗಾಂವ ಗ್ರಾಮಕ್ಕೆ ತಹಸೀಲ್ದಾರ್ ನಾಗಯ್ಯಹಿರೇಮಠ ಭೇಟಿ ನೀಡಿದರು. ಗ್ರಾಮದ ಸುಮಾರು 110 ರಿಂದ 120 ಮನೆಗಳಲ್ಲಿ ಮಳೆ ನೀರು ನುಗ್ಗಿದೆ, ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆನೆ, ಹಾನಿಯಾದವರಿಗೆ ಸರ್ಕಾರದ ವತಿಯಿಂದ ಸಿಗಬೇಕಾದ ಪರಿಹಾರ ಕೊಡಲಾಗುವದು ಎಂದರು. ಚಿತ್ತಾಪುರ ವ್ಯಾಪ್ತಿಯಲ್ಲಿ 53.6 ಎಂಎಂ, ನಾಲವಾರದಲ್ಲಿ 20.2 ಎಂಎಂ, […]

Continue Reading

ತಾಯಿಯ ಸ್ಮರಣಾರ್ಥ ಮಕ್ಕಳಿಗೆ ಪಾಟಿ (ಸ್ಲೇಟು) ವಿತರಣೆ

ಕಾಳಗಿ: ಅಂಗನವಾಡಿ ಕಾರ್ಯಕರ್ತೆ ಪವಿತ್ರ ಪಾಟೀಲ ಅವರ ತಾಯಿಯ ಸ್ಮರಣಾರ್ಥ ಮಕ್ಕಳಿಗೆ ಪಾಟಿ (ಸ್ಲೇಟು) ವಿತರಿಸಿದರು. ತಾಲೂಕಿನ ತೆಂಗಳಿ ಗ್ರಾಮದ ಅಂಗನವಾಡಿ ಕೇಂದ್ರ – 1 ರ ಹಿಂದಿನ ಅಂಗನವಾಡಿ ಕಾರ್ಯಕರ್ತೆ ದಿ. ಹೀರಾಬಾಯಿ ಪಾಟೀಲ ಅವರ ಪ್ರಥಮ ಪುಣ್ಯ ಸ್ಮರಣೆ ನಿಮಿತ್ಯ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪಾಟಿ (ಸ್ಲೇಟು), ಪೆಣಿ ವಿತರಿಸಿ ಮಕ್ಕಳಿಗೆ ಸಿಹಿ ಹಂಚಲಾಯಿತು ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಸಹಾಯಕಿ ಕಸ್ತೂರಿಬಾಯಿ ಉಪಸ್ಥಿತರಿದ್ದರು.

Continue Reading

ಮಕ್ಕಳಿಗೆ ಪೌಷ್ಟಿಕ ಆಹಾರ ತುಂಬಾ ಅವಶ್ಯಕ: ಆರತಿ ತುಪ್ಪದ

ಚಿತ್ತಾಪುರ: ಗ್ರಾಮೀಣ ಭಾಗದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಸಿಡಿಪಿಓ ಆರತಿ ತುಪ್ಪದ ಹೇಳಿದರು. ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಲೂಕಾ ಆಡಳಿತ ಮತ್ತು ಶಿಶು ಅಭಿವೃದ್ಧಿ ಅಭಿವೃದ್ಧಿ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಅಂಗನವಾಡಿ ಕೇಂದ್ರದಲ್ಲಿ ದಿನಾಲೂ ಒಂದೊಂದು ಕಾರ್ಯಕ್ರಮ ಮಾಡುತ್ತೆವೆ, ಅಂಗನವಾಡಿ ಸ್ವಚ್ಛತೆ ಬಗ್ಗೆ, ಮಗುವಿನ ಆರೈಕೆ ಬಗ್ಗೆ ಮಗುವಿನ ತೂಕ ಹಾಕುವದು ಎಂದರು. ತಾಯಂದಿರ […]

Continue Reading

ಚಿತ್ತಾಪುರ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳ ಆಯ್ಕೆ

ಚಿತ್ತಾಪುರ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಹೇಳಿದರು. ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ತಾಲೂಕಾ ಕಾರ್ಯಕಾರಿ ಸಮಿತಿ ಸಭೆ ಕರೆದು ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳುತಾಲೂಕು ಘಟಕ: ಶಾಂತಣ್ಣ ಚಾಳೀಕಾರ ಅಳ್ಳೋಳ್ಳಿ, ಬಸವರಾಜ ಕಿರಣಗಿ, ವೆಂಕಟಮ್ಮ ಪಾಲಪ್ (ಉಪಾಧ್ಯಕ್ಷರು), ಆನಂದ ಪಾಟೀಲ ನರಿಬೋಳ (ಪ್ರಧಾನ ಕಾರ್ಯದರ್ಶಿ), ಈಶ್ವರ ಬಾಳಿ ರಾವೂರ, ಪ್ರಸಾದ […]

Continue Reading

ಮಾಡಬೂಳ: ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಚಿತ್ತಾಪುರ: ಮಾಡಬೂಳ ಗ್ರಾಮ ಪಂಚಾಯತ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸಿಡಿಪಿಓ ಆರತಿ ತುಪ್ಪದ, ಮೇಲ್ವಿಚಾರಕಿ ಶೀಲಾದೇವಿ ಅರಸ, ಗ್ರಾ.ಪಂ ಸದಸ್ಯರಾದ ರವಿ ಮಾಡಬೂಳ, ಲಕ್ಷ್ಮಿ ಪೂಜಾರಿ, ಕರ ವಸೂಲಿಗಾರ ರಮೇಶ ಶ್ರಿಗನ್, ಅಂಗನವಾಡಿ ಕಾರ್ಯಕರ್ತೆ ನಾಗಮ್ಮ, ಸಹಾಯಕಿ ವಿಜಯಲಕ್ಷ್ಮಿ ಆರೋಗ್ಯ ಕಾರ್ಯಕರ್ತೆ ಸಾವಿತ್ರಿ ಹಿರಿಮನಿ, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಹಾಲುಬಾಯಿ ಮಾಡಬೂಳಕರ್, ಬಾಲ ವಿಕಾಸ ಸಮಿತಿಯ ಸದಸ್ಯೆ ರೇಷ್ಮಾ ಚಂದ್ರಶೇಖರ, ಸ್ತ್ರೀಶಕ್ತಿ ಸಂಘದ ಸದಸ್ಯರಾದ ಸಮುದ್ರಬಾಯಿ ದೇವಿಂದ್ರ, ರೇಷ್ಮಾ ಉತ್ತಮಕುಮಾರ, ಪಾರ್ವತಿ […]

Continue Reading

ಮಳೆಗೆ ಧರೆಗುರುಳಿದ ಐತಿಹಾಸಿಕ ಮಳಖೇಡ ಕೋಟೆ

ಕಲಬುರಗಿ: ಸೇಡಂ ತಾಲೂಕಿನ ಮಳಖೇಡ ಗ್ರಾಮದ ಐತಿಹಾಸಿಕ ಕೋಟೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಧರೆಗುರುಳಿದೆ. ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆಯ ಗೋಡೆಗಳಲ್ಲಿ ನೀರು ನಿಂತಿದೆ. ಶುಕ್ರವಾರ ರಾತ್ರಿಯಿಂದ ಮಳೆ ಆರಂಭಗೊಂಡಿದ್ದು ಶನಿವಾರವೂ ಮಳೆ ಮುಂದುವರೆದಿದೆ. ನಿಂರತ ಮಳೆಗೆ ಕೋಟೆ ಗೋಡೆಗಳು ತೇವಗೊಂಡಿದ್ದು, ಏಕಾಏಕಿ ನೀರು ಧುಮ್ಮಿಕ್ಕಿ ಬರುವಂತೆ ಕೋಟೆ ದಿಢೀರ್ ಕುಸಿದಿದೆ. ಇದರಿಂದ ಪಕ್ಕದಲ್ಲಿದ್ದ ನಿವಾಸಿಗಳು ಆತಂಕಗೊಂಡು, ಬೆಚ್ಚಿಬಿದ್ದಿದ್ದಾರೆ. ಕೋಟೆ ಪಕ್ಕದಲ್ಲೇ ಇರುವ ಶೌಚಾಲಯ ಕಡೆಗೆ ಮಹಿಳೆಯರು ತೆರಳುತ್ತಿದ್ದರು. ಕೋಟೆ […]

Continue Reading

ದಂಡಗುಂಡ ಬಸವಣ್ಣ ದೇವಸ್ಥಾನ ನಿರ್ಮಾಣಕ್ಕೆ 3 ಕೋಟಿ ಖರ್ಚು

ಚಿತ್ತಾಪುರ: ಧಾರ್ಮಿಕ ಕ್ಷೇತ್ರ ದಂಡಗುಂಡ ಬಸವಣ್ಣ ದೇವಸ್ಥಾನದ ಹಳೆಯ ಕಟ್ಟಡ ತೆರವುಗೊಳಿಸಿ ಹೊಸ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಈವರೆಗೂ 3 ಕೋಟಿ ಖರ್ಚಾಗಿದೆ. ಭಕ್ತರ ದೇಣಿಗೆ, ದಂಡಗುಂಡ ಗ್ರಾಮಸ್ಥರ ಸಹಕಾರ, ಬಸವಣ್ಣನ ಭಕ್ತರ ನೆರವಿನಿಂದ ಯಾವುದೇ ಅಡೆತಡೆಯಿಲ್ಲದೆ ಕಾಮಗಾರಿ ನಡೆಯುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಜಿ ಪಾಟೀಲ ಹೇಳಿದರು. ತಾಲೂಕಿನ ದಂಡಗುಂಡ ಗ್ರಾಮದ ಬಸವಣ್ಣ ದೇವಸ್ಥಾನದ ಯಾತ್ರಿ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಜಾತ್ರೆಯ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಜಾತ್ರೆ, ಪಲ್ಲಕ್ಕಿ ಉತ್ಸವ ಅತ್ಯಂತ ಯಶಸ್ವಿಯಾಗಿದೆ. […]

Continue Reading