ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇನ್‌ಸ್ಟಾಗ್ರಾಂ ಲಾಗಿನ್ ಸಮಸ್ಯೆ

ರಾಷ್ಟೀಯ ಸುದ್ದಿ ಸಂಗ್ರಹ ವಿಶೇಷ

ನವದೆಹಲಿ: ಇನ್‌ಸ್ಟಾಗ್ರಾಂ ಬಳಕೆದಾರರು ಈಗ ಆಕ್ರೋಶ ಹೊರಹಾಕುತ್ತಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇನ್‌ಸ್ಟಾಗ್ರಾಂ ಡೌನ್ ಆಗಿದೆ. ಬಳಕೆದಾರರು ಖಾತೆಗೆ ಲಾಗಿನ್ ಆಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಸರ್ವರ್ ಸಮಸ್ಯೆ ಕಾಡಿದ್ದು, ವಿಶ್ವದ ಹಲವು ಭಾಗದಲ್ಲಿ ಇನ್‌ಸ್ಟಾಗ್ರಾಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ.

ಡೌನ್‌ಡಿಟೆಕ್ಟರ್ ವರದಿ ಪ್ರಕಾರ, ಬೆಳಗ್ಗೆ 19.37ರ ಸುಮಾರಿಗೆ ಇನ್‌ಸ್ಟಾಗ್ರಾಂ ಸರ್ವರ್ ಸಮಸ್ಯೆ ಕಾಣಿಸಿಕೊಂಡು ಲಾಗಿನ್ ಆಗಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. 1 ಸಾವಿರಕ್ಕೂ ಹೆಚ್ಚು ರಿಪೋರ್ಟ್ಸ್ ಬೆಳಗ್ಗೆ 10.45ರ ವೇಳೆಗೆ ಇನ್‌ಸ್ಟಾಗ್ರಾಂ ಸಮಸ್ಯೆ ಕುರಿತು ಉಲ್ಲೇಖಿಸಿದೆ.

ಇನ್‌ಸ್ಟಾಗ್ರಾಂ ಡೌನ್ ಕುರಿತು ಬಳಕೆದಾರರು ದೂರು ನೀಡುತ್ತಿದ್ದಾರೆ. ಈ ಪೈಕಿ ಶೇ. 42 ರಷ್ಟು ಬಳಕೆದಾರರು ಇನ್‌ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಇನ್ನು ಶೇ. 39 ರಷ್ಟು ಬಳಕೆದಾರರು ಸರ್ವರ್ ಕನೆಕ್ಷನ್ ಸಮಸ್ಯೆ ಎದುರಿಸುತ್ತಿದ್ದರೆ, ಶೇ. 19 ರಷ್ಟು ಜನ ಆಯಪ್ ಸಂಬಂಧಿತ ಸಮಸ್ಯೆ ಎದುರಾಗಿದೆ ಎಂದು ವರದಿ ಮಾಡಿದ್ದಾರೆ. ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ಬಳಕೆದಾರರು ಎಕ್ಸ್ ಮೂಲಕ ಕಮೆಂಟ್ ಮಾಡಿದ್ದಾರೆ.

ಲಾಗಿನ್ ಸಮಸ್ಯೆ ಎದುರಿಸಿದ ಹಲವು ಬಳಕೆದಾರರು ಹೊಸ ಲಾಗಿನ್ ಪಾಸ್‌ವರ್ಡ್ ಹಾಕಿದ್ದಾರೆ. ಫಾರ್ಗೆಟ್ ಪಾಸ್‌ವರ್ಡ್ ಮೂಲಕ ಹೊಸ ಪಾಸ್‌ವರ್ಡ್ ಕ್ರಿಯೇಟ್ ಮಾಡಿದ್ದಾರೆ. ಆದರೂ ಲಾಗಿನ್ ಆಗಲು ಸಾಧ್ಯವಾಗಿಲ್ಲ. ಒಂದೆರೆಡು ಬಾರಿ ಹೊಸ ಪಾಸ್‌ವರ್ಡ್ ಹಾಕಿರುವ ಬಳಕೆದಾರರು ಇದೀಗ ಯಾವ ಪಾಸ್‌ವರ್ಡ್ ಮೂಲಕ ಒಪನ್ ಮಾಡುವುದು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಟ್ವಿಟರ್ ಸೇರಿದಂತೆ ಇತರ ಸೋಶಿಯಲ್ ಮೀಡಿಯಾ ಮೂಲಕ ಇನ್‌ಸ್ಟಾಗ್ರಾಂ ಬಳಕೆದಾರರು ಸ್ಪಷ್ಟನೆ ಕೇಳಿದ್ದಾರೆ.

ವಿಶ್ವಾದ್ಯಂತ ಇನ್‌ಸ್ಟಾಗ್ರಾಂ ಡೌನ್ ಆಗಿದೆ. ಆದರೆ ಮೆಟಾ ಮಾತ್ರ ಫುಲ್ ಬ್ಯೂಸಿಯಾಗಿದೆ. ಕನಿಷ್ಠ ಇನ್‌ಸ್ಟಾಗ್ರಾಂ ಡೌನ್ ಅನ್ನೋ ಸಂದೇಶವನ್ನೂ ನೀಡಿಲ್ಲ ಎಂದು ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ. ಇನ್‌ಸ್ಟಾಗ್ರಾಂಗೆ ಏನಾಗಿದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್‌ಸ್ಟಾಗ್ರಾಂ ಮ್ಯೂಸಿಕ್ ಫೀಚರ್ ಡೌನ್ ಆಗಿದೆ ಕೆಲವರು ದೂರಿದ್ದಾರೆ.

ಇನ್‌ಸ್ಟಾಗ್ರಾಂ ಡೌನ್ ಆದಾಗ ಏನು ಮಾಡಬೇಕು ?

ಈ ಬಾರಿ ಹೆಚ್ಚಿನ ಇನ್‌ಸ್ಟಾಗ್ರಾಂ ಬಳಕೆದಾರರು ಲಾಗಿನ್ ಸಮಸ್ಯೆ ಎದುರಿಸುತ್ತಿದ್ದಾರೆ. ಈ ರೀತಿ ಇನ್‌ಸ್ಟಾಗ್ರಾಂ ಡೌನ್ ಸಮಸ್ಯೆ ಎದುರಾದಾಗ ತಕ್ಷಣವೇ ಬದಲಾವಣೆ ಮಾಡಲು, ಲಾಗಿನ್ ಆಗಲು ಪ್ರಯತ್ನಿಸಬೇಡಿ. ಇದಕ್ಕಿದ್ದಂತೆ ಲಾಗಿನ್ ಪಾಸ್‌ವರ್ಡ್ ಕೇಳಿದಾಗ ನೀವು ಸರಿಯಾದ ಪಾಸ್‌ವರ್ಡ್ ಹಾಕಿದರೂ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಸರ್ವರ್ ಸಮಸ್ಯೆಗಳು ಕಾಣಿಸಿಕೊಂಡಿರುವ ಕಾರಣ ಬಳಕೆದಾರರಿಗೆ ತಮ್ಮ ತಮ್ಮ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಜನರು, ಫಾರ್ಗೆಟ್ ಪಾಸ್‌ವರ್ಡ್ ಮೂಲಕ ಅಥವಾ ಹೊಸ ಪಾಸ್‌ವರ್ಡ್ ಹಾಕಿ ಖಾತೆ ತೆರೆಯುವ ಪ್ರಯತ್ನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಇದಕ್ಕಿಂತ ಕೆಲ ಹೊತ್ತು ಇನ್‌ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗುವ ಪ್ರಯತ್ನ ಮಾಡಬೇಡಿ ಅಥವಾ ಇನ್‌ಸ್ಟಾಗ್ರಾಂ ಖಾತೆಯನ್ನು ಬಳಸಬೇಡಿ. ಸರ್ವರ್ ಅಥವಾ ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಬಳಕೆದಾರರು ಯಾವುದೇ ಸಮಸ್ಯೆ ಇಲ್ಲದೆ ಬಳಕೆ ಮಾಡಲು ಸಾಧ್ಯವಿದೆ. ತಾಳ್ಮೆಯಿಂದ ಕೆಲ ಹೊತ್ತು ಆಪ್ ಬಳಕೆ ಮಾಡಬೇಡಿ, ಲಾಗಿನ್ ಅಥವಾ ಇನ್ಯಾವುದೇ ಪಾಸ್‌ವರ್ಡ್ ಒಟಿಪಿ ಕೇಳಿದರೂ ದಾಖಲಿಸಿ ಲಾಗಿನ್ ಆಗುವ ಪ್ರಯತ್ನ ಮಾಡಬೇಡಿ. ಸರ್ವರ್ ಸಮಸ್ಯೆ ಪರಿಹರಿಸಿದ ಬಳಿಕ ಇನ್‌ಸ್ಟಾಗ್ರಾಂ ಆಪ್ ಬಳಕೆ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಹೀಗಾಗಿ ಡೌನ್ ಆಗಿದೆ ಎಂದ ತಕ್ಷಣ ಆಪ್ ಬಳಕೆ ನಿಲ್ಲಿಸಿ.

Leave a Reply

Your email address will not be published. Required fields are marked *