ಚಿತ್ತಾಪುರ: ಸರ್ಕಾರದ ಅಪರ ಕಾರ್ಯಾದರ್ಶಿ ಕಂದಾಯ ಇಲಾಖೆ ಭೂ ಮಂಜೂರಾತಿ ಭೂ ಸುಧಾರಣೆ ಮತ್ತು ಭೂ ಕಂದಾಯ ಬೆಂಗಳೂರು ಇವರ ಆದೇಶದಂತೆ ಚಿತ್ತಾಪುರ ತಾಲೂಕಿನ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಜಾರಿ ಮಾಡಲಾಗಿರುವ ನೋಟಿಸಗಳನ್ನು ಹಿಂಪಡೆಯಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ತಾಲೂಕಿನ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ, ತಾಲೂಕಿನಲ್ಲಿ 49 ಸರ್ವೆ ನಂಬರ್ಸ್ ರೈತರಿಗೆ ನೋಟಿಸ್ ನೀಡಲಾಗಿತ್ತು. ಕೊಟ್ಟಿರುವ ನೋಟಿಸ್’ಗಳನ್ನು ಸರಕಾರದ ನಿರ್ದೆಶನದಂತೆ ಹಿಂಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.