ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇನ್‌ಸ್ಟಾಗ್ರಾಂ ಲಾಗಿನ್ ಸಮಸ್ಯೆ

ನವದೆಹಲಿ: ಇನ್‌ಸ್ಟಾಗ್ರಾಂ ಬಳಕೆದಾರರು ಈಗ ಆಕ್ರೋಶ ಹೊರಹಾಕುತ್ತಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇನ್‌ಸ್ಟಾಗ್ರಾಂ ಡೌನ್ ಆಗಿದೆ. ಬಳಕೆದಾರರು ಖಾತೆಗೆ ಲಾಗಿನ್ ಆಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಸರ್ವರ್ ಸಮಸ್ಯೆ ಕಾಡಿದ್ದು, ವಿಶ್ವದ ಹಲವು ಭಾಗದಲ್ಲಿ ಇನ್‌ಸ್ಟಾಗ್ರಾಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ. ಡೌನ್‌ಡಿಟೆಕ್ಟರ್ ವರದಿ ಪ್ರಕಾರ, ಬೆಳಗ್ಗೆ 19.37ರ ಸುಮಾರಿಗೆ ಇನ್‌ಸ್ಟಾಗ್ರಾಂ ಸರ್ವರ್ ಸಮಸ್ಯೆ ಕಾಣಿಸಿಕೊಂಡು ಲಾಗಿನ್ ಆಗಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. 1 ಸಾವಿರಕ್ಕೂ ಹೆಚ್ಚು ರಿಪೋರ್ಟ್ಸ್ ಬೆಳಗ್ಗೆ 10.45ರ ವೇಳೆಗೆ ಇನ್‌ಸ್ಟಾಗ್ರಾಂ ಸಮಸ್ಯೆ […]

Continue Reading

ಶಿವಾನಂದ ತಗಡೂರು ಅವರ ಕೋವಿಡ್ ಕಥೆಗಳು ಕೃತಿಗೆ ಅಮ್ಮ ವಿಶೇಷ ಪುರಸ್ಕಾರ

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ ವಿಶೇಷ ಪುರಸ್ಕಾರವು ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಅವರ ಕೋವಿಡ್ ಕಥೆಗಳು ಕೃತಿಗೆ ಲಭಿಸಿದೆ ಎಂದು ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಾಧ್ಯಮ ರಂಗದಲ್ಲಿ ತುಂಬಾ ಪರಿಣಾಮ ಬೀರಿರುವ ಪುಸ್ತಕ `ಕೋವಿಡ್ ಕಥೆಗಳು’ ತೀರಾ ಭಿನ್ನವಾಗಿ ಮೂಡಿದೆ. ಕೊರೋನಾ ಕಾಲಘಟ್ಟದಲ್ಲಿ ಆಗಿರುವ ಸಾವು-ನೋವು ಕಥೆಗಳನ್ನೊಳಗೊಂಡ ಈ ಕೃತಿ […]

Continue Reading

ಗಾಣಗಾಪುರ: ದತ್ತ ದೇಗುಲದ ಅರ್ಚಕರ ಮಧ್ಯೆ ಹೊಡೆದಾಟ

ಕಲಬುರಗಿ: ಅಫಜಲಪುರ ತಾಲೂಕಿನ ಗಾಣಗಾಪುರದ ಪ್ರಸಿದ್ಧ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದ ಅರ್ಚಕರಾದ ಕಿರಣ ಪೂಜಾರಿ ಹಾಗೂ ವಲ್ಲಭ ಪೂಜಾರಿ ದೇವಸ್ಥಾನದ ಗರ್ಭಗುಡಿಯೊಳಗೆ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಗೌರಿ ಹುಣ್ಣಿಮೆಯಂದು ದತ್ತಾತ್ರೇಯ ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ಲೈನ್ ಬಿಡುವ ವಿಚಾರದಲ್ಲಿ ಇಬ್ಬರ ಮಧ್ಯೆ ನಾ ಮುಂದು – ತಾ ಮುಂದು ಎನ್ನುವ ವಿಚಾರಕ್ಕೆ ಜಗಳ ನಡೆದಿದೆ, ತಮ್ಮ ಕಡೆಯ ಭಕ್ತರಿಗೆ ಮೊದಲು ಬಿಡಬೇಕು, ಇಲ್ಲಾ ನಮ್ಮ ಕಡೆಯ ಭಕ್ತರಿಗೆ ಮೊದಲು ಬಿಡಬೇಕು ಎಂಬ ವಿಚಾರದಲ್ಲಿ ವಾಗ್ವಾದ […]

Continue Reading

ಸಂಗೀತದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ: ವೀರೆಂದ್ರಕುಮಾರ ಕೊಲ್ಲೂರು

ಚಿತ್ತಾಪುರ: ಸಂಗೀತ ಆಲಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವೀರೆಂದ್ರಕುಮಾರ ಕೊಲ್ಲೂರು ಹೇಳಿದರು. ಪಟ್ಟಣದ ಕನಕ ಭವನದಲ್ಲಿ ಸೇಡಂ’ನ ಸರಸ್ವತಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಸಂಗೀತ ವೈಭವ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಎಲ್ಲಾ ಕಲೆಗಳಲ್ಲಿ ಸಂಗೀತ ಕಲೆ ಬಹಳ ವಿಶಿಷ್ಟವಾಗಗಿದ್ದು, ಸಂಗೀತ ಎಂದರೆ ಎಲ್ಲರು ಇಷ್ಟಪಡುತ್ತಾರೆ ಹೀಗಾಗಿ ಸಂಗೀತಕ್ಕೆ ಬಹಳ […]

Continue Reading

ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಜಾರಿ ಮಾಡಲಾಗಿರುವ ನೋಟಿಸಗಳು ಹಿಂಪಡೆಯಲಾಗಿದೆ: ತಹಸೀಲ್ದಾರ್

ಚಿತ್ತಾಪುರ: ಸರ್ಕಾರದ ಅಪರ ಕಾರ್ಯಾದರ್ಶಿ ಕಂದಾಯ ಇಲಾಖೆ ಭೂ ಮಂಜೂರಾತಿ ಭೂ ಸುಧಾರಣೆ ಮತ್ತು ಭೂ ಕಂದಾಯ ಬೆಂಗಳೂರು ಇವರ ಆದೇಶದಂತೆ ಚಿತ್ತಾಪುರ ತಾಲೂಕಿನ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಜಾರಿ ಮಾಡಲಾಗಿರುವ ನೋಟಿಸಗಳನ್ನು ಹಿಂಪಡೆಯಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ. ತಾಲೂಕಿನ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ, ತಾಲೂಕಿನಲ್ಲಿ 49 ಸರ್ವೆ ನಂಬರ್ಸ್ ರೈತರಿಗೆ ನೋಟಿಸ್ ನೀಡಲಾಗಿತ್ತು. ಕೊಟ್ಟಿರುವ ನೋಟಿಸ್’ಗಳನ್ನು ಸರಕಾರದ ನಿರ್ದೆಶನದಂತೆ ಹಿಂಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಫೋನ್’ನಲ್ಲಿ ಈ ಸೆಟ್ಟಿಂಗ್ಸ್ ಮಾಡಿ: ನಿಮ್ಮ ವಾಟ್ಸಪ್​ ಚಾಟ್ ಯಾರು ನೋಡಲು ಸಾಧ್ಯವಿಲ್ಲ

ನಾವು ಯಾರದೆ ಕೈಯಲ್ಲಿ ಫೋನ್ ಕೊಟ್ಟರು ವಾಟ್ಸಪ್ ಚಾಟ್ ನೋಡಬಹುದು. ಆದರೆ ನಾವು ಹೇಳುವ ಈ ಸೆಟ್ಟಿಂಗ್ಸ್ ಮಾಡಿದರೆ ಯಾರದೆ ಕೈಯಲ್ಲಿ ಫೋನ್ ಕೊಟ್ಟರು ವಾಟ್ಸಪ್ ಚಾಟ್ ನೋಡಲು ಸಾಧ್ಯವಿಲ್ಲ. ವಾಟ್ಸಪ್ ಅಪ್ಲಿಕೇಶನ್‌ನಲ್ಲಿ ನಾವು ಚಾಟ್ ಮಾಡಿರುವದು ಚಾಟ್ ಲಾಕ್ ಎಂಬ ವೈಶಿಷ್ಟ್ಯದ ಮೂಲಕ ನಿಮ್ಮ ಖಾಸಗಿ ಚಾಟ್ ಅನ್ನು ಲಾಕ್ ಮಾಡಬಹುದು, ಇದು ಈ ವೈಶಿಷ್ಟ್ಯದ ಕಾರ್ಯವಾಗಿದೆ. ನಿಮ್ಮ ಫೋನ್‌ ಎಲ್ಲಾದರು ಇಟ್ಟು ಹೋಗಿದ್ದರೆ, ನಿಮ್ಮ ಫೋನ್‌ ಪಾಸ್‌ವರ್ಡ್‌ನೊಂದಿಗೆ ಲಾಕ್ ಆಗಿರುವ ಚಾಟ್ ಅನ್ನು ಯಾರು […]

Continue Reading

10 ಕೃತಿಗಳಿಗೆ ಅಮ್ಮ ಪ್ರಶಸ್ತಿ ಪ್ರದಾನ

ಕಲಬುರಗಿ: ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯ ಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಗೆ ನಾಡಿನ ಹತ್ತು ಸಾಹಿತಿಗಳ ಕೃತಿಗಳು ಆಯ್ಕೆಯಾಗಿವೆ ಎಂದು ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ವಿದ್ಯಾರಶ್ಮಿ ಪೆಲತ್ತಡ್ಕ (ಕೆರೆ-ದಡ), ಪ್ರಭಾವತಿ ದೇಸಾಯಿ (ಸೆರಗಿಗಂಟಿದ ಕಂಪು), ವೀರೇಂದ್ರ ರಾವಿಹಾಳ್ (ಡಂಕಲ್ ಪೇಟೆ), ಪೂರ್ಣಿಮಾ ಮಾಳಗಿಮನಿ (ಮ್ಯಾಜಿಕ್ ಸೌಟು), ದ್ವಾರನಕುಂಟೆ ಪಾತಣ್ಣ (ರಾಣಿ ಅಹಲ್ಯಾಬಾಯಿ ಹೋಳ್ಕರ್), ಗುರುಪ್ರಸಾದ ಕಂಟಲಗೆರೆ (ಅಟ್ರಾಸಿಟಿ), ಡಾ.ಪರವಿನ ಸುಲ್ತಾನಾ (ಶರಣರ ನಾಡಿನ ಸೂಫಿ ಮಾರ್ಗ), […]

Continue Reading

ನೇತ್ರಾದಾನ ಮಾಡಿದ ಕಾಂಗ್ರೆಸ್ ಯುವ ಅಧ್ಯಕ್ಷ ಸಂಜಯ ಬುಳಕರ

ಚಿತ್ತಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಐಟಿಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿ ಹಾಗೂ ಚಿತ್ತಾಪುರ ಯುವ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬುಳಕರ ಅವರು ನೇತ್ರಾದಾನ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಐಟಿಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ 46ನೇ ಹುಟ್ಟು ಹಬ್ಬವು ನ.22 ರಂದು ಇರುವ ಪ್ರಯುಕ್ತ ಅವರ ಅಭಿಮಾನಿ ಹಾಗೂ ಚಿತ್ತಾಪುರ […]

Continue Reading

ನಗ್ನ ಫೋಟೋ ಕಳಿಸುವಂತೆ ಕಿರುಕುಳ ಆರೋಪ, ಪಿಎಸ್ಐ ವಿರುದ್ಧ ಕಮಿಷನರ್‌ಗೆ ದೂರು ನೀಡಿದ ವೈದ್ಯೆ

ಬೆಂಗಳೂರು: ಯುವ ವೈದ್ಯೆಗೆ ನಗ್ನ ಫೋಟೋ ಕಳುಹಿಸುವಂತೆ ಕಿರುಕುಳ ನೀಡಿರುವದಲ್ಲದೆ, ನಿರಾಕರಣೆ ಮಾಡಿದ್ದಕ್ಕೆ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಗಂಭೀರ ಆರೋಪ ಪಿಎಸ್ಐ ವಿರುದ್ಧ ಕೇಳಿ ಬಂದಿದೆ. ಬಸವನಗುಡಿ ಪೊಲೀಸ್ ಠಾಣೆ ಪಿಎಸ್ಐ ರಾಜಕುಮಾರ ಎಸ್ ಜೋಡಟ್ಟಿ ವಿರುದ್ದ ಖಾಸಗಿ ಆಸ್ಪತ್ರೆ ವೈದ್ಯೆಯೊಬ್ಬರು ದೂರು ನೀಡಿದ್ದಾರೆ, ತನಗೆ ನ್ಯಾಯ ಕೊಡಿಸುವಂತೆ ಪೊಲೀಸ್ ಕಮಿಷನರ್ ಬಿ ದಯಾನಂದ ಅವರಿಗೆ ನೊಂದ ವೈದ್ಯೆ ಮನವಿ ಮಾಡಿದ್ದಾರೆ. ಘಟನೆಯ ವಿವರ: ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಸಂತ್ರಸ್ತ ಯುವತಿ ಬಸವನಗುಡಿ […]

Continue Reading

ಓದುವ ಬೆಳಕು ಕಾರ್ಯಕ್ರಮ ಪ್ರಾರಂಭ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅರಿವು ಕೇಂದ್ರಗಳಲ್ಲಿ, ಮಕ್ಕಳು ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಓದುವ ಬೆಳಕು ಕಾರ್ಯಕ್ರಮ ಪ್ರಾರಂಭಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ . ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಶಾಲಾ ಮಕ್ಕಳನ್ನು ವ್ಯವಸ್ಥಿತವಾಗಿ ಕಲಿಕಾ ಕ್ಷೇತ್ರಕ್ಕೆ ಮರಳಿ ತರುವ ಹಾಗೂ ನಿರಂತರತೆಯನ್ನು ಕಾಪಾಡುವ ಗುರಿಯನ್ನು ಹೊಂದಲಾಗಿದೆ. ನವೆಂಬರ್ 14 ರ ಮಕ್ಕಳ ದಿನಾಚರಣೆ ಹಾಗೂ ನವೆಂಬರ್ 20 ರ ಅಂತಾರಾಷ್ಟ್ರೀಯ ಮಕ್ಕಳ […]

Continue Reading